ತೆಕ್ಕಟ್ಟೆ : ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪತ್ನಿ ಮತ್ತು ಮಗಳಿಗೂ ಸೋಂಕು ದೃಢ
ಮಣೂರು -ಕೊರವಡಿ ಸೇರಿ ಒಟ್ಟು ನಾಲ್ಕು ಮನೆಗಳು ಸೀಲ್ ಡೌನ್
Team Udayavani, Jun 20, 2020, 5:56 PM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಮುಂಬಯಿನಿಂದ ಬಂದು ತೆಕ್ಕಟ್ಟೆ ಗೆ ಆಗಮಿಸಿದ ದಿನದಂದೇ ಮೃತಪಟ್ಟಿದ್ದು, ಮೃತ ವ್ಯಕ್ತಿಗೆ ಕೋವಿಡ್ ಇರುವ ದೃಢಪಟ್ಟ ಬೆನ್ನಲ್ಲಿಯೇ ಅವರ ಜತೆಯಲ್ಲಿದ್ದ ಹಾಗೂ ಅವರ ಪತ್ನಿ ಹಾಗೂ ಮಗಳು ಸಹಿತ ಕೋವಿಡ್ ಇರುವ ದೃಢಪಟ್ಟ ಹಿನ್ನೆಲೆಯಲ್ಲಿ ಜೂ.20 ರಂದು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮಣೂರು -ಕೊರವಡಿಯ ನಾಲ್ಕು ಮನೆ ಸೀಲ್ ಡೌನ್ : ಮೃತ ವ್ಯಕ್ತಿಯ ಅಂತಿಮ ದರ್ಶನಕ್ಕಾಗಿ ಆಗಮಿಸಿದ ಅವರ ಕುಟುಂಬ ಸದಸ್ಯರು ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಕೋಟ ಮತ್ತು ಕುಂದಾಪುರದ ಪೊಲೀಸ್ ಸಿಬಂದಿಗಳು ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನ ಅರೆಕೆರೆ ಮನೆ ಸಮೀಪದ ಮೂರು ಮನೆ ಹಾಗೂ ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿಯಲ್ಲಿನ ಒಂದು ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಕುಂಭಾಸಿ ಗ್ರಾಮ ಪಂಚಾಯತ್ ಪಿಡಿಒ ಜಯರಾಮ ಶೆಟ್ಟಿ, ಕುಂದಾಪುರ ಪೊಲೀಸ್ ಸಿಬಂದಿ ಆನಂದ, ಆಶಾಕಾರ್ಯಕರ್ತೆ ಉಷಾ ಮತ್ತಿತರರು ಉಪಸ್ಥಿತರಿದ್ದರು.
ಸ್ಥಳೀಯರಿಂದ ತೀವ್ರಗೊಂಡ ಆಕ್ರೋಶ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಮುಂಬಯಿನಿಂದ ಬಂದು ತೆಕ್ಕಟ್ಟೆ ತನ್ನ ನಿವಾಸದಲ್ಲಿ ಮೃತಪಟ್ಟಿದ್ದು ಅವರ ಮೃತ ದೇಹವನ್ನು ಒಂದು ದಿನಗಳ ಕಾಲ ಮನೆಯ ಒಳಗೆ ಇರಿಸಲಾಗಿದೆ ಹಾಗೂ ಮುಂಬಯಿನಿಂದ ಗ್ರಾಮಕ್ಕೆ ಆಗಮಿಸುವಾಗ ಸುಳ್ಳು ಮಾಹಿತಿ ನೀಡಿದ ಪರಿಣಾಮ ಇಂದು ಇಡೀ ಗ್ರಾಮದ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಪರಿಸರದ ಹಲವು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂ.20 ರಂದು ಕೋವಿಡ್ ಸೋಂಕಿತ ಪತ್ನಿ ಹಾಗೂ ಮಗಳನ್ನು ಉಡುಪಿಯ ಕೋವಿಡ್ ಸೆಂಟರ್‌ಗೆ ಕರೆದೊಯ್ಯುವ ಸಂದರ್ಭದಲ್ಲಿ ಅವರ ಜತೆಗೆ ಮುಂಬಯಿನಿಂದ ಆಗಮಿಸಿದ ಒರ್ವ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆ ಅವರನ್ನು ತೆಕ್ಕಟ್ಟೆಯ ಅವರ ನಿವಾಸದಲ್ಲಿಯೇ ಹೋಂ ಕ್ವಾರಂಟೈನ್‌ನಲ್ಲಿ ಇರಿಸಿದರಿಂದ ಅಸಮಾಧಾನದ ಪರಿಸರದ ಮಂದಿ ಮುಂಬಯಿನ ಆ ವ್ಯಕ್ತಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸುವ ಬದಲು ಬೇರೆಡೆಗೆ ಕರೆದೊಯ್ಯುವಂತೆ ಆಗ್ರಹಿಸಿದಾಗ ಕೋವಿಡ್ ವಾರಿಯರ್ಸ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಾಮಕಿ ನಡೆದ ಘಟನೆ ಕೂಡಾ ನಡೆಯಿತು.
ವರದಿ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.