ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ
Team Udayavani, Apr 21, 2021, 8:01 PM IST
ನವದೆಹಲಿ: ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿರುವ ತೈಲ ಮತ್ತು ಜೈವಿಕ ಅನಿಲ ನಿಗಮಕ್ಕೆ (ಒಎನ್‌ಜಿಸಿ) ಸೇರಿದ ಮೂವರು ಉದ್ಯೋಗಿಗಳನ್ನು ಶಂಕಿತ ಉಗ್ರರು ಅಪಹರಿಸಿದ್ದಾರೆ. ಬುಧವಾರ ಬೆಳಬೆಳಗ್ಗೆಯೇ ಒಎನ್‌ಜಿಸಿ ವಾಹನದಲ್ಲೇ ಉದ್ಯೋಗಿಗಳನ್ನು ಒಯ್ಯಲಾಗಿದೆ.
ನಂತರ ವಾಹನವನ್ನು ಅಸ್ಸಾಂ-ನಾಗಾಲ್ಯಾಂಡ್ ಗಡಿಭಾಗವಾದ ನಿಮೊನಾಗಢ ಎಂಬ ಅರಣ್ಯಪ್ರದೇಶದಲ್ಲಿ ಬಿಟ್ಟು ತೆರಳಲಾಗಿದೆ. ಈ ಕೃತ್ಯವನ್ನು ಶಸ್ತ್ರಸಜ್ಜಿತ “ಉಲ್ಫಾ’ಗೆ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಸೇರಿದ ಉಗ್ರರು ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಊಹಿಸಿದ್ದಾರೆ.
ಅಪಹರಣಗೊಂಡವರಲ್ಲಿ ಇಬ್ಬರು ಕಿರಿಯ ಸಹಾಯಕ ಎಂಜಿನಿಯರ್‌ಗಳು, ಕಿರಿಯ ತಾಂತ್ರಿಕ ಸಿಬ್ಬಂದಿ ಸೇರಿದ್ದಾರೆ. ಮೂವರನ್ನು ಕ್ರಮವಾಗಿ ಮೋಹನ್ ಗೊಗೊಯಿ, ರಿತುಲ್ ಸೈಕಿಯಾ, ಅಲೋಕೇಶ್ ಸೈಕಿಯಾ ಎಂದು ಗುರುತಿಸಲಾಗಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಅಪಹರಣಕಾರರ ಬೇಡಿಕೆಯೇನು ಎಂಬ ಬಗ್ಗೆ ಖಚಿತ ಮಾಹಿತಿ ದೊರಕಿಲ್ಲ.
ಇದನ್ನೂ ಓದಿ :ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ
Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್ ಗಡ್ಕರಿ
Dal Lake: ಶ್ರೀನಗರದಲ್ಲಿ ಏಷ್ಯಾದ ಮೊದಲ ಜಲ ಸಾರಿಗೆ ʼಉಬರ್ ಶಿಕಾರಾʼ ಆರಂಭ
Alappuzha: ಬಸ್ ಗೆ ಡಿಕ್ಕಿ ಹೊಡೆದ ಕಾರು; ಐವರು ವೈದ್ಯಕೀಯ ವಿದ್ಯಾರ್ಥಿಗಳ ಸಾ*ವು
New District: “ಮಹಾ ಕುಂಭಮೇಳ’ ಈಗ ಉತ್ತರಪ್ರದೇಶದ ಹೊಸ ಜಿಲ್ಲೆ!
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.