ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ಪಂದ್ಯ: ಶೇನ್ ವಾರ್ನ್ ಗೆ ಅರ್ಪಣೆ
Team Udayavani, Apr 30, 2022, 11:24 PM IST
ಮುಂಬಯಿ: ಪಂದ್ಯ ಆರಂಭವಾಗುವ ಮೊದಲು ಉಭಯ ತಂಡಗಳ ಆಟಗಾರರು ಸಾಲಾಗಿ ನಿಂತು ರಾಜಸ್ಥಾನ ರಾಯಲ್ಸ್ನ ಮೊದಲ ನಾಯಕ ಶೇನ್ ವಾರ್ನ್ ಅವರನ್ನು ಸ್ಮರಿಸಿದರು. ಕ್ರೀಡಾಂಗಣದ ಬೃಹತ್ ಪರದೆಯಲ್ಲಿ ವಾರ್ನ್ ಅವರ ಚಿತ್ರವನ್ನು ಪ್ರದರ್ಶಿಸಲಾಯಿತು.
ಆಟಗಾರರು ಮಾತ್ರವಲ್ಲದೇ ಪಂದ್ಯದ ಅಧಿಕಾರಿಗಳು ಕೂಡ ವಾರ್ನ್ ಅವರಿಗೆ ಮೌನವಾಗಿ ನಿಂತು ಗೌರವ ಸಲ್ಲಿಸಿದರು. ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತಂಡವು ಈ ಪಂದ್ಯವನ್ನು ಅವರಿಗೆ ಅರ್ಪಿಸಲು ನಿರ್ಧರಿಸಿದೆ. ವಾರ್ನ್ ಅವರು ಥಾಯ್ಲೆಂಡ್ನಲ್ಲಿ ಕಳೆದ ಮಾ. 4ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.
2008ರಲ್ಲಿ ಆರಂಭವಾದ ಉದ್ಘಾಟನ ಐಪಿಎಲ್ ವೇಳೆ ವಾರ್ನ್ ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು ಮಾತ್ರವಲ್ಲದೇ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದಿದ್ದರು. ಇದೇ ಮೈದಾನದಲ್ಲಿ 2008ರ ಜೂನ್ ಒಂದರಂದು ನಡೆದ ಫೈನಲ್ನಲ್ಲಿ ವಾರ್ನ್ ಪಡೆ ಧೋನಿ ನಾಯಾಕತ್ವದ ಚೆನ್ನೈ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.