ಭಾರತದಲ್ಲಿರುವ ಮುಸ್ಲಿಮರು ಒಟ್ಟಾದರೆ ನಾಲ್ಕು ಪಾಕ್ ಸೃಷ್ಟಿ: ಟಿಎಂಸಿ ಮುಖಂಡ ಶೇಖ್
ಆಗ ಭಾರತದಲ್ಲಿರುವ ಶೇ.70ರಷ್ಟು ಜನ ಎಲ್ಲಿಗೆ ಹೋಗುತ್ತಾರೆ ಎಂದು ಅಲಾಮ್ ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
Team Udayavani, Mar 26, 2021, 10:35 AM IST
ಕೋಲ್ಕತಾ:ಭಾರತದಲ್ಲಿರುವ ಶೇ.30ರಷ್ಟು ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನಗಳು ಸೃಷ್ಟಿಯಾಗುತ್ತದೆ ಎಂದು ಟಿಎಂಸಿ ನಾಯಕ ಶೇಖ್ ಅಲಾಮ್ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದು, ಈ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ಖಂಡಿಸಿದೆ.
ಇದನ್ನೂ ಓದಿ:ಮುಂಬೈ: ಮಾಲ್ ನೊಳಗಿರುವ ಕೋವಿಡ್ ಸೆಂಟರ್ ನಲ್ಲಿ ಬೆಂಕಿ ಅವಘಡ, ಇಬ್ಬರು ಸಾವು
ಪಶ್ಚಿಮಬಂಗಾಳದ ಬಿಜೆಪಿ ಮುಖಂಡ ಅಮಿತ್ ಮಾಳವೀಯ ಅವರು ಅಲಾಮ್ ಹೇಳಿಕೆಯ ವೀಡಿಯೋವನ್ನು ಟ್ವೀಟ್ ಮಾಡುವ ಮೂಲಕ ಇದೊಂದು ಉದ್ದೇಶಪೂರ್ವಕವಾಗಿ ನೀಡಿರುವ ಹೇಳಿಕೆ ಎಂದು ಆರೋಪಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಹಿಂದೂಗಳನ್ನು ಮಮತಾ ಅವರು 2ನೇ ದರ್ಜೆಯ ನಾಗರಿಕರಂತೆ ನಡೆಸಿಕೊಂಡಿದ್ದಾರೆ. ಅವರ ಆಪ್ತ ಶೇಖ್ ರಿಂದ ಇಂಥ ಹೇಳಿಕೆಗಳು ಬರುತ್ತವೆ ಎಂದು ಮಾಳವೀಯ ತಿರುಗೇಟು ನೀಡಿದ್ದಾರೆ.
ಟಿಎಂಸಿಯ ಶೇಖ್ ಅಲಾಮ್ ರಂತಹ ನಾಯಕರು ನಾಲ್ಕು ಪಾಕಿಸ್ತಾನ ರಚನೆಯಾಗಬೇಕು ಎಂಬ ದಿಟ್ಟತನ ತೋರಿಸುತ್ತಾರೆ. ಯಾಕೆಂದರೆ ಮಮತಾ ಬ್ಯಾನರ್ಜಿಯನ್ನು ಕಳೆದ ಹತ್ತು ವರ್ಷಗಳ ರಾಜಕೀಯದಲ್ಲಿ ಒಲೈಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿರುತ್ತಾರೆ ಎಂದು ಮಾಳವೀಯ ಟ್ವೀಟ್ ನಲ್ಲಿ ದೂರಿದ್ದಾರೆ.
“ನಾವು ಅಲ್ಪಸಂಖ್ಯಾತರು ಶೇ.30ರಷ್ಟಿದ್ದೇವೆ, ಉಳಿದವರು ಶೇ.70ರಷ್ಟಿದ್ದಾರೆ. ಆ ನಿಟ್ಟಿನಲ್ಲಿ ಅವರು(ಬಿಜೆಪಿ) ಬಂಗಾಳದಲ್ಲಿ ಶೇ.70ರಷ್ಟಿರುವ ಜನಸಂಖ್ಯೆ ಆಧಾರದ ಮೇಲೆ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಒಂದು ವೇಳೆ ಶೇ.30ರಷ್ಟಿರುವ ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನ ರಚಿಸಬಹುದು, ಆಗ ಭಾರತದಲ್ಲಿರುವ ಶೇ.70ರಷ್ಟು ಜನ ಎಲ್ಲಿಗೆ ಹೋಗುತ್ತಾರೆ ಎಂದು ಅಲಾಮ್ ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಹೇಳಿಕೆಯ ವಿವಾದ ಜೋರಾಗುತ್ತಲೇ ಸ್ಪಷ್ಟನೆ ನೀಡಿರುವ ಶೇಖ್ ಅಲಾಮ್, ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾದರೆ ಎಲ್ಲರೂ ಒಗ್ಗೂಡುತ್ತಾರೆ ಎಂದಷ್ಟೇ ನಾನು ಪ್ರಸ್ತಾಪಿಸಿದ್ದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.