BJPಗೆ ಟಿಕೆಟ್ ಇಕ್ಕಟ್ಟು: ಟಿಕೆಟ್ ಬದಲಾವಣೆಯಾಗಲೇಬೇಕೆಂದು ಪಟ್ಟು ಹಿಡಿದ ನೇಕಾರರು
ತೇರದಾಳದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ರ‍್ಯಾಲಿಗೆ ಸಿದ್ಧತೆ
Team Udayavani, Apr 12, 2023, 5:17 PM IST
ರಬಕವಿ-ಬನಹಟ್ಟಿ : ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಶಾಸಕರಾಗಿರುವ ಸಿದ್ದು ಸವದಿಯವರಿಗೆ ವರಿಷ್ಠರು ಅನುಮತಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆಂದು ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಡಾ. ಪಂಡಿತ ಪಟ್ಟಣ ಆಕ್ರೋಶ ವ್ಯಕ್ತಪಡಿಸಿದರು.
ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಕಾರ ಸಮುದಾಯಕ್ಕೆ ಈ ಬಾರಿ ಟಿಕೆಟ್ ನಿಶ್ಚಿತವೆಂದು ತಿಳಿಸಿದ್ದರು. ವರಿಷ್ಠರ ನಿರ್ಧಾರ ಕ್ಷೇತ್ರದಲ್ಲಿನ ಕುರುಹಿನಶೆಟ್ಟಿ ಹಾಗು ಹಟಗಾರ ಸಮುದಾಯ ಸೇರಿದಂತೆ ಸುಮಾರು 70ಸಾವಿರ ನೇಕಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಕ್ಷೇತ್ರ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಕಾರಣ ತಕ್ಷಣವೇ ಟಿಕೆಟ್ ಬದಲಾವಣೆ ಮಾಡಿ ನೇಕಾರ ಸಮುದಾಯದ ಮುಖಂಡರೋರ್ವರಿಗೆ ನೀಡಬೇಕೆಂದು ಪಟ್ಟಣ ಒತ್ತಾಯಿಸಿದರು.
ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ಮಾತನಾಡಿ, ಪ್ರತಿ ಚುನಾವಣೆಯಲ್ಲಿಯೂ ಕಾರ್ಯಕರ್ತರ ತುಳಿಯುವ ಕಾರ್ಯ ನಡೆಯುತ್ತಿದೆ. ಮುಖಂಡರನ್ನಾಗಿಸಲು ಸವದಿ ಅನುಮತಿಸುತ್ತಿಲ್ಲ. ಈ ಬಾರಿ ಮತದಾರರ ಧ್ವನಿ ಸ್ಥಳೀಯ ಅಭ್ಯರ್ಥಿಗೆಂದಿದ್ದಾರೆ. ಈ ಬಯಕೆಗೆ ತಣ್ಣೀರೆರಚಿದಂತಾಗಿದ್ದು, ಸಾವಿರಾರು ಜನತೆಯ ನಿರೀಕ್ಷೆಗೆ ಭಂಗವಾಗಿದೆ ಎಂದರು.
ನೇಕಾರ ಸಮುದಾಯದೊಂದಿಗೆ ಇತರೆ ಸಮಾಜವೂ ಬೆಂಬಲವಾಗಿದ್ದು, ಆಯ್ಕೆ ಬದಲಾವಣೆಯಾಗದಿದ್ದಲ್ಲಿ ಪಕ್ಷಕ್ಕೆ ಕ್ಷೇತ್ರದಲ್ಲಿ ಭವಿಷ್ಯವಿಲ್ಲವೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ಹಾಗು ರಾಮಣ್ಣ ಹುಲಕುಂದ ತಿಳಿಸಿದರು.
ಗುರುವಾರ ಪ್ರತಿಭಟನಾ ರ‍್ಯಾಲಿ: ಎ.13 ಗುರುವಾರದಂದು ಬೆಳಿಗ್ಗೆ 9 ಗಂಟೆಗೆ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಸುಮಾರು ಟಿಕೆಟ್ ಬದಲಾವಣೆಗಾಗಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿ ನಂತರ ಎಂ.ಎಂ. ಬಂಗ್ಲೆ ಎದುರು ಸಭೆ ನಡೆಯಲಿದೆ ಎಂದು ರಾಜೇಂದ್ರ ಅಂಬಲಿ ತಿಳಿಸಿದರು.
ದೇವಲ ದೇಸಾಯಿ, ಹರ್ಷವರ್ಧನ ಪಟವರ್ಧನ, ಕಿರಣಕುಮಾರ ದೇಸಾಯಿ, ಬ್ರಿಜ್‌ಮೋಹನ ಡಾಗಾ, ಈರಪ್ಪ ಕಂಚುಣಕಿ, ಶಂಕರಗೌಡ ಪಾಟೀಲ, ಶಶಿಕುಮಾರ ವಲ್ಯಾಪುರ, ಮಹಾದೇವ ಮಾರಾಪುರ, ಶ್ರೀಮಂತ ಕಾನಗೊಂಡ, ಕುಮಾರ ಕದಂ, ರಮೇಶ ಮಂಡಿ, ಶಶಿಕಾಂತ ಹುನ್ನೂರ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.