ಗಂಗಾ ನದಿಯಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಜಲಸಮಾಧಿ
ಶಿವರಾತ್ರಿಯಂದು ಪುಣ್ಯ ಸ್ನಾನಕ್ಕೆ ತೆರಳಿದ್ದರು...
Team Udayavani, Feb 18, 2023, 7:00 PM IST
ಬದೌನ್ : ಉತ್ತರ ಪ್ರದೇಶದ ಸರಕಾರಿ ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಆಳವಾದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಇಬ್ಬರನ್ನು ಸ್ಥಳೀಯ ಮುಳುಗುಗಾರರು ರಕ್ಷಿಸಿದ್ದಾರೆ. ಪೊಲೀಸರ ಪ್ರಕಾರ, ಐವರು ಎಂಬಿಬಿಎಸ್ ವಿದ್ಯಾರ್ಥಿಗಳ ಗುಂಪು ಶನಿವಾರ ಮಧ್ಯಾಹ್ನ ಕಛ್ಲಾ ಗಂಗಾ ಘಾಟ್‌ನಲ್ಲಿ ಸ್ನಾನ ಮಾಡಲು ಹೋಗಿ ಆಳವಾದ ನೀರಿನಲ್ಲಿ ಮುಳುಗಿದ್ದಾರೆ. ಅವರು 22 ರಿಂದ 26 ವರ್ಷ ವಯಸ್ಸಿನವರಾಗಿದ್ದಾರೆ.
ಕಾಲೇಜು ಪ್ರಾಂಶುಪಾಲ ಡಾ.ಧರ್ಮೇಂದ್ರ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳು 2019ರ ಬ್ಯಾಚ್‌ನವರು. ಜೈ ಮೌರ್ಯ (ಜಾನ್‌ಪುರ್), ಪವನ್ ಪ್ರಕಾಶ್ (ಬಲ್ಲಿಯಾ), ನವೀನ್ ಸೆಂಗರ್ (ಹತ್ರಾಸ್), ಪ್ರಮೋದ್ ಯಾದವ್ (ಗೋರಖ್‌ಪುರ) ಮತ್ತು ಅಂಕುಶ್ ಗೆಹ್ಲೋಟ್ (ಭರತ್‌ಪುರ, ರಾಜಸ್ಥಾನ) ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಕಾಲೇಜು ಆಡಳಿತಕ್ಕೆ ತಿಳಿಸದೆ ಸ್ನಾನ ಮಾಡಲು ಹೋಗಿದ್ದರು ಎಂದು ಅವರು ಹೇಳಿದರು.
ಮುಳುಗಲು ಪ್ರಾರಂಭಿಸಿದಾಗ, ಸ್ಥಳೀಯ ಡೈವರ್ ಗಳು ಗೆಹ್ಲೋಟ್ ಮತ್ತು ಯಾದವ್ ಅವರನ್ನು ರಕ್ಷಿಸಿದರು. ಇದೇ ವೇಳೆ ಉಳಿದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.