ಕಿಂಗ್‌ ಮೇಕರ್‌ ಆಗುವ ಕನಸು ಭಗ್ನ, ಭದ್ರಕೋಟೆಯೂ ಛಿದ್ರ


Team Udayavani, May 14, 2023, 7:58 AM IST

jds

ಬೆಂಗಳೂರು: ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಪ್ರಾದೇಶಿಕತೆಯ “ಅಸ್ಮಿತೆ’ ಹಾಗೂ ಸಮುದಾಯದ “ಬಲ” ನೆಚ್ಚಿಕೊಂಡು ಪ್ರಸಕ್ತ ವಿಧಾನಸಭೆ ಚುನಾ ವಣೆಯಲ್ಲಿ ಹೋರಾಟ ಮಾಡಿದ್ದ ಜೆಡಿಎಸ್‌ಗೆ ಕಿಂಗ್‌ ಮೇಕರ್‌ ಆಗುವ ಕನಸು ಭಗ್ನಗೊಂಡಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ ಮುಂಚೆಯೇ ಅಭ್ಯರ್ಥಿಗಳನ್ನು ಘೋಷಿಸಿ 123 ಸ್ಥಾನದ ಗುರಿಯೊಂದಿಗೆ ಅಖಾಡಕ್ಕಿಳಿದ ಪಕ್ಷಕ್ಕೆ  ಕೇವಲ 19 ಮಂದಿಯನ್ನು ಗೆಲ್ಲಿಸಿಕೊಳ್ಳಲು ಮಾತ್ರ ಶಕ್ತವಾಗಿದೆ. ಎಲ್ಲದಕ್ಕಿಂತ ಮುಖ್ಯ ವಾಗಿ ಭದ್ರಕೋಟೆ ಮಂಡ್ಯ, ರಾಮನಗರ, ತುಮ ಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೆಲೆ ಕಳೆದುಕೊಂಡು ಆಘಾತ ಅನುಭವಿಸುವಂತಾಗಿದೆ.

“ಜಲಧಾರೆ ಯಾತ್ರೆ”: ಹಾಗೂ ಪಂಚರತ್ನ ಕಾರ್ಯಕ್ರಮಗಳು ಈ ಬಾರಿಯ ಚುನಾವಣೆಯಲ್ಲಿ  ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ತರುವ ಮೂಲಕ ಪಕ್ಷಕ್ಕೆ ಅಧಿಕಾರ ತಂದುಕೊಡಲಿದೆ ಎಂಬ ಆತ್ಮವಿಶ್ವಾಸವನ್ನು ನಾಯಕರು ಹೊಂದಿದ್ದರು.

ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿಕ್ಕಮಗಳೂರು, ಮಡಿಕೇರಿ ಭಾಗವೂ “ಶಕ್ತಿ” ತುಂಬಲಿಲ್ಲ. ರಾಜಧಾನಿ ಬೆಂಗಳೂರಿನ  ಇಪ್ಪತ್ತೆಂಟು ಹಾಗೂ ಗ್ರಾಮಾಂತರ ಜಿಲ್ಲೆಯ ನಾಲ್ಕು ಸೇರಿ 32 ಕ್ಷೇತ್ರಗಳಲ್ಲಿ ಜೆಡಿಎಸ್‌ ಒಂದರಲ್ಲಿಯೂ  ಗೆಲ್ಲದಿರುದುವುದು ಆಘಾತವಾಗಿದೆ. ಕಾಂಗ್ರೆಸ್‌, ಬಿಜೆಪಿಗೆ ಹೋಲಿಸಿದರೆ ಮಂಡ್ಯ, ಶ್ರೀರಂಗ ಪಟ್ಟಣ, ಯಾದಗಿರಿ, ತುಮಕೂರಿನಲ್ಲಿ ಹೊರತುಪಡಿಸಿ ಜೆಡಿಎಸ್‌ಗೆ ದೊಡ್ಡ ಮಟ್ಟದ ಬಂಡಾಯವೂ ಇರಲಿಲ್ಲ. ಆದರೂ ನಿರೀಕ್ಷಿತ ಸ್ಥಾನ ಪಡೆಯಲು ಆಗ ಲಿಲ್ಲ. ಬೇರೆ ಪಕ್ಷಗಳಿಗೆ ಹೋದವರನ್ನು ಸೋಲಿಸಬೇಕು ಎಂಬ ಹಠವೂ ಫ‌ಲ ನೀಡಲಿಲ್ಲ.

ಅರಸೀಕೆರೆಯಲ್ಲಿ ಶಿವಲಿಂಗೇಗೌಡ, ಗುಬ್ಬಿಯಲ್ಲಿ ಎಸ್‌.ಆರ್‌.ಶ್ರೀನಿವಾಸ್‌, ಕೋಲಾರದಲ್ಲಿ ಕೊತ್ತೂರು ಮಂಜುನಾಥ್‌ ಗೆಲುವು ತಡೆಯಲು ಆಗಿಲ್ಲ. ಮಾಗಡಿಯಲ್ಲಿ ಬಾಲಕೃಷ್ಣ,  ನಾಗ ಮಂಗಲದಲ್ಲಿ ಚೆಲುವರಾಯ ಸ್ವಾಮಿ, ಶ್ರೀರಂಗಪಟ್ಟಣದಲ್ಲಿ ರಮೇಶ ಬಂಡಿಸಿದ್ದೇಗೌಡರನ್ನು ಸೋಲಿಸುವ “ಗುರಿ”ಯೂ  ಈಡೇರಲಿಲ್ಲ.

ಚಾಮುಂಡೇಶ್ವರಿ, ಹುಣಸೂರಿನಲ್ಲಿ ಜಿ.ಟಿ.ದೇವೇಗೌಡ-ಹರೀಶ್‌ಗೌಡ ಗೆಲುವು ಸಾಧಿಸಿದರೂ ಇತ್ತ ಚನ್ನಪಟ್ಟಣದಲ್ಲಿ  ಕುಮಾರಸ್ವಾಮಿ ಗೆದ್ದರೂ  ರಾಮನಗರದಲ್ಲಿ ಪುತ್ರ ನಿಖೀಲ್‌ಗೆ ಗೆಲುವು ದಕ್ಕದಿರುವುದು, ರಾಮನಗರ ಜಿಲ್ಲೆಯ  ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆದ್ದಿರುವುದು ಹಿನ್ನೆಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಹಾಸನ ಮಾತ್ರ: ಸಕಲೇಶಪುರ, ಬೇಲೂರು ಹೊರತುಪಡಿಸಿ ಜಿದ್ದಾಜಿದ್ದಿಯ ಹಾಸನದಲ್ಲಿ ಸ್ವರೂಪ್‌ ಗೆಲ್ಲಿಸಿಕೊಂಡ ಎಚ್‌.ಡಿ.ರೇವಣ್ಣ-ಭವಾನಿ ಹೊಳೇನರಸೀಪುರ, ಅರಕಲಗೂಡು, ಶ್ರವಣಬೆಳಗೊಳದಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು,  ಜಿಲ್ಲೆಯ ಮಟ್ಟಿಗೆ ಹಿಡಿತ ಮುಂದುವರಿಸಿದ್ದಾರೆ.

ಎಚ್‌.ಡಿ.ದೇವೇಗೌಡರು ತುಮಕೂರಿನಲ್ಲಿ ತಮ್ಮನ್ನು ಸೋಲಿಸಿ ಕಣ್ಣೀರು ಹಾಕಿಸಿದವರಿಗೆ ಕಣ್ಣೀರು ಹಾಕಿಸಿ ಎಂದಿದ್ದರು. ಕೊರಟಗೆರೆ, ಶಿರಾ, ಮಧುಗಿರಿ ಯಲ್ಲಿ   ಲಾಭ ತಂದುಕೊಡುವ ನಿರೀಕ್ಷೆಯಿತ್ತಾದರೂ ಹುಸಿಯಾಗಿದೆ. 2008 ರಲ್ಲಿ 28, 2013 ರಲ್ಲಿ 40, 2018 ರಲ್ಲಿ 37 ಸ್ಥಾನ ಪಡೆದಿದ್ದ ಜೆಡಿಎಸ್‌ 2023 ರಲ್ಲಿ 19 ಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಜಿಗಿತವೀರರಿಗೆ ಸೋಲು

ಟಿಕೆಟ್‌ ವಂಚಿತರಾಗಿ ಜೆಡಿಎಸ್‌ ಸೇರಿದ್ದ ರಘು ಆಚಾರ್‌, ಸೂರ್ಯಕಾಂತ ನಾಗಮಾರಪಲ್ಲಿ, ಅನಿಲ್‌ ಲಾಡ್‌, ಮಾಲಕರೆಡ್ಡಿ, ಮನೋಹರ ತಹಸೀಲ್ದಾರ್‌, ನೇಮಿರಾಜ್‌ ನಾಯ್ಕ, ಆಯನೂರು ಮಂಜುನಾಥ್‌, ಘೋಕ್ಲೃಕರ್‌,ಭಾರತೀ ಶಂಕರ್‌, ದೊಡ್ಡಪ್ಪಗೌಡ ನರಿಬೋಳ್‌, ಗುರುಪಾಟೀಲ್‌ ಶಿರವಾಳ್‌, ಎಂ.ಪಿ.ಕುಮಾರಸ್ವಾಮಿ, ಸಿ.ವಿ.ಚಂದ್ರಶೇಖರ್‌, ಡಾ.ದೇವರಾಜ್‌ ಸೇರಿ ಜಿಗಿತ ವೀರರು ಯಾರೂ ಜಯ ತಂದುಕೊಟ್ಟಿಲ್ಲ.

~ ಎಸ್‌.ಲಕ್ಷ್ಮೀನಾರಾಯಣ

ಟಾಪ್ ನ್ಯೂಸ್

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.