ಮಹಿಳಾ ಲೀಗ್‌ನ ನವತಾರೆ ವಿಂಡೀಸ್‌ನ ಹ್ಯಾಲೀ ಮ್ಯಾಥ್ಯೂಸ್
Team Udayavani, Mar 8, 2023, 8:15 AM IST
ಮುಂಬೈ: ಬಾರ್ಬಡೋಸ್‌ನ 24 ವರ್ಷದ ಆಲ್‌ರೌಂಡರ್ ಹ್ಯಾಲಿ ಮ್ಯಾಥ್ಯೂಸ್ ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್’ನ ಸ್ಟಾರ್ ಆಟಗಾರ್ತಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲೂ ಅತ್ಯಂತ ಘಾತಕವಾಗಿ ಪರಿಣಮಿಸುವ ಅವರು ಮುಂಬೈನ ಎರಡೂ ಗೆಲುವುಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ.
ಗುಜರಾತ್ ಎದುರಿನ ಆರಂಭಿಕ ಪಂದ್ಯದಲ್ಲಿ 31 ಎಸೆತಗಳಿಂದ 47 ರನ್ (3 ಬೌಂಡರಿ, 4 ಸಿಕ್ಸರ್), ಆರ್‌ಸಿಬಿ ವಿರುದ್ಧ ಕೇವಲ 38 ಎಸೆತಗಳಿಂದ ಅಜೇಯ 77 ರನ್ (13 ಬೌಂಡರಿ, 1 ಸಿಕ್ಸರ್) ಜತೆಗೆ 3 ವಿಕೆಟ್ ಉರುಳಿಸಿದ ಸಾಧನೆ ಮ್ಯಾಥ್ಯೂಸ್ ಅವರದು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಹ್ಯಾಲಿ ಮ್ಯಾಥ್ಯೂಸ್, ನಮ್ಮದು ಸ್ಟಾರ್ ಆಟಗಾರ್ತಿಯರಿಂದ ಕಿಕ್ಕಿರಿದಿರುವ ತಂಡ. ಹೀಗಾಗಿ ನನಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಸಂಪೂರ್ಣ ಸ್ವಾತಂತ್ರ್ಯ ಲಭಿಸಿದೆ’ ಎಂದರು.
“ದೊಡ್ಡ ಮೊತ್ತ ದಾಖಲಿಸುವ ನಿಟ್ಟಿನಲ್ಲಿ ನಾನು ಕಳೆದ ಕೆಲವು ವಾರಗಳಿಂದ ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದೆ. ಇದು ಇಲ್ಲಿ ಫಲ ಕೊಡುವ ಲಕ್ಷಣ ಕಂಡುಬಂದಿದೆ. ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾದ ಟ್ರ್ಯಾಕ್‌ಗಳು ಅತ್ಯಂತ ನಿಧಾನಗತಿಯಿಂದ ಕೂಡಿದ್ದವು. ಆದರೆ ಮುಂಬೈ ಪಿಚ್ ಬ್ಯಾಟಿಂಗ್ ಯೋಗ್ಯವಾಗಿದೆ. ನನ್ನ ಶೈಲಿಯ ಆಟಕ್ಕೆ ಅತ್ಯಂತ ಸೂಕ್ತವಾಗಿದೆ. ಹೀಗಾಗಿ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿದೆ’ ಎಂಬುದಾಗಿ ಹ್ಯಾಲಿ ಮ್ಯಾಥ್ಯೂಸ್ ಹೇಳಿದರು.
ಬ್ಯಾಟಿಂಗ್‌ಗೆ ಇದೊಂದು ಅತ್ಯುತ್ತಮ ಅಂಕಣ. 170ರಿಂದ 180ರಷ್ಟು ಮೊತ್ತವನ್ನು ಧಾರಾಳವಾಗಿ ಪೇರಿಸಬಹುದು. ಹಾಗೆಯೇ ಇದನ್ನು ಹೆಚ್ಚಿನ ಒತ್ತಡವಿಲ್ಲದೆ ಬೆನ್ನಟ್ಟಲೂಬಹುದು…’ ಎಂದರು. ನನ್ನನ್ನು ಆಲ್‌ರೌಂಡರ್ ಎಂದು ಪರಿಗಣಿಸಿ ತಂಡಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಮುಂಬೈ ತಂಡದಲ್ಲಿ ಬಹಳ ದೊಡ್ಡ ಬೌಲಿಂಗ್ ಲೈನ್‌ಅಪ್ ಇದೆ. ಮೊದಲ ಪಂದ್ಯದಲ್ಲಿ ನನ್ನ ಅಗತ್ಯ ಕಂಡುಬರಲಿಲ್ಲ. ಆರ್‌ಸಿಬಿ ವಿರುದ್ಧ ನೇರವಾಗಿ ಬೌಲಿಂಗ್ ಆರಂಭಿಸುವ ಅವಕಾಶ ಕೊಟ್ಟರು. 3 ವಿಕೆಟ್ ಕೀಳಲು ಯಶಸ್ವಿಯಾದೆ’ ಎಂಬುದಾಗಿ ಬಲಗೈ ಆಫ್ಸ್ಪಿನ್ನರ್ ಹ್ಯಾಲಿ ಮ್ಯಾಥ್ಯೂಸ್ ಖುಷಿಯಿಂದ ಹೇಳಿದರು.
ಹ್ಯಾಲೀ ತಂದೆ ತೆಂಡುಲ್ಕರ್, ಮುಂಬೈ ಅಭಿಮಾನಿ
ಈ ಸಂದರ್ಭದಲ್ಲಿ ಹ್ಯಾಲಿ ಮ್ಯಾಥ್ಯೂಸ್ ಮುಂಬೈ ಇಂಡಿಯನ್ಸ್ ತಂಡದ ಮೇಲಿನ ಅಭಿಮಾನದ ಕುರಿತು ಹೇಳಿಕೊಂಡರು. ನನ್ನ ತಂದೆ ಮೊದಲ ಐಪಿಎಲ್ ಸೀಸನ್‌ನಿಂದಲೂ ಮುಂಬೈ ಇಂಡಿಯನ್ಸ್ ತಂಡದ ದೊಡ್ಡ ಅಭಿಮಾನಿ. ಕಾರಣ, ಸಚಿನ್ ತೆಂಡುಲ್ಕರ್. ಅವರು ತೆಂಡುಲ್ಕರ್ ಅವರ ಬಹು ದೊಡ್ಡ ಅಭಿಮಾನಿ’ ಎಂದರು.
ಹುಡುಗರ ತಂಡದ ನಾಯಕಿ!
ಎಂಟರ ಹರೆಯದಲ್ಲೇ ಕ್ರಿಕೆಟ್ ಹುಚ್ಚು ಅಂಟಿಸಿಕೊಂಡ ಹ್ಯಾಲೀ ಮ್ಯಾಥ್ಯೂಸ್, ಬಾರ್ಬಡಾಸ್ ಅ-13 ಹುಡುಗರ ತಂಡದ ನಾಯಕಿಯಾಗಿದ್ದರು ಎಂಬುದು ಸ್ವಾರಸ್ಯಕರ ಸಂಗತಿ! 2016ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ 45 ಎಸೆತಗಳಿಂದ 66 ರನ್ ಬಾರಿಸಿ ವೆಸ್ಟ್ ಇಂಡೀಸ್ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.