Congress ರಾಜ್ಯದ ಹಗರಣ ಕಳಂಕಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಗರಂ!

ದಿಲ್ಲಿಯಲ್ಲಿ ಕಾಂಗ್ರೆಸ್‌ ವರಿಷ್ಠರನ್ನು ಭೇಟಿಯಾದ ಸಿಎಂ, ಡಿಸಿಎಂ

Team Udayavani, Jul 31, 2024, 6:55 AM IST

Congress ರಾಜ್ಯದ ಹಗರಣ ಕಳಂಕಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಗರಂ!

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಅದರಿಂದ ಸರಕಾರಕ್ಕೆ ಉಂಟಾ
ಗುತ್ತಿರುವ ಹಾನಿಯ ಬಗ್ಗೆ ನಿರೀಕ್ಷೆಯಂತೆ ಸಿಎಂ-ಡಿಸಿಎಂ ಮುಂದೆ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಒಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಅದಕ್ಕೆ ಸಂಬಂಧಿಸಿ ಸಚಿವರೊಬ್ಬರ ತಲೆದಂಡ, ಬೆನ್ನಲ್ಲೇ ಮುಡಾ ಹಗರಣ ಪಡೆದುಕೊಳ್ಳುತ್ತಿರುವ ತಿರುವು, ಇದರ ಮಧ್ಯೆ ಸಿಎಂ ತವರು ಜಿಲ್ಲೆ ಮೈಸೂರಿಗೆ ವಿಪಕ್ಷಗಳ ಪಾದಯಾತ್ರೆ ತಯಾರಿ; ಈ ಎಲ್ಲ ಬೆಳವಣಿಗೆಗಳ ನಡುವೆ ದಿಲ್ಲಿಗೆ ಬರುವಂತೆ ಸಿಎಂ-ಡಿಸಿಎಂಗೆ ಬುಲಾವ್‌ ಬಂದಿತ್ತು. ಮಂಗಳವಾರ ಇಬ್ಬರೂ ನಾಯಕರು ಹೈಕಮಾಂಡ್‌ ಭೇಟಿಯಾಗಿದ್ದಾರೆ.

ಈ ವೇಳೆ ಸರಕಾರದ ಕಾರ್ಯವೈಖರಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

5 ಉಚಿತ ಗ್ಯಾರಂಟಿಗಳನ್ನು ನೀಡಲಾಗಿದೆ. ಅದಕ್ಕಾಗಿ 52 ಸಾವಿರ ಕೋಟಿ ರೂ. ಕೊಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹೇಳಿದವರಿಗೆ ಟಿಕೆಟ್‌ ಕೊಟ್ಟಿದ್ದು, ಬಹುತೇಕರು ಸಚಿವರ ಸಂಬಂಧಿಕರೇ ಇದ್ದರು. ಆದಾಗ್ಯೂ ನಿರೀಕ್ಷಿತ ಫ‌ಲಿತಾಂಶ ಬರಲಿಲ್ಲ. ಈ ಮಧ್ಯೆ ಅಲ್ಪಾವಧಿಯಲ್ಲಿ ಹಗರಣಗಳ ಆರೋಪ ಕೇಳಿಬರುತ್ತಿದೆ. ಈ ಬೆಳವಣಿಗೆಗಳು ಪಕ್ಷಕ್ಕೂ ಮುಜುಗರ ಉಂಟು ಮಾಡುತ್ತಿವೆ ಎಂದು ರಾಜ್ಯ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಒಳ ಏಟು ಕಾರಣ: ಸಮಜಾಯಿಷಿ
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಆದರೆ 9 ಸ್ಥಾನಕ್ಕೆ ಸೀಮಿತ ಆಗಬೇಕಾಯಿತು. ಪಕ್ಷದಲ್ಲಿ ಒಳ ಏಟು, ಕೊನೆಯ ಕ್ಷಣದಲ್ಲಿ ವಿಪಕ್ಷಗಳ ಮೈತ್ರಿ ಹಾಗೂ ಅವುಗಳ ಸಂಘಟಿತ ಹೋರಾಟ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿತು. ಹಾಗೆಂದು ಇದೇನೂ ಕಳಪೆ ಅಲ್ಲ. ಕೇವಲ ಒಂದು ಸ್ಥಾನದಿಂದ ಒಂಭತ್ತಕ್ಕೆ ನಾವು ಏರಿಕೆಯಾಗಿದ್ದೇವೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮರ್ಥನೆ ನೀಡಿದರು ಎನ್ನಲಾಗಿದೆ.

ಹಗರಣಗಳೇ ಇಲ್ಲದಿದ್ದರೂ ಸುಳ್ಳು ಆರೋಪಗಳ ಮೂಲಕ ವಿಪಕ್ಷಗಳು ಹುಯಿಲೆಬ್ಬಿಸುತ್ತಿವೆ. ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಕೂಡ ಮುಡಾದಲ್ಲಿ ನಿವೇಶನಗಳನ್ನು ಪಡೆದಿರುವ ಬಗ್ಗೆ ದಾಖಲೆಗಳಿವೆ ಎಂದು ಸಮಜಾಯಿಷಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಹೈಕಮಾಂಡ್‌, ದಿಲ್ಲಿಯಿಂದಲೇ ವಿಪಕ್ಷಗಳಿಗೆ ಸೂಚನೆ ಬಂದಿದೆ. ಅದರಂತೆ ಇಲ್ಲದಿರುವುದನ್ನೂ ಇದೆ ಎಂಬಂತೆ ವ್ಯಾಪಕವಾಗಿ ಬಿಂಬಿಸಲಾಗುತ್ತಿದೆ. ಈಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳ ಕೊನೆಯ 2 ದಿನಗಳ ಹೋರಾಟ, ಅಹೋರಾತ್ರಿ ಧರಣಿಯಂತಹ ತಂತ್ರಗಳು ಅದರ ಪರಿಣಾಮಗಳೇ ಆಗಿವೆ. ಆದರೂ ನಿರೀಕ್ಷಿತ ತಿರುಗೇಟು ನೀಡಬಹುದಿತ್ತು ಎಂದು ಹೇಳಿದೆ ಎನ್ನಲಾಗಿದೆ.

ಪುನರಾವರ್ತನೆ ಆಗದಿರಲು ತಾಕೀತು
ಮುಂಬರುವ ದಿನಗಳಲ್ಲಿ ಬಿಬಿಎಂಪಿ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಅಲ್ಲಿಯೂ ಇದು ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಈಗಿನಿಂದಲೇ ಅದಕ್ಕೆ ಸಜ್ಜಾಗಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಮಾಡಿಕೊಡಬಾರದು. ಅಷ್ಟೇ ಅಲ್ಲ, ಸರಕಾರದಲ್ಲಿ ಈ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವಂತೆ ತಾಕೀತು ಮಾಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.