ಇಟ್ಟಿಗೆ ಮನೆ ಮೊರೆ ಹೋದ ಪ್ರತಿಭಟನಾ ನಿರತ ರೈತರು
ದಿಲ್ಲಿ ಗಡಿ ಭಾಗದಲ್ಲಿ ಪ್ರತಿಭಟನ ನಿರತರಿಂದ ಹೊಸ ಸೂರು ನಿರ್ಮಾಣ
Team Udayavani, Mar 14, 2021, 7:30 AM IST
ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಗಡಿ ಭಾಗದಲ್ಲಿ, ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ತಾವು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ದೀರ್ಘ ಕಾಲದವರೆಗೆ ವಿಸ್ತರಿಸಲು ರೈತರು ನಿರ್ಧರಿಸಿದ್ದಾರೆ. ಈಗಾಗಲೇ ಬೇಸಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರು, ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳಲ್ಲಿ ಇಟ್ಟಿಗೆಯ ಗುಡಿಸಲುಗಳನ್ನು ನಿರ್ಮಿಸಲಾರಂಭಿಸಿದ್ದಾರೆ.
ಟಿರ್ಕಿ ಗಡಿಯಲ್ಲಿ, ರೈತರು ತಾವೇ ಖುದ್ದಾಗಿ ತಮ್ಮ ಇಟ್ಟಿಗೆ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಕಟ್ಟಡ ಸಾಮಗ್ರಿಗಳಿಗಾಗಿ ಹಣ ವ್ಯಯಿಸುತ್ತಿರುವ ಅವರಿಗೆ ಕಾರ್ಮಿಕರಿಗೆ ಕೊಡಬೇಕಿದ್ದ ಕೂಲಿಯಲ್ಲಿ ಉಳಿತಾಯವಾಗುತ್ತಿದೆ. ಇಂಥ ಪ್ರತಿಯೊಂದು ಮನೆಗೆ 20,000 ರೂ.ಗಳಿಂದ 25,000 ರೂ. ಖರ್ಚಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಬಹಾದುರ್ಗಢ ಹೈವೇ ಬಳಿಯೂ ಇದೇ ರೀತಿ ಕನಿಷ್ಟ ಸೌಕರ್ಯಗಳಿರುವ ಮನೆಗಳು ನಿರ್ಮಾಣವಾಗುತ್ತಿವೆ.
ಈ ಪ್ರತಿಭಟನೆ ಶುರುವಾಗಿ, ಇಲ್ಲಿಗೆ ಮೂರು ತಿಂಗಳು ದಾಟಿದೆ. ಈ ಅವಧಿಯಲ್ಲಿ ಅನೇಕ ರೀತಿಯ ಸವಾಲುಗಳನ್ನು ರೈತರು ಎದುರಿಸಿದ್ದಾರೆ. ಚಳಿಗಾಲದ ಮೈಕೊರೆಯುವ ಚಳಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು, ಈಗ ಬಿಸಿಲ ಬೇಗೆಯನ್ನೂ ಸಹಿಸಿ ಮುನ್ನಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.