ಸಿದ್ದರಾಮಯ್ಯ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ಮಠಾಧೀಶರು
ರಾಜಕೀಯ ಸ್ವಾರ್ಥಕ್ಕಾಗಿ ಧರ್ಮ ಗುರುಗಳ ನಿಂದನೆ ತರವಲ್ಲ
Team Udayavani, Mar 26, 2022, 3:35 PM IST
ಡಾ.ಮಹದೇವ ಶ್ರೀಗಳು, ಕನ್ನೂರು ಸೋಮನಾಥ ಶ್ರೀಗಳು
ವಿಜಯಪುರ: ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅನಗತ್ಯವಾಗಿ ಧರ್ಮ ಗುರುಗಳನ್ನು ನಿಂದಿಸಿರುವ ಹಿರಿಯ ರಾಜಕೀಯ ನಾಯಕ ಸಿದ್ಧರಾಮಯ್ಯ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಆಲಗೂರ ಬಬಲೇಶ್ವರದ ಪಂಚಮಸಾಲಿ ಪೀಠದ ಜಗದ್ಗುರು ಡಾ.ಮಹಾದೇವ ಶ್ರೀಗಳು ಕಿಡಿ ಕಾರಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಮುಖಮಂತ್ರಿಯಾಗಿ, ರಾಜ್ಯದ ಹಿರಿಯ ರಾಜಕೀಯ ನಾಯಕರಾದ ಸಿದ್ಧರಾಮಯ್ಯ ಅವರಿಂದ ಇಂಥ ಹೇಳಿಕೆ ಬಂದಿವುದು ಸರಿಯಲ್ಲ ಎಂದರು.
ತಮ್ಮ ರಾಜಕೀಯ ಲಾಭಕ್ಕಾಗಿ, ಓಲೈಕೆ ರಾಜಕಾರಣಕ್ಕಾಗಿ ಮಠಾಧೀಶರನ್ನು ಅವಹೇಳನ ಮಾಡುವ, ನಿಂದಿಸುವ, ಅಪಹಾಸ್ಯ ಮಾಡುವುದರಿಂದ ಸಿದ್ಧರಾಮಯ್ಯ ಅವರಿಗೆ ರಾಜಕೀಯವಾಗಿ ಲಾಭವಾಗುವುದಿಲ್ಲ. ಇಂಥ ವರ್ತನೆ ಯಾರಿಂದಲೂ ಆಗಬಾರದು ಎಂದು ಸದನದಲ್ಲಿ ಸಿದ್ಧರಾಮಯ್ಯ ಹೇಳಿಕೆಗೆ ಆಕ್ಷೇಕಿಸಿದರು.
ಮಠಾಧೀಶರು ಎಂದರೆ ಕೇವಲ ವ್ಯಕ್ತಿಯಾಗಿರದೇ ಸಮಾಜದ ಗುರು ಸ್ಥಾನದಲ್ಲಿ ಗೌರಯುತ ಸ್ಥಾನದಲ್ಲಿ ಇರುತ್ತಾರೆ. ಗುರು ಸ್ಥಾನದಲ್ಲಿರುವ ಮಠಾಧೀಶರ ಬಗ್ಗೆ ಲಘುವಾಗಿ ಹಾಗೂ ಮಠಾಧೀಶರು ಧರಿಸುವ ವಸ್ತ್ರಗಳ ಬಗ್ಗೆ ರಾಜಕೀಯ ಉದ್ದೇಶದ ಓಲೈಕೆಗಾಗಿ ಅವಹೇಳನ ರೀತಿಯಲ್ಲಿ ಮಾತನಾಡುವುದು ಖಂಡನಾರ್ಹ ಎಂದರು.
ಹೋರಾಟದ ಎಚ್ಚರಿಕೆ
ಸಿದ್ದರಾಮಯ್ಯ ಅನಗತ್ಯವಾಗಿ ಮಠಾಧೀಶರನ್ನು ಬೀದಿಗೆ ಎಳೆಯುವ ಕೆಲಸ ಮಾಡಿದ್ದಾರೆ. ಇವರ ವರ್ತನೆ ಹೀಗೇ ಮುಂದುವರೆದರೆ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಕನ್ನೂರು ಮಠದ ಸೋಮನಾಥ ಶ್ರೀಗಳು ಆಕ್ರೋಶ ಹೊರ ಹಾಕಿದ್ದಾರೆ.
ಈ ಹಿಂದೆ ವೀರಶೈವ ಲಿಂಗಾಯತ ಧರ್ಮ ಒಡೆಯುವ ಹುನ್ನಾರ ನಡೆಸಿದ್ದ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ವಯಕ್ತಿಕವಾಗಿ ಅವರೇ ಹಿನ್ನಡೆ ಅನುಭವಿಸಿರುವ ಕಹಿ ಅನುಭವ ಇದೆ. ಹೀಗಿದ್ದರೂ ಮಠಾಧೀಶರಿಗೆ ನೋವುಂಟು ಮಾಡುವಂತೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಜಾತಿ-ಮತ ಎಣಿಸದೇ ವೀರಶೈವ-ಲಿಂಗಾಯತ ಮಠಗಳು ಅಕ್ಷರ-ಅನ್ನ ದಾಸೋಹ ಮಾಡಿದ್ದರಿಂದ ಇಂದು ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ. ವೀರಶೈವ ಮಠಗಳು ಇರಿದ್ದರೆ ರಾಜ್ಯದ ಜನರು ಶೇ.90 ರಷ್ಟು ಇನ್ನೂ ಅನಕ್ಷರಸ್ತರಾಗಿ ಇರುತ್ತಿದ್ದರು. ಇದನ್ನು ಅವರ ಜೊತೆಗಾರರೇ ಆಗಿದ್ದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರೇ ಹೇಳಿದ್ದಾರೆ ಎಂದು ನೆನಪಿಸಿದರು.
ಸಮಾಜಮುಖಿ ಕೆಲಸ ಮಾಡುವ ಮಠಾಧೀಶರು, ಮಠಗಳ ಬಗ್ಗೆ ಸಿದ್ಧರಾಮಯ್ಯ ಅವರು ಅನಗತ್ಯವಾಗಿ ಹಗುರ ಮಾತುಗಳನ್ನಾಡುವುದನ್ನು ಇನ್ನಾದರೂ ಬಿಡಬೇಕು. ಇಲ್ಲವಾದಲ್ಲಿ ಭಕ್ತರ ನೇತೃತ್ವದಲ್ಲೇ ಸಿದ್ಧರಾಮಯ್ಯ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.