![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 13, 2022, 7:49 PM IST
ಬೆಂಗಳೂರು : ಹಿಂದೆ ನಮಗೆ ರಾಮಮಂದಿರ ವಿಚಾರ ಇತ್ತು, ಈಗ ರಾಮಮಂದಿರ ನಿರ್ಮಾಣ ಆಗುತ್ತಿದ್ದು, ಆ ವಿಚಾರದಲ್ಲಿ ಬಿಜೆಪಿ ಮತ ಕೇಳುವ ಪ್ರಶ್ನೆ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಂಚ ರಾಜ್ಯಗಳ ಚುನಾವಣಾ ಉಸ್ತುವಾರಿಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಚುನಾವಣಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಅಭಿನಂದಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್, ಸಚಿವರಾದ ವಿ ಸೋಮಣ್ಣ, ಮುನಿರತ್ನ, ಸಂಸದ ಪಿ ಸಿ ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಿರ್ಮಲ್ ಕುಮಾರ ಸುರಾನಾ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ಆರು ತಿಂಗಳು ಯುಪಿಯಲ್ಲಿ ಕೆಲಸ
ಸಚಿವೆ ಶೋಭಾ ಕರಂದ್ಲಾಜೆ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಆರು ವಿಭಾಗದಲ್ಲಿ ಪಕ್ಷ ಸಂಘಟನೆ ಇದೆ. ಆರು ವಿಭಾಗಕ್ಕೆ ಪ್ರತ್ಯೇಕ ಆರು ರಾಜ್ಯಾಧ್ಯಕ್ಷರು. ಅಲ್ಲಿಗೆ ಹೋಲಿಕೆ ಮಾಡಿದರೆ ರಾಜ್ಯದ ಸಂಘಟನೆ ಉತ್ತಮವಾಗಿದೆ. ಆರು ತಿಂಗಳು ನಾನು ಅಲ್ಲಿ ಕೆಲಸ ಮಾಡಿದೆ. ಮೂರು ತಿಂಗಳು ಅಲ್ಲೆ ವಾಸ್ತವ್ಯ ಹೂಡಿದ್ದೆ.ಪಕ್ಷದ ಸೂಚನೆ ಕೂಡ ಇತ್ತು ಎಂದರು.
ಹಿಂದೆ ಧರ್ಮ ಆಧಾರದಲ್ಲಿ ಚುನಾವಣೆ ನಡೆಯುತ್ತಿತ್ತು. ಸಮಾಜವಾದಿ, ಕಾಂಗ್ರೆಸ್ ಜಾತಿ ರಾಜಕೀಯ ಮಾಡುತ್ತಾ ಬರುತ್ತಿತ್ತು. ನಾವು ಯಾವತ್ತೂ ಜಾತಿ ಆಧಾರದಲ್ಲಿ ಚುನಾವಣೆ ಮಾಡಿಲ್ಲ. ಈ ಬಾರಿ, ಮೊದಲ ಬಾರಿ ಅಭಿವೃದ್ಧಿ ಹೆಸರಲ್ಲಿ ಚುನಾವಣೆ ನಡೆದಿದೆ. ಅಭಿವೃದ್ಧಿ ವಿಚಾರದಲ್ಲಿ ನಾವು ಚುನಾವಣೆ ಮಾಡಿದೇವು. ಕಾನೂನು ಸುವ್ಯವಸ್ಥೆ ಯೋಗಿ ಅಧಿಕಾರಕ್ಕೆ ಬಂದ ಮೇಲೆ ಸರಿಯಾಗಿದೆ. ಮೊದಲು ಡಕಾಯತಿ ಇತ್ತು ಎಂದರು.
ಮುಸ್ಲಿಂ ಹೆಣ್ಣುಮಕ್ಕಳು ಸಹ ನಮಗೆ ಮತ ಹಾಕಿದ್ದಾರೆ. ಕೇಂದ್ರದ ಬಹುತೇಕ ಎಲ್ಲಾ ಯೋಜನೆ ಯುಪಿಗೆ ತಲುಪಿದೆ. ಹೆಚ್ಚು ಮುಸ್ಲಿಂರಿಗೆ ಯೋಜನೆ ತಲುಪಿದೆ.ನಮಗೆ ವಿಶ್ವಾಸ ಬಂದಿದೆ. ಅಭಿವೃದ್ಧಿ ವಿಚಾರದಿಂದ ನಾವು ಚುನಾವಣೆ ಗೆದ್ದಿದ್ದೇವೆ. ಅಲ್ಲಿಯ ಜನ,ನಾವು ಮೋದಿ – ಯೋಗಿ ಉಪ್ಪು ತಿಂದಿದ್ದೇವೆ ಎಂದು ಹೇಳುತ್ತಿದ್ದರು. ಕೋವಿಡ್ ಸಮಯದಲ್ಲಿ ಯೋಗಿಜಿ ಹೆಚ್ಚುವರಿ ರೇಶನ್ ನೀಡಿ ಜನ ಪರ ಕಾರ್ಯ ಮಾಡಿದ್ದರು ಎಂದರು.
ಬೆಳೆಸುವ ಪಕ್ಷ ಇದ್ದರೆ ಅದು ಬಿಜೆಪಿ
ಸಿಟಿ ರವಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ೩೫ ವರ್ಷದ ಹಿಂದೆ ನಾನು ಸಾಮಾನ್ಯ ಕಾರ್ಯಕರ್ತ. ಈಗ ಹೊರ ರಾಜ್ಯದ ಉಸ್ತುವಾರಿ. ಆ ರೀತಿ ಬೆಳೆಸುವ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ ಎಂದರು.
ನೀತಿ ನೀಯತ್ತು ನೇತೃತ್ವ ಇರುವ ಕಡೆ ಗೆಲುವು ಸಿಗದೇ ಇರತ್ತಾ? ವಿಶ್ವಮಾನ್ಯ ನಾಯಕತ್ವ.ನೀಯತ್ತಿನ ಕೆಲಸ ಮಾಡಿದ್ದೇವೆ. ನಾಯಕತ್ವದ ಹೆಸರಲ್ಲೇ ಚುನಾವಣೆ ನಡೆದಿದೆ. ಹೂವಿನ ಜೊತೆ ನಾರು ಸ್ವರ್ಗ ಸೇರಿದಂತೆ, ನಾವು ನಾರಿನಂತೆ ಸ್ವರ್ಗ ಸೇರಿದೆವು. ನಾವು ಸೋತಿದ್ದರೆ ಕೇವಲ ಭಾರತದ ಪತ್ರಿಕೆಗಳು ಮಾತ್ರವಲ್ಲ, ಜಗತ್ತಿನ ಪತ್ರಿಕೆಗಳು ಬರೆಯುತ್ತಾ ಇದ್ದವು. ಒಂದು ಟಿವಿ ಚಾನಲ್ ಗೆ ನಮ್ಮ ಗೆಲುವನ್ನು ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಟಾಂಗ್ ನೀಡಿದರು.
ಈ ಗೆಲುವು ರಾಷ್ಟ್ರ ಹಿತದ ಯೋಜನೆಗೆ ಸಿಕ್ಕ ಗೆಲುವು. ನಾವು ಚುನಾವಣಾ ಹಿಂದುಗಳಲ್ಲ.ಚುನಾವಣಾ ಸಮಯದಲ್ಲಿ ಕೆಲವರು ಹಿಂದುಗಳು ಆಗುತ್ತಾ ಇರುತ್ತಾರೆ. ನಾವು ಆ ಹಿಂದೂಗಳು ಅಲ್ಲ. ಕೆಲವರು ಚುನಾವಣಾ ಸಮಯದಲ್ಲಿ ಉದ್ದ, ಅಡ್ಡ ಎಲ್ಲಾ ನಾಮ ಎಳೆದುಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕರ ಕುರಿತು ವ್ಯಂಗ್ಯವಾಡಿದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.