ಹಿಂದೆ ಸರಿದ ಚೀನ ಸೇನೆ; ವಿವಾದಿತ ಸ್ಥಳದಿಂದ ಹಿಂದೆಗೆತ ಆರಂಭ, ಪರಿಸ್ಥಿತಿ ತಿಳಿಯಾಗುವತ್ತ


Team Udayavani, Jul 7, 2020, 6:00 AM IST

ಹಿಂದೆ ಸರಿದ ಚೀನ ಸೇನೆ; ವಿವಾದಿತ ಸ್ಥಳದಿಂದ ಹಿಂದೆಗೆತ ಆರಂಭ, ಪರಿಸ್ಥಿತಿ ತಿಳಿಯಾಗುವತ್ತ

ಸಾಂದರ್ಭಿಕ ಚಿತ್ರ..

ಲಡಾಖ್‌: ಚೀನ ಸೇನೆ (ಪಿಎಲ್‌ಎ)ಯು ಗಾಲ್ವಾನ್‌ ಕಣಿವೆಯಲ್ಲಿ ಹೂಡಿದ್ದ ಶಿಬಿರಗಳನ್ನು ತೆರವು ಮಾಡುವುದನ್ನು ಮತ್ತು ತನ್ನ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ಆರಂಭಿಸಿದ್ದು, ಪೂರ್ವ ಲಡಾಖ್‌ನಲ್ಲಿ ಉಂಟಾಗಿದ್ದ ಸಂಘರ್ಷಮಯ ಸನ್ನಿವೇಶ ತಿಳಿಗೊಳ್ಳುವ ಲಕ್ಷಣಗಳು ಕಂಡುಬಂದಿವೆ.

ಗಾಲ್ವಾನ್‌ನಲ್ಲಿ ನಡೆದ ಘರ್ಷಣೆಯ ಬಳಿಕ ಭಾರತ ಮತ್ತು ಚೀನದ ಉನ್ನತ ಮಿಲಿಟರಿ ಕಮಾಂಡರ್‌ ಗಳ ಸಭೆಯಲ್ಲಿ ಈ ಕುರಿತು ಒಮ್ಮತಕ್ಕೆ ಬರಲಾಗಿತ್ತು. ಚೀನ ಈಗ ಅದರಂತೆ ನಡೆದು ಕೊಳ್ಳಲು ಆರಂಭಿಸಿದ್ದು, 2 ಕಿ.ಮೀ.ಗಳಷ್ಟು ಹಿಂದಕ್ಕೆ ಸರಿದಿದೆ ಎಂದು ಭಾರತೀಯ ಮಿಲಿಟರಿ ಮೂಲಗಳು ಹೇಳಿವೆ.

ವಿವಾದಿತ ಜಾಗದಿಂದ ಚೀನ ಕಾಲು ಕೀಳು ವುದಕ್ಕೆ ಮುನ್ನ ಸೋಮವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಚೀನದ ವಿದೇಶಾಂಗ ಕಾರ್ಯದರ್ಶಿ ವಾಂಗ್‌ ಯಿ ಜತೆಗೆ 2 ತಾಸುಗಳ ವೀಡಿಯೋ ಕರೆಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದರು ಎಂದು ವಿದೇ ಶಾಂಗ ಇಲಾಖೆ ತಿಳಿಸಿದೆ. ಗಡಿಯಲ್ಲಿ ಪುಂಡಾಟ ನಿಲ್ಲಿಸುವಂತೆ ಅಜಿತ್‌ ಸ್ಪಷ್ಟ ಮಾತುಗಳಲ್ಲಿ ಸೂಚಿಸಿದ್ದರು.

ಚೀನ ಯೂಟರ್ನ್
ಗಡಿಯಲ್ಲಿ ವಿನಾಕಾರಣ ಗುಟುರು ಹಾಕುತ್ತಿದ್ದ ಚೀನವು ಅಜಿತ್‌ ಕರೆ ಮಾಡುತ್ತಿದ್ದಂತೆ ತಣ್ಣಗಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗೆ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಅತ್ಯವಶ್ಯ. ಸೈನಿಕರ ನಿಯೋ ಜನೆ ಯನ್ನು ಚೀನ ಹಿಂದೆಗೆದುಕೊಳ್ಳುತ್ತಿದೆ ಎಂದು ವಾಂಗ್‌ ಯಿ ಶಾಂತಿಯನ್ನು ಜಪಿಸಿದ್ದಾರೆ.

ಎಲ್‌ಎಸಿಯಲ್ಲಿ ನಿಯೋಜಿತ ಸೇನೆ ಯನ್ನು ಶೀಘ್ರವೇ ಹಿಂಪಡೆಯಲು ಉಭಯ ರಾಷ್ಟ್ರ ಗಳೂ ಒಪ್ಪಿಕೊಂಡಿವೆ. ಪರಸ್ಪರ ಬೆದ ರಿಕೆ ಹಾಕುವ ಯುದ್ಧತಂತ್ರಗಳನ್ನು ಹೆಣೆ ಯದೆ ದ್ವಿಪಕ್ಷೀಯ ಒಪ್ಪಂದಗಳ ತೀರ್ಮಾನ ಗಳಿಗೆ ಬದ್ಧವಾಗಿ ರಲು ಚೀನ ಒಪ್ಪಿಕೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಸಭೆಗೆ ಗೌರವ ಕೊಟ್ಟಿತೇ?
ಚೀನ ಹಿಂದಕ್ಕೆ ಸರಿದಿರುವ ಬೆಳವಣಿಗೆಗೆ ಇತ್ತೀಚೆಗೆ ನಡೆದ ಕಾಪ್ಸ್‌ಕಮಾಂಡರ್‌ಗಳ ಮಟ್ಟದ 3ನೇ ಹಂತದ ಸಭೆಯ ಯಶಸ್ಸು ಕೂಡ ಪ್ರಮುಖ ಕಾರಣ . ಎಲ್‌ಎಸಿಯಲ್ಲಿ 1.5 ಕಿ.ಮೀ. ಬಫ‌ರ್‌ ಜೋನ್‌ ರಚಿಸಲು ಜೂ.30ರ ಸಭೆ ಯಲ್ಲಿ ತೀರ್ಮಾನಿಸಲಾಗಿತ್ತು. ಉಭಯ ಸೇನೆಗಳು ಎರಡೂ ಬದಿಗಳಲ್ಲಿ 1.5 ಕಿ.ಮೀ. ಹಿಂದಕ್ಕೆ ಸರಿಯಬೇಕು. ಬಫ‌ರ್‌ ಜೋನ್‌ ಯಾರೂ ಅತಿಕ್ರಮಿಸುವಂತಿಲ್ಲ ಎಂದು ನಿರ್ಧ ರಿಸಲಾಗಿತ್ತು. ಗಸ್ತು ಪಾಯಿಂಟ್‌-14ರಲ್ಲಿನ ಸೇನೆ ಹಿಂದೆಗೆಯುವ ಮೂಲಕ ಇದೇ ಮೊದಲ ಬಾರಿಗೆ ಚೀನವು ಸಭೆಯ ತೀರ್ಮಾನಕ್ಕೆ ಗೌರವ ಸೂಚಿಸಿದೆ. ಪ್ರವಾಹದಿಂದಾಗಿಯೂ ಪಿಎಲ್‌ಎ ಹಿಂದೆ ಸರಿದಿದೆ. ಗಸ್ತು ಪಾಯಿಂಟ್‌ 15, ಗೊಗ್ರಾ ಹಾಟ್‌ ಸ್ಪ್ರಿಂಗ್ಸ್‌ ಗಳಿಂದಲೂ ಹಿಂದೆ ಸರಿದಿದೆಯೇ ಎಂಬುದನ್ನು ಭಾರತೀಯ ಸೇನೆ ಪರಿಶೀಲಿಸುತ್ತಿದೆ.

ಚೀನಕ್ಕೆ ದೋವಲ್‌
ವಿಧಿಸಿದ 5 ಶರತ್ತು
1ವಿವಾದಿತ ಜಾಗದಿಂದ ಚೀನ ಹಿಂದೆ ಸರಿಯಬೇಕು.
2ಚೀನ ಹಿಂದೆ ಸರಿದರಷ್ಟೇ ಭಾರತವೂ ಸೇನೆ ವಾಪಸು ಕರೆಸಿಕೊಳ್ಳುತ್ತದೆ.
3ಎಲ್‌ಎಸಿ ನಿಯಮಗಳನ್ನು ಚೀನ ಕಟ್ಟುನಿಟ್ಟಾಗಿ ಪಾಲಿಸಬೇಕು.
4 ಚೀನ ಏಕಪಕ್ಷೀಯವಾಗಿ ಮುನ್ನುಗ್ಗುವಂತಿಲ್ಲ.
5ಶಾಂತಿಗೆ ಭಂಗ ತರುವ ಘಟನೆಗೆ ಚೀನ ಆಸ್ಪದ ನೀಡಬಾರದು.

ನೇಪಾಲ-ಚೀನ ವ್ಯಾಪಾರ ಮುಕ್ತ
ಕಮ್ಯೂನಿಸ್ಟ್‌ ಗೆಳೆಯರಾಗಿರುವ ನೇಪಾಲ-ಚೀನ ಸೋಮವಾರ ಗಡಿ ವ್ಯಾಪಾರ ಮಾರ್ಗ ತೆರೆದಿವೆ. ಉಭಯ ದೇಶ  ಗಳು 2 ಮಾರ್ಗಗಳಲ್ಲಿ ವ್ಯಾಪಾರ ಚಟು  ವಟಿಕೆ ನಡೆಸುತ್ತಿದ್ದವು. ಕೊರೊನಾದಿಂದಾಗಿ ರಾಸು ವಾಗಡಿ- ಕೇರುಂಗ್‌, ಟಾಟೊಪಾನಿ- ಝಂಗು¾ ಗಡಿ ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ನೇಪಾಲವು ಟಾಟೋಪಾನಿ ಗಡಿಯನ್ನು ಮಾರ್ಚ್‌ನಲ್ಲಿ ಮುಕ್ತಗೊಳಿಸಿದ್ದು, ಈಗ ರಾಸು ವಾ ಗಡಿ ಮೂಲಕವೂ ವ್ಯಾಪಾರಕ್ಕೆ ಹಸುರು ನಿಶಾನೆ ತೋರಿದೆ. ಟಿಬೆಟ್‌ನ ಕೇರುಂಗ್‌ ನಲ್ಲಿ ಸಿಲುಕಿದ್ದ ವಾಹನ ಗಳು ಒಂದೊಂದಾಗಿ ನೇಪಾಲದ ಗಡಿ ಯನ್ನು ಪ್ರವೇ ಶಿಸು ತ್ತಿವೆ.

ಪಾಕ್‌ಗೆ ಚೀನದ ನಾಲ್ಕು ಅಟ್ಯಾಕ್‌ ಡ್ರೋನ್‌ಗಳು
“ಶತ್ರುವಿನ ಶತ್ರು ಮಿತ್ರ’ ಎಂಬ ಗಾದೆಗೆ ಚೀನ ಬಲವಾಗಿ ಜೋತುಬಿದ್ದಿದೆ. ಹೀಗಾಗಿ ಪಾಕಿಸ್ಥಾನಕ್ಕೆ ಚೀನ ಈಗ 4 ಅಟ್ಯಾಕ್‌ ಡ್ರೋನ್‌ಗಳನ್ನು ನೀಡುತ್ತಿದೆ. ಆರ್ಥಿಕ ಕಾರಿಡಾರ್‌ ಮತ್ತು ಬಲೂಚಿಸ್ಥಾನದ ಬಂದರನ್ನು ರಕ್ಷಿಸಲು ಚೀನ ಈ ಡ್ರೋನ್‌ಗಳನ್ನು ದಾನ ಮಾಡುತ್ತಿದೆ. ವಿಂಗ್‌ಲೂಂಗ್‌- 2ರ ಮಿಲಿಟರಿ ಆವೃತ್ತಿಯಾದ 48 ಜಿಜೆ-2 ಡ್ರೋನ್‌ ಇದಾಗಿದೆ. ಭಾರತದ ಗಡಿ ಸಮೀಪವೇ ಈ ಡ್ರೋನ್‌ಗಳು ಕಾರ್ಯನಿರ್ವಹಿಸುವುದರಿಂದ ಕುತಂತ್ರಿ ಚೀನಕ್ಕೆ ಎಲ್‌ಒಸಿಯ ರಕ್ಷಣ ಮಾಹಿತಿ ಕದಿಯಲು ಸುಲಭವಾಗಲಿದೆ. ಚೀನ ಈ ಡ್ರೋನ್‌ಗಳನ್ನು ಕಜಕಿ ಸ್ಥಾನ, ಯುಎಇ, ಅಲ್ಜೀರಿಯಾಗಳಿಗೂ ನೀಡಿತ್ತು.

ಭಾರತ ಸಂಪೂರ್ಣ ನಂಬದು
ಚೀನ ಹಿಂದೆ ಸರಿಯುವುದು ಇದೇ ಮೊದಲಲ್ಲ. ಜೂ. 15ರಂದು ಇದೇ ರೀತಿ ನಾಟಕವಾಡಿ ಗಾಲ್ವಾನ್‌ ಘರ್ಷಣೆ ನಡೆಸಿತ್ತು. ಚೀನದ ನಡೆಯನ್ನು ಪೂರ್ಣ ನಂಬಲಾಗದು. ನಮ್ಮ ಯೋಧರು ಎಚ್ಚ ರಿಕೆ ವಹಿಸಿ ಗಸ್ತು ತಿರುಗಲಿದ್ದಾರೆ ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿ ದ್ದಾರೆ. ಡೇರೆ ಹೂಡಿದ್ದಲ್ಲಿ ಚೀನದ ಸಶಸ್ತ್ರ ವಾಹನಗಳು ಇನ್ನೂ ಇರುವುದರಿಂದ ಭಾರತ ಹೈ ಅಲರ್ಟ್‌ ಆಗಿದೆ.

ಮೋದಿ ಬಾಣ ಗುರಿ ತಪ್ಪಲಿಲ್ಲ
ಡೋಕ್ಲಾಂ ಬಿಕ್ಕಟ್ಟು ಉದ್ಭವಿಸಿದ್ದಾಗ ಅಜಿತ್‌ ದೋವಲ್‌ ಅವರೇ ವ್ಯೂಹಾತ್ಮಕ ದಾಳಗಳನ್ನು ಉರುಳಿಸಿ ವಿವಾದಕ್ಕೆ ತೆರೆ ಎಳೆದಿದ್ದರು. ಹೀಗಾಗಿ ಪ್ರಧಾನಿ ಮೋದಿ ಲಡಾಖ್‌ ಬಿಕ್ಕಟ್ಟು ಉಲ್ಬಣಿಸಿದಾಗ ದೋವಲ್‌ ನೇತೃತ್ವದಲ್ಲಿ ಡೋಕ್ಲಾಂ ತಂಡವನ್ನೇ ಮುನ್ನೆಲೆಗೆ ಬಿಟ್ಟಿದ್ದರು. ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಒಳಗೊಂಡ ಆ ತಂಡವೇ ಈಗ ಲಡಾಖ್‌ ಕಗ್ಗಂಟನ್ನು ಬಿಡಿಸಿದೆ. ಮೋದಿ ಪ್ರಯೋಗಿಸಿದ ದೋವಲ್‌ ಬಾಣಕ್ಕೆ ಚೀನ ಶರಣಾಗಿದೆ.

ಹಿಂದಕ್ಕೆ ಸರಿದ ಚೀನ
ಗಾಲ್ವಾನ್‌ನ ಗಸ್ತು ಪಾಯಿಂಟ್‌- 14ರಲ್ಲಿ ಚೀನವು ಈಗ ಟೆಂಟ್‌ ಕಳಚಿ, ಸೈನಿಕರ ಸಹಿತ 2 ಕಿ.ಮೀ.ಗಳಷ್ಟು ಹಿಂದಕ್ಕೆ ಸರಿದಿದೆ. ಪಿಎಲ್‌ಎ ಸೈನಿಕರು ವಿವಾದಿತ ಸ್ಥಳದಿಂದ ಜಾಗ ಖಾಲಿ ಮಾಡಿರುವುದನ್ನು ಭಾರತೀಯ ಸೇನೆ ಖಚಿತಪಡಿಸಿದೆ.

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.