ಪತಿಯನ್ನು ಕೊಂದು ಕಥೆ ಕಟ್ಟಿದ್ದ ಪತ್ನಿ , ಪ್ರಿಯಕರ ಸೆರೆ
Team Udayavani, Jan 8, 2023, 7:25 AM IST
ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಿದ್ದ ಪತಿಯನ್ನು ಕೊಂದು ಕುಡಿದು ಮೃತಪಟ್ಟಿದ್ದಾನೆ ಎಂದು ಕಥೆ ಕಟ್ಟಿದ್ದಲ್ಲದೆ, ತಂದೆ ಕೊಲೆ ರಹಸ್ಯ ಬಾಯಿಬಿಡದಂತೆ ಮಕ್ಕಳಿಗೆ ಪ್ರಾಣ ಬೆದರಿಕೆ ಹಾಕಿದ್ದ ತಾಯಿ ಮತ್ತು ಆಕೆಯ ಪ್ರಿಯಕರ ನಂದಿನಿ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಂದಿನಿ ಲೇಔಟ್‌ನ ಸಂಜಯ ಗಾಂಧಿ ನಗರ ನಿವಾಸಿ ಅನಿತಾ (31) ಮತ್ತು ಉತ್ತರಹಳ್ಳಿಯ ರಾಕೇಶ್ (26) ಬಂಧಿತರು. ಆರೋಪಿಗಳು 2022ರ ಜೂನ್ 18ರಂದು ಆಂಜನೇಯ (37) ಎಂಬಾತನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.
ಆಂಜನೇಯ ಮತ್ತು ಪತ್ನಿ ಅನಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿ ದ್ದಾರೆ. ಆಂಜನೇಯ ಟೈಲ್ಸ್ ಕೆಲಸ ಮಾಡು
ತ್ತಿದ್ದು, ಮದ್ಯ ವ್ಯಸನಿಯಾಗಿದ್ದ. ಅನಿತಾ ಗಾರ್ಮೆಂಟ್ಸ್ ಉದ್ಯೋಗಿಯಾಗಿ ದ್ದಳು. ರಾಕೇಶ್ ಕ್ಯಾಂಟೀನ್ ಕಾರ್ಮಿಕನಾಗಿದ್ದ. ಸಹೋದರಿಯ ಮನೆಗೆ ಹೋಗಿದ್ದಾಗ ಅನಿತಾಳಿಗೆ ರಾಕೇಶ್ ಪರಿಚಯವಾಗಿದ್ದು, ನಾಲ್ಕೈದು ವರ್ಷಗಳಿಂದ ಅವರ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ತಿಳಿದ ಬಳಿಕ ಆಂಜನೇಯನು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಜೂನ್ 18ರಂದು ಅನಿತಾ ಮತ್ತು ರಾಕೇಶ್ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಆಂಜನೇಯನನ್ನು ಕೊಂದಿದ್ದರು. ಮರುದಿನ ಬೆಳಗ್ಗೆ ಸಂಬಂಧಿಕರಿಗೆ ಕರೆ ಮಾಡಿ ಆಂಜನೇಯ ಕುಡಿದು ಮೃತಪಟ್ಟಿ ದ್ದಾನೆ ಎಂದು ವಿಚಾರ ತಿಳಿಸಿದ್ದಳು. ಆತ ಕೂಡ ಅದೇ ರೀತಿ ವರ್ತಿಸುತ್ತಿದ್ದ ಎಂದು ನಂಬಿದ ಸಂಬಂಧಿಕರು ಅಂತ್ಯಕ್ರಿಯೆ ಮುಗಿಸಿದ್ದರು.
ಪ್ರಿಯಕರನೊಂದಿಗೆ ಪರಾರಿ
ಕೊಲೆ ಕೃತ್ಯವನ್ನು ಮಕ್ಕಳು ನೋಡಿದ್ದರು. ಆದರೆ ಯಾರಿಗೂ ಹೇಳದಂತೆ ಅನಿತಾ ಬೆದರಿಸಿದ್ದಳು. ಕೆಲವೊಮ್ಮೆ ಮಕ್ಕಳು ಈ ವಿಚಾರ ಪ್ರಸ್ತಾವಿಸಿದರೆ ಚಾಕು ತೋರಿಸಿ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕುತ್ತಿದ್ದಳು. ಮೂರು ತಿಂಗಳ ಹಿಂದೆ ತನ್ನ ಮಕ್ಕಳನ್ನು ಬಿಟ್ಟು ಹೆಗ್ಗನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ಮಧ್ಯೆ ಅಜ್ಜಿ ಬಳಿ ತಂದೆಯನ್ನು ತಾಯಿಯೇ ಕೊಲೆಗೈದಿದ್ದಾಳೆ ಎಂದು ಹೇಳಿದ್ದರು.
ಈ ಸಂಬಂಧ ಜ.4 ನಂದಿನಿ ಲೇಔಟ್ ಠಾಣೆಯಲ್ಲಿ ತಾಯಿ ವಿರುದ್ಧ ಮಕ್ಕಳು ಕೊಲೆ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.