Watch Video; ಇಂಥ ಆ್ಯಂಬುಲೆನ್ಸ್ ಗಳಲ್ಲಿ ಹೋಗೋ ರೋಗಿಗಳನ್ನು ದೇವರೇ ಕಾಪಾಡಬೇಕು!
ಅವನ ಸ್ಥಿತಿ ನೋಡಿ ಜನರೆಲ್ಲಾ ಬೇಸ್ತು. ಯಾಕೆಂದರೆ, ಆ ಡ್ರೈವರ್ ಕಂಠಪೂರ್ತಿ ಕುಡಿದಿದ್ದ.
Team Udayavani, May 23, 2020, 3:52 PM IST
ಇದು ನಮ್ಮ ಆ್ಯಂಬುಲೆನ್ಸ್ ಡ್ರೆವರ್ ಸ್ಥಿತಿ. ಇಂಥ ಆ್ಯಂಬುಲೆನ್ಸ್ ಗಳಲ್ಲಿ ಹೋಗೋ ರೋಗಿಗಳನ್ನು ದೇವರೇ ಕಾಪಾಡಬೇಕು. ಬ್ರಹ್ಮಾವರದ ಉಪ್ಪೂರು ಬಳಿ ಉಡುಪಿಯಿಂದ ವಾಪಸು ಹೊರಟ ಈ ಆ್ಯಂಬುಲೆನ್ಸ್ ಮಧ್ಯಾಹ್ನ 1.30 ಸುಮಾರಿಗೆ ಸೀದಾ ಗದ್ದೆಗೆ ಇಳಿಯಿತು. ಪುಣ್ಯಕ್ಕೆ ಅದರಲ್ಲಿ ರೋಗಿ ಇರಲಿಲ್ಲ.
ಕೂಡಲೇ ಜನರು ಓಡೋಡಿ ಬಂದರು, ಪಾಪ ಡ್ರೆವರ್ ಗೆ ಏನಾದರೂ ಆಗಿರಬಹುದು, ಒಳಗೆ ಯಾರಾದರೂ ರೋಗಿಗಳಿದ್ದರೆ ಅಂತ ದೌಡಾಯಿಸಿ ಬಂದರು. ಆಗ ಮೆಲ್ಲಗೆ ಡ್ರೈವರ್ ಕೆಳಗಿಳಿದು ಬಂದರು.
ಅವನ ಸ್ಥಿತಿ ನೋಡಿ ಜನರೆಲ್ಲಾ ಬೇಸ್ತು. ಯಾಕೆಂದರೆ, ಆ ಡ್ರೈವರ್ ಕಂಠಪೂರ್ತಿ ಕುಡಿದಿದ್ದ. ಆ್ಯಂಬುಲೆನ್ಸ್ ಆಯ ತಪ್ಪಿದ್ದು ಹೇಗೆ ಎಂದು ನೋಡಲಿಕ್ಕೆ ಬಂದ ಜನರಿಗೆ ಸ್ವತಃ ಡ್ರೈವರ್ ಆಯ ತಪ್ಪಿದ್ದು ಗಮನಕ್ಕೆ ಬಂದಿತು. ಕೂಡಲೇ ಕೆಲವರು ಆ ಆ್ಯಂಬುಲೆನ್ಸ್‌ನ ಮಾಲಕರಿಗೆ ಫೋನ್ ಮಾಡಿ ಆ್ಯಂಬುಲೆನ್ಸ್ ಮತ್ತು ಅವರ ಡ್ರೈವರ್ ಸ್ಥಿತಿಯನ್ನು ತಿಳಿಸಿದರು.
ಈ ಮಧ್ಯೆ ಡ್ರೈವರ್ ಅಲ್ಲೇ ಒಂದು ಕಡೆ ಏಳಲಾಗದೆ ಮಲಗಿ ಬಿಟ್ಟರು. ಕೆಲವು ಕ್ಷಣಗಳ ಬಳಿಕ ಕೈಯಲ್ಲಿ ತಮ್ಮ ಎರಡು ಚಪ್ಪಲಿ ಇಟ್ಟುಕೊಂಡು ಮೆಲ್ಲಗೆ ಗುಡ್ಡ ಹತ್ತತೊಡಗಿದರು. ದೇಹ ಎಲ್ಲೆಂದರಲ್ಲಿ ತೂರಾಡುತ್ತಿತ್ತು. ಮೇಲೆ ಹತ್ತುವುದೇ ಕಷ್ಟವಾಯಿತು. ಆದರೂ ಒಂದಿಷ್ಟು ದೂರ ಬಂದು ಧೊಪ್ಪನೆ ಕೆಳಗೆ ಉರುಳಿದರು. ಮರಳಿ ಯತ್ನದಲ್ಲಿ ತೊಡಗಿದ ಡ್ರೈವರ್ ಎಲ್ಲರಿಗೂ ಕೈ ಮುಗಿಯುತ್ತಾ ಮೇಲೆ ಬಂದಾಗ ಜನರೆಲ್ಲಾ, ಅಬ್ಬಾ..ಮೇಲೆ ಬಂದರಲ್ಲ ಎಂದು ನಿಟ್ಟುಸಿರು ಬಿಟ್ಟರು.
ಜೀವರಕ್ಷಕವಾದ ಆ್ಯಂಬುಲೆನ್ಸ್‌ನ ಡ್ರೈವರ್‌ಗಳೇ ಹೀಗಾದರೆ ಏನು ಮಾಡುವುದು ಎಂಬುದು ಜನರ ಪ್ರಶ್ನೆಯಾಗಿತ್ತು.
ಇದು ಸಾಮಾಜಿಕ ಕಳಕಳಿಯ ವಿಷಯ. ನಮ್ಮ ನಡುವೆ ಪ್ರಾಣವನ್ನೇ ಪಣಕ್ಕಿಟ್ಟು ಬೇರೆಯವರ ಪ್ರಾಣವನ್ನು ಉಳಿಸಿದ ಆ್ಯಂಬುಲೆನ್ಸ್ ಡ್ರೈವರ್‌ಗಳು, ಸಿಬಂದಿಯೂ ಇದ್ದಾರೆ. ಅದರ ಬಗ್ಗೆ ಅನುಮಾನವೇ ಇಲ್ಲ. ಆದರೆ, ಇಂಥ ಕೆಲವರಿಂದ ಎಲ್ಲ ಆ್ಯಂಬುಲೆನ್ಸ್‌ನವರನ್ನೂ ಜನ ಗಾಬರಿಯಿಂದ ನೋಡುವಂತಾಗಿದೆ. ಹಾಗಾಗಿ ಆ್ಯಂಬುಲೆನ್ಸ್ ಮಾಲಕರಿಗೆ ಹೊಣೆಗಾರಿಕೆ ಹೆಚ್ಚು. ಇಂಥ ಅವಘಡಗಳಿಂದ ಡ್ರೈವರ್ ಅಷ್ಟೇ ಅಲ್ಲ ; ಸಾರ್ವಜನಿಕರ ಪ್ರಾಣಕ್ಕೂ ಧಕ್ಕೆ ತರಬಹುದು.
ಎಚ್ಚರವಹಿಸಿ.
ಜತೆಗೇ ಜನರೂ ಸಹ ಆ್ಯಂಬುಲೆನ್ಸ್ ಹತ್ತುವ ಮೊದಲು ಡ್ರೈವರ್ ವರ್ತನೆ [ಕುಡಿತ ಇತ್ಯಾದಿ] ಕೊಂಚ ಅನುಮಾನ ಬಂದರೂ ಸಂಬಂಧಪಟ್ಟ ಮಾಲಕರಿಗೆ, ಪೊಲೀಸರಿಗೆ ತಿಳಿಸಿ, ವಾಹನ ಹತ್ತಲು ಹೋಗಬೇಡಿ. ಆ ಮುನ್ನೆಚ್ಚರಿಕೆ ವಹಿಸಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.