ದುಬಾೖ ನವದಂಪತಿಯ ಸುದೀರ್ಘ‌ ಮಧುಚಂದ್ರ


Team Udayavani, May 24, 2020, 9:25 PM IST

ದುಬಾೖ ನವದಂಪತಿಯ ಸುದೀರ್ಘ‌ ಮಧುಚಂದ್ರ

ಸಾಂದರ್ಭಿಕ ಚಿತ್ರ.

ಮಾಲೆ: ದುಬಾೖ ಮೂಲದ ಖಾಲೀದ್‌ (36) ಮತ್ತು ಪೆರಿ (35) ಪರಸ್ಪರ ಭೇಟಿಯಾಗಿ ಎಂಟು ವರ್ಷಗಳ ಬಳಿಕ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಮಾ. 6ರಂದು ತಮ್ಮ ಬಂಧು-ಬಳಗದ ಸಮ್ಮುಖ ವಿವಾಹವಾಗಿದ್ದರು. ಕೆಲ ದಿನಗಳ ಬಳಿಕ ಅವರು ಮಧುಚಂದ್ರಕ್ಕೆಂದು ಮೆಕ್ಸಿಕೋದ ಕಾನ್‌ಕನ್‌ಗೆ ಹೊರಟರು. ಕೋವಿಡ್‌ ಆಗ ವಿಶ್ವಾದ್ಯಂತ ಹಬ್ಬಿರಲಿಲ್ಲ, ಚಾಚಿರಲಿಲ್ಲ.

ಮಾ. 19ರಂದು ಅವರು ಟರ್ಕಿ ಮೂಲಕ ಯುನೈಟೆಡ್‌ ಅರಬ್‌ ಎಮಿ ರೇಟ್ಸ್‌ (ಯುಎಇ)ನ ತಮ್ಮ ತವರೂರಿಗೆ ಮರಳುತ್ತಿದ್ದಾಗ ಕೋವಿಡ್‌ ವಿಶ್ವದೆಲ್ಲೆಡೆ
ಹರಡಲಾರಂಭಿಸಿತ್ತು. ಅವರು ಇಸ್ತಾಂಬುಲ್‌ನಲ್ಲಿ ಸಂಪರ್ಕ ವಿಮಾನವನ್ನು ಏರುವುದಲ್ಲಿದ್ದಾಗ ಅವರಿಗೆ ಅನುಮತಿ ನಿರಾ ಕರಿಸಲಾಯಿತು. ನಿಜಕ್ಕಾದರೆ ಅವರು ಮೆಕ್ಸಿಕೊದಿಂದ ಹೊರಡುತ್ತಿದ್ದಂತೆಯೇ ಟರ್ಕಿಯಲ್ಲಿ ಕೋವಿಡ್‌ಸಂಬಂಧಿ ನಿಯಮಗಳು ಜಾರಿಗೆ ಬಂದಿದ್ದವು.

ನವದಂಪತಿ ಎರಡು ದಿನಗಳ ಕಾಲ ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಯಲ್ಲಿ ಕಾಲ ಕಳೆಯಬೇಕಾಯಿತು. ಅನಂತರ ಅವರು ಸ್ವದೇಶಕ್ಕೆ ಮರಳುವ ದಾರಿ ಕಾಣದೆ ಮಧುಚಂದ್ರದ ಹೊಸ ತಾಣವಾಗಿ ಮಾಲ್ದಿವ್ಸ್‌ಗೆ ತೆರಳಲು ನಿರ್ಧರಿಸಿದರು.ಅಲ್ಲಿಗೆ ತಲಪಿದಾಗ ಅವರಿಗೆ ಅಲ್ಲಿ ಕೆಲವೇ ಪ್ರವಾಸಿಗರು ಉಳಿದಿರುವುದು ಗಮನಕ್ಕೆ ಬಂದಿತು ಮತ್ತು ಹೆಚ್ಚಿನವರು ಸ್ವದೇಶಕ್ಕೆ ಮರ‌ಳುವುದಕ್ಕಾಗಿ ವಿಮಾನಗಳಿಗೆ ಕಾಯುತ್ತಿದ್ದರು. ಅವರ ಹೊಟೇಲ್‌ನಲ್ಲಿದ್ದ ಉಳಿದವರು ನಿರ್ಗಮಿಸಿದ ಬಳಿಕ ಅವರನ್ನು ಇನ್ನೊಂದು ದ್ವೀಪಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಕೂಡ ಇದೇ ಸ್ಥಿತಿ ಮರುಕಳಿಸಿತು. ಮಾಲ್ದೀವ್ಸ್‌ ಸರಕಾರ ವಿಹಾರಧಾಮವೊಂದರಲ್ಲಿ ಸ್ಥಾಪಿಸಿದ್ದ ವಿಶೇಷ ಕ್ವಾರಂಟೈನ್‌ನಲ್ಲಿ ಅವರು ಒಂದು ತಿಂಗಳ ಕಾಲ ಕಳೆದರು. ವಿಹಾರಧಾಮದಲ್ಲಿ ಅವರಂತೆ 70 ಮಂದಿ ಇದ್ದರು. ಈ ಪೈಕಿ ಅನೇಕರು ಹನಿಮೂನ್‌ಗೆ ಬಂದವರಾಗಿದ್ದರು.

ಸಿಕ್ಕಿಹಾಕಿಕೊಂಡ ಪ್ರವಾಸಿಗರು
ಮಾಲ್ದಿವ್ಸ್‌ನಲ್ಲಿ ಈಗ 300 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಹೊಸ ಪ್ರವಾಸಿಗರ ಆಗಮನದ ಮೇಲೆ ನಿಷೇಧ ಹೇರಲಾಗಿದೆ. ಖಾಲೀದ್‌ ಮತ್ತು ಪೆರಿ ದಂಪತಿ ದುಬಾೖಗೆ ಮರಳುವುದಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಆದರೂ ತಾವು ಒಂದು ಉತ್ತಮ ಜಾಗದಲ್ಲಿ ಸಿಕ್ಕಿಬಿದ್ದಿದ್ದೇವೆಂದು ಅವರು ಹೇಳುತ್ತಾರೆ. ಹೆಚ್ಚಾಗಿ ಅವರು ಸಮಯವನ್ನು ಕೊಠಡಿಯಲ್ಲೇ ಕಳೆಯುತ್ತಿದ್ದು ತಮ್ಮ ಲ್ಯಾಪ್‌ಟಾಪ್‌ ಮೂಲಕ ಕಚೇರಿ ಕೆಲಸ ಮಾಡಲಾರಂಭಿಸಿದ್ದಾರೆ. ಮಾಲ್ದಿವ್ಸ್‌ನಲ್ಲಿ ಮಳೆಯಾಗುತ್ತಿರುವುದರಿಂದ ಮತ್ತು ಈಗ ರಮ್ಜಾನ್‌ ಉಪವಾಸದ ಮಾಸವಾಗಿರುವುದರಿಂದ ಅವರಿಗೆ ಒಂದೆರಡು ಬಾರಿಗಿಂತ ಹೆಚ್ಚು ಸಲ ಸಮುದ್ರತೀರಕ್ಕೆ ಹೋಗಲು ಸಾಧ್ಯವಾಗಿಲ್ಲ.

ಈಗ ಅವರು ಸ್ವದೇಶಕ್ಕೆ ಮರಳುವುದಕ್ಕಾಗಿ ಯುಎಇ ಅಧಿಕಾರಿಗಳ ನೆರವು ಕೋರುತ್ತಿದ್ದಾರೆ. ಮೆಕ್ಸಿಕೊಕ್ಕೆ ಮಧುಚಂದ್ರಕ್ಕೆಂದು ತೆರಳಿದ್ದ ವೇಳೆ ತಮ್ಮ ಮಧುಚಂದ್ರ ಹೀಗೆ ದೀರ್ಘ‌ಕಾಲ ಮುಂದುವರಿಯಬಹುದೆಂದು ಅವರು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ.

ಟಾಪ್ ನ್ಯೂಸ್

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

1-qeqwe

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

Chrome Browser: ಗೂಗಲ್‌ ಸರ್ಚ್‌ ಎಂಜಿನ್‌ ಕ್ರೋಮ್‌ ಮಾರಾಟ?

Chrome Browser: ಗೂಗಲ್‌ ಸರ್ಚ್‌ ಎಂಜಿನ್‌ ಕ್ರೋಮ್‌ ಮಾರಾಟ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.