ಸಾಲ ಮರಳಿಸುವಂತೆ ಕೇಳುವುದರಲ್ಲಿ ತಪ್ಪಿಲ್ಲ
Team Udayavani, Mar 28, 2021, 6:20 AM IST
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆ ಗಳಿಗೆ ಸಾಲ ವಸೂಲಾತಿ ಬಲುದೊಡ್ಡ ತಲೆನೋವಿನ ವಿಷಯವಾಗಿದೆ. ಸಾಲ ವಸೂಲಾತಿಗಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಹಲವಾರು ಮಾರ್ಗಗಳನ್ನು ಅನುಸರಿಸುತ್ತವೆ. ಇವು ಗಳಲ್ಲಿ ವಸೂಲಾತಿ ಏಜೆಂಟರ (Reco very agents) ನೇಮಕವೂ ಒಂದು. ಪಾರಂಪರಿಕ ವಿಧಾನಗಳಲ್ಲಿ ಮತ್ತು ನ್ಯಾಯಾಲಯದ ಮೊರೆಹೋದ ಸಂದರ್ಭಗಳಲ್ಲಿ ವಸೂಲಾತಿ ವಿಳಂಬ ವಾಗುವುದರಿಂದ ಕೆಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಏಜೆಂಟರನ್ನು ನೇಮಿ ಸುತ್ತವೆ. ಈ ಏಜೆಂಟರು ಬ್ಯಾಂಕ್‌ನ ಪರವಾಗಿ ಸಾಲಗಾರರಿಂದ ಸಾಲ ಬಾಕಿ ಯನ್ನು ವಸೂಲು ಮಾಡುತ್ತಾರೆ.
ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿಯೂ ವಸೂಲಾತಿ ಏಜೆಂಟರು ಗಳು ಇರುವರಾದರೂ ಇವರ ಬಳಕೆ ತೀರಾ ಕಡಿಮೆಯಾಗಿದ್ದು ಎಲ್ಲ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕವಷ್ಟೇ ಇವರು ಸಾಲ ವಸೂ ಲಾತಿಗೆ ಮುಂದಾಗುತ್ತಾರೆ. ಆದರೆ ಖಾಸಗಿ ಬ್ಯಾಂಕ್ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ವಸೂಲಾತಿ ಏಜೆಂಟರುಗಳನ್ನು ಸಾಲ ವಸೂಲಾತಿಗೆ ಬಳಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಸಾಲ ಬಾಕಿದಾರರ ವಿಚಾರದಲ್ಲಿ ಖಾಸಗಿ ಸಂಸ್ಥೆಗಳು ತುಸು ನಿರ್ದಾಕ್ಷಿಣ್ಯ ಧೋರಣೆ ಅನುಸರಿಸುವುದರಿಂದ ಏಜೆಂಟರುಗಳ ಪಾತ್ರ ಬಲು ಮಹತ್ವದ್ದಾಗಿರುತ್ತದೆ. ಆದರೆ ವಸೂಲಾತಿ ಏಜೆಂಟರರ ವರ್ತನೆ, ದಾಷ್ಟ್ಯತನದ ಬಗೆಗೆ ಪದೇ ಪದೆ ದೂರುಗಳು ಕೇಳಿಬರುತ್ತಿರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಏಜೆಂಟ ರರು ಅತಿರೇಕದ ವರ್ತನೆ ತೋರುವುದು ನಿಜವಾದರೂ ಬಹುತೇಕ ಪ್ರಕರಣಗಳಲ್ಲಿ ಅವರು ತಮ್ಮನ್ನು ಕೆಲಸಕ್ಕೆ ನೇಮಿಸಿಕೊಂಡ ಸಂಸ್ಥೆಗಳು ತಮಗೆ ವಹಿಸಿದ ಕರ್ತವ್ಯವನ್ನು ನಿಭಾಯಿಸುತ್ತಿರುತ್ತಾರೆ ಅಷ್ಟೆ.
ಇತ್ತೀಚೆಗೆ ಒಂದು ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ಒಂದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ 6.21 ಲಕ್ಷ ರೂ. ವಾಹನ ಸಾಲ ಪಡೆದಿದ್ದ. ಆತ ನಾಲ್ಕು ವರ್ಷಗಳ ಕಾಲ ಪ್ರತೀ ತಿಂಗಳು 17,800 ರೂ. ಇಎಂಐ ಪಾವತಿಸಬೇಕಾಗಿತ್ತು. ಮರುಪಾವತಿ ಸರಿಯಾಗಿ ಮಾಡದಿದ್ದಾಗ ವಸೂಲಿ ಏಜೆಂಟರು ಪದೇ ಪದೆ ಫೋನಾಯಿಸಿ ಮರುಪಾವತಿಗೆ ಒತ್ತಾಯಿಸಿದರೆಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದನು.
ಅವನ ಆತ್ಮಹತ್ಯೆಗೆ ವಸೂಲಿ ಏಜೆಂಟರ ಒತ್ತಡ ಮತ್ತು ಪ್ರಚೋದನೆಯೇ ಕಾರಣ ಎಂದು ಆರೋಪಿಸಿ, ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಹಣಕಾಸು ಸಂಸ್ಥೆ ನೀಡಿದ ಸಾಲವನ್ನು ವಸೂಲು ಮಾಡಿಕೊಳ್ಳಲು ಸಂಸ್ಥೆಯಿಂದ ನೇಮಕಗೊಂಡ ಸಿಬಂದಿ ಮುಂದಾಗಿದ್ದನು. ಇಲ್ಲಿ ಹಣಕಾಸು ಸಂಸ್ಥೆಯ ಸಿಬಂದಿ ತನಗೆ ನಿರ್ದೇಶಿಸಿದ ಕರ್ತವ್ಯ ಮಾಡಿದ್ದಾನೆಯೇ ವಿನಾ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎನ್ನಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಸಾಲ ಬಾಕಿ ಇರಿಸಿಕೊಂಡಿರುವ ಸಾಲಗಾರನ ಬಳಿ ಸಾಲ ಮರು ಪಾವತಿಸುವಂತೆ ಕೇಳುವುದನ್ನು ಆತ್ಮ ಹತ್ಯೆಗೆ ಪ್ರಚೋದನೆ ಎನ್ನುವುದು ಸರಿಯಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ. ಸಾಲಗಾರನು ಬಾಕಿದಾರ ನಾಗಿದ್ದು, ಸಂಸ್ಥೆಯ ಸಾಲ ಮರು ಪಾವತಿಗೆ ಕೇಳಿರುವುದು ಕ್ರಮಬದ್ಧ ವಾಗಿದೆ ಎಂದೂ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಹಲ್ಲೆ ನಡೆಸುವಂತಿಲ್ಲ
ಸಾಲ ವಸೂಲಾತಿ ಪ್ರಕ್ರಿಯೆಯು ಹಲವು ಕಟ್ಟುಪಾಡು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಸಾಲ ವಸೂಲಾತಿ ಸಂದರ್ಭದಲ್ಲಿ ಏಜೆಂಟರು ಮೀಟರ್ ಬಡ್ಡಿ ವಸೂಲಿದಾರರ ಮಾರ್ಗವನ್ನು ಅನುಸರಿಸುವಂತಿಲ್ಲ. ಸಾಲ ವಸೂಲಾತಿಗೆ ಹೋದಾಗ ಸಾಲಗಾರರ ಮೇಲೆ ದೈಹಿಕ ಹಲ್ಲೆ ನಡೆಸುವಂತಿಲ್ಲ. ಮೂರನೇ ವ್ಯಕ್ತಿಯ ಎದುರು ಅವರ ಗೌರವಕ್ಕೆ ಕುಂದು ಬರುವಂತೆ ನಡೆದುಕೊಳ್ಳುವ ಹಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.