ವರುಣಾದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ: ವಿ. ಶ್ರೀನಿವಾಸಪ್ರಸಾದ್
Team Udayavani, Apr 24, 2023, 6:25 AM IST
ಮೈಸೂರು: ವಿ.ಸೋಮಣ್ಣ ಅವರ ಹಿಂದೆ ಕಾರ್ಯಕರ್ತರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ನನಗೆ 80 ಸಾವಿರ ಮತಗಳು ಬಂದಿವೆ. ವರುಣಾದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ಸೋಲು ಗೆಲುವನ್ನು ಮತದಾರರು ನಿರ್ಧಾರ ಮಾಡುತ್ತಾರೆಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರು ಅಭ್ಯರ್ಥಿಗಳನ್ನು ಪ್ರಶ್ನಿಸುವುದು ಸಹಜ. ವಿ.ಸೋಮಣ್ಣಗೆ ಮುತ್ತಿಗೆ ಮಾಧ್ಯಮಗಳ ಸೃಷ್ಟಿ. ಸೋಮಣ್ಣ ಮೊದಲ ಬಾರಿ ಸ್ಪರ್ಧೆ ಮಾಡುತ್ತಿರುವುದರಿಂದ ಕುಪ್ಯ ಗ್ರಾಮಸ್ಥರು ಪ್ರಶ್ನೆ ಕೇಳಿದ್ದಾರೆ. ಜನರು ನರೇಂದ್ರ ಮೋದಿ ಅವರನ್ನೂ ಪ್ರಶ್ನೆ ಮಾಡುತ್ತಾರೆ ಎಂದು ಹೇಳಿದರು.
ಸಿದ್ದು ಬಾದಾಮಿಗೆ ಏಕೆ ಹೋದ್ರು?: ವರುಣದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಬ್ಬರದ ಭಾಷಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಗುಡುಗಿದರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತೆ. ಲೋಕಸಭೆಯಲ್ಲೂ ರಾಹುಲ್ ಗಾಂಧಿ ನಿಲ್ಲಿಸಿಕೊಂಡು ಗುಡುಗಿದರು. ಮೋದಿ ಮುಳುಗಿ ಹೋದರು ಅನ್ನೋ ಹಾಗೆ ಗುಡುಗಿದರು. ಆದರೆ ಕರ್ನಾಟಕದಲ್ಲಿ ಕೇವಲ 1 ಸೀಟು ಗೆದ್ದರು. ಹೀಗೆ ಗುಡುಗಿ, ಗುಡುಗಿ 36 ಸಾವಿರ ವೋಟಿನಲ್ಲಿ ಸೋತರು. ಬಾದಾಮಿ ಗೆ ಹೋದರು. ಸೋಮಣ್ಣ ಹೊರಗಿನವರು ಎನ್ನುವ ಸಿದ್ದರಾಮಯ್ಯ, ಬಾದಾಮಿಗೆ ಯಾಕೆ ಹೋದರು ಎಂದು ವಾಗ್ಧಾಳಿ ನಡೆ ಸಿ ದೆ ರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.