![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 4, 2023, 6:12 AM IST
ಕಲಬುರಗಿ: ಸವಾಲಾಗಿ ಸ್ವೀಕರಿಸಿ ಹಿರಿಯ ಹಾಗೂ ಕಿರಿಯ ಸಹೋದರರು ಎದುರು-ಬದುರಾಗಿ ಸ್ಪರ್ಧಿಸಿದ್ದರಿಂದ ಜಿಲ್ಲೆಯ ಅಫಜಲಪುರ ಕ್ಷೇತ್ರದಲ್ಲಿ ಎಲ್ಲಿಲ್ಲದ ಚುನಾವಣೆ ರಂಗೇರಿದೆ. ಸಹೋದರರ ನಡುವಿನ ಕಾಳಗದಲ್ಲಿ ಗೆಲ್ಲುವವರಾರು ಎನ್ನುವ ಯಕ್ಷ ಪ್ರಶ್ನೆ ಎದುರಾಗಿದೆ.
ಬಿಜೆಪಿಯಿಂದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅಭ್ಯರ್ಥಿಯಾಗಿದ್ದರೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರ ಕಿರಿಯ ಸಹೋದರ ನಿತಿನ್ ಗುತ್ತೇದಾರ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸವಾಲೊಡ್ಡಿದ್ದಾರೆ. 80 ವರ್ಷದ ಹಾಲಿ ಶಾಸಕ ಎಂ.ವೈ.ಪಾಟೀಲ್ ಪುನರಾಯ್ಕೆ ಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಹಾಲಿ ಶಾಸಕ ಎಂ.ವೈ. ಪಾಟೀಲ್ ಲಿಂಗಾಯತ ವರ್ಗದವರಾಗಿದ್ದು ಉಳಿದ ಪ್ರಮುಖ ನಾಲ್ವರೂ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಪ್ರಮುಖವಾಗಿ ಎಂ.ವೈ.ಪಾಟೀಲ್ ಮತ ಬ್ಯಾಂಕ್ ಅಲ್ಲಗಳೆಯುವಂತಿಲ್ಲ. ಮಾಲೀಕಯ್ಯ ಗುತ್ತೇದಾರ ಪಕ್ಷದ ಮತಗಳೊಂದಿಗೆ ತಮ್ಮದೆಯಾದ ವರ್ಚಸ್ಸಿನೊಂದಿಗೆ ಇತರರ ಮತ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ.
ಮತಗಳು ವಿಭಜನೆಯಾದಲ್ಲಿ ಹಾಲಿ ಶಾಸಕ ಎಂ.ವೈ. ಪಾಟೀಲ್‌ಗೆ ಅನುಕೂಲ ಆಗಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಆಡಳಿತ ವಿರೋಧಿ ಅಲೆ ಅದರಲ್ಲೂ ಇವರ ಪುತ್ರ ಅರುಣಕುಮಾರ ಪಾಟೀಲ್ ಅವರ ವ್ಯಾಪಕ ಹಸ್ತಕ್ಷೇಪ ಹಾಗೂ ಇತರ ಕಾರಣಗಳು ಸ್ವಲ್ಪ ತೊಡಕಾಗಬಹುದು. ಮಾಲೀಕಯ್ಯ ಈ ಸಲ ಗೆದ್ದರೆ ತಾವು ಸಚಿವರಾಗುವುದು ನಿಶ್ಚಿತ. ಇದು ಕೊನೆ ಚುನಾವಣೆ ಎನ್ನುತ್ತಿ ರುವುದು ಸಹ ಆತ್ಮಾವಲೋಕನಕ್ಕೆ ದಾರಿ ಮಾಡಿ ಕೊಟ್ಟಿದೆ. ಎಂ.ವೈ.ಪಾಟೀಲ್‌ಗೂ ಇದು ಕೊನೆ ಚುನಾವಣೆ. ಇದೇ ಸಲ ಸ್ಪರ್ಧಿಸುವುದಿಲ್ಲ ಎಂದಿದ್ದರಲ್ಲದೇ ಟಿಕೆಟ್ ಮಗನಿಗೆ ನೀಡಬೇಕೆಂದಿದ್ದರು. ಆದರೆ ಪಕ್ಷದ ವರಿಷ್ಠ ಮಂಡಳಿ ಅಳೆದು ತೂಗಿ ಕೊನೆಗೆ ಎಂ.ವೈ. ಪಾಟೀಲ್‌ಗೆ ಟಿಕೆಟ್ ನೀಡಿದೆ.
ನಿತಿನ್ ಗುತ್ತೇದಾರ ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರೂ ಹಿರಿಯರು ಆಗಿದ್ದು ಅವರಿಗೆ ವಿಶ್ರಾಂತಿ ನೀಡಿ, ಯುವಕನಾಗಿರುವ ನನಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ.
ಕಾಂಗ್ರೆಸ್ ಮತ ಬ್ಯಾಂಕ್‌ಗೆ ನಿತಿನ್ ಲಗ್ಗೆ: ಕಣದಲ್ಲಿ ಎಂ.ವೈ. ಪಾ ಟೀಲ್ ಬಿಟ್ಟು ಉಳಿದ ನಾಲ್ವರು ಹಿಂದುಳಿದ ವರ್ಗಕ್ಕೆ ಸೇರಿ ದ ವರು. ನಿತಿನ್ ಮುಸ್ಲಿಂ, ದಲಿತರ ಮತಗಳಿಗೆ ಲಗ್ಗೆ ಹಾಕಿದ್ದಾರೆ. ಈ ಮತ ಹೆಚ್ಚಾಗಿ ಎಂ.ವೈ. ಪಾಟೀಲ್ ಕಡೆ ಹೋಗಬಹುದು ಎಂದರೂ, ಒಳ ಪೆಟ್ಟು ಹೇಗೆ ಕೆಲಸ ಮಾಡಲಿದೆ ಎಂಬು ದನ್ನು ನೋಡ ಬೇ ಕಾ ಗಿದೆ. ಮಾಲೀ ಕಯ್ಯ ಗುತ್ತೇ ದಾರ ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಣದಲ್ಲಿ ತಂತ್ರಗಾರಿಕೆ ಮಾಡುತ್ತಿದ್ದಾರೆ. ಜೆಡಿಎಸ್‌ನ ಶಿವಕುಮಾರ ನಾಟೀಕಾರ ಹಾಗೂ ಎಸ್ ಪಿ ಯ ಆರ್.ಡಿ. ಪಾಟೀಲ್ ಪಡೆಯುವ ಮತಗಳು ಪರಿಣಾಮ ಬೀರುತ್ತವೆ..
~ ಹಣಮಂತರಾವ ಭೈರಾಮಡಗಿ
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
You seem to have an Ad Blocker on.
To continue reading, please turn it off or whitelist Udayavani.