ಆಟ ಮುಗಿಸಿದ ಆರ್‌ಸಿಬಿಗೆ ಇಂದು ಆರನೇ ಪಂದ್ಯ
Team Udayavani, Mar 15, 2023, 7:48 AM IST
ಮುಂಬಯಿ: ಆರ್‌ಸಿಬಿ ವನಿತಾ ತಂಡದ ಮೇಲಿನ ಕ್ರಿಕೆಟ್ ಪ್ರೇಮಿಗಳ ಅಭಿಮಾನ ಜರ್ರನೇ ಇಳಿದು ಹೋಗಿದೆ. ಸತತ 5 ಸೋಲುಗಳಿಂದ ದಿಕ್ಕೆಟ್ಟಿರುವ ಆರ್‌ಸಿಬಿಯನ್ನು ಈಗ ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಇವರಿಗಿಂತ ಪುರುಷರ ತಂಡವೇ ಪರವಾಗಿಲ್ಲ ಎಂಬಷ್ಟರ ಮಟ್ಟಿಗೆ ಅಭಿಮಾನಿಗಳು ಹತಾಶರಾಗಿದ್ದಾರೆ.
ಪವಾಡ ನಡೆದರೂ ಅಗ್ರ ಮೂರರಲ್ಲಿ ಕಾಣಿಸಿಕೊಳ್ಳಲಾಗದ ಸ್ಥಿತಿಯ ಲ್ಲಿದೆ ಸ್ಮತಿ ಮಂಧನಾ ಬಳಗ. ಕೂಟದಿಂದ ಹೊರಬಿದ್ದಿರುವುದು ಅಧಿಕೃತಗೊಳ್ಳು ವುದೊಂದೇ ಬಾಕಿ. ಬುಧವಾರ ಯುಪಿ ವಾರಿಯರ್ ವಿರುದ್ಧ ಆರ್‌ಸಿಬಿ ತನ್ನ 6ನೇ ಪಂದ್ಯವಾಡಲಿದೆ. ಇಲ್ಲಿ ಸೋತರೆ ಬೆಂಗಳೂರು ವನಿತಾ ತಂಡದ ಕತೆ ಮುಗಿದೇ ಹೋಗುತ್ತದೆ. ಪ್ರತಿಷ್ಠೆಗಾದರೂ ಒಂದೆರಡು ಪಂದ್ಯ ಗೆಲ್ಲಲಿ ಎಂದು ಹಾರೈಸುವವರೂ ಇಲ್ಲದಿರುವುದು ಆರ್‌ಸಿಬಿ ತಂಡದ ಘೋರ ದುರಂತ!
ಹುಸಿಯಾದ ನಂಬಿಕೆ
ಹರಾಜಿನ ದಿನ ಆರ್‌ಸಿಬಿ ಮೇಲೆ ಎಲ್ಲರೂ ಭಾರೀ ನಂಬಿಕೆ ಇರಿಸಿದ್ದರು. ವಿಶ್ವದ ಘಟಾನುಘಟಿ ಆಟಗಾರ್ತಿಯರೆಲ್ಲ ಆರ್‌ಸಿಬಿಯಲ್ಲೇ ಬೀಡು ಬಿಟ್ಟಿದ್ದಾರೆ, ಇವರನ್ನು ಸೋಲಿಸುವುದು ಸುಲಭವಲ್ಲ, ಆರ್‌ಸಿಬಿಯೇ ಚಾಂಪಿಯನ್, ಒಂದೂವರೆ ದಶಕದಿಂದ ಪುರುಷರಿಂದಾಗದ್ದು ಮಹಿಳೆಯರು ಮೊದಲ ವರ್ಷವೇ ಸಾಧಿಸಲಿದ್ದಾರೆ… ಹೀಗೆ ಅಭಿಮಾನ, ನಂಬಿಕೆಗಳೆಲ್ಲ ಉಕ್ಕೇ ರಿದ್ದವು. ಆದರೆ ಆರ್‌ಸಿಬಿ ಸಾಮರ್ಥ್ಯವೇನಿದ್ದರೂ ಕಾಗದದ ಮೇಲೆ ಮಾತ್ರ ಎಂಬುದು ಅರಿವಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ.
ಆರ್‌ಸಿಬಿ ಮುಟ್ಟಿದ್ದೆಲ್ಲ ಮಣ್ಣಾಗುತ್ತಿದೆ. ನಾಯಕತ್ವ ಹಾಗೂ ಓಪನಿಂಗ್ ಮೂಲಕವೇ ತಂಡದ ಪತನದ ಸೂಚನೆ ಸಿಗಲಾರಂಭಿಸುತ್ತದೆ. ನಾಯಕಿ ಸ್ಮತಿ ಮಂಧನಾ ತಮ್ಮ ಬೆಲೆಗೆ ತಕ್ಕ ಸಾಮರ್ಥ್ಯ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪಂದ್ಯದ ಮೊದಲ ಓವರನ್ನೇ ಮೇಡನ್ ಮಾಡುವಷ್ಟರ ಮಟ್ಟಿಗೆ ಇವರ ಆಟ ಕಳೆಗುಂದಿದೆ. ಕನಿಷ್ಠ ಪಕ್ಷ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಮಾಡಿಕೊಳ್ಳುತ್ತಿಲ್ಲ.
ಜೋಶ್ ಇಲ್ಲವೇ ಇಲ್ಲ
ವಿದೇಶಿ ಆಟಗಾರ್ತಿಯರಾದ ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ಹೀತರ್ ನೈಟ್ ಅಲ್ಲಲ್ಲಿ ಮಿಂಚಿದರೂ ತಂಡಕ್ಕೆ ಇವರಿಂದ ಯಾವ ಲಾಭವೂ ಆಗಿಲ್ಲ. ವಿಶ್ವಕಪ್‌ನಲ್ಲಿ ಮಿಂಚಿದ ಹಾರ್ಡ್‌ಹಿಟ್ಟರ್ ರಿಚಾ ಘೋಷ್ ಇಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಡೆಲ್ಲಿ ವಿರುದ್ಧವಷ್ಟೇ ಇವರ ಬ್ಯಾಟ್ ಒಂದಿಷ್ಟು ಮಾತಾಡಿತ್ತು. ಕನಿಷ್ಠ 180 ರನ್ ಗಳಿಸಬಹುದಾದ ಟ್ರ್ಯಾಕ್‌ಗಳಲ್ಲಿ 150 ರನ್ ಗಡಿ ಮುಟ್ಟಲಿಕ್ಕೂ ಆರ್‌ಸಿಬಿ ಪರದಾಡುತ್ತಿದೆ. ಟಿ20ಗೆ ಅಗತ್ಯವುಳ್ಳ ಬ್ಯಾಟಿಂಗ್ ಜೋಶ್ ಆರ್‌ಸಿಬಿ ಈವರೆಗೆ ತೋರ್ಪಡಿಸಿಯೇ ಇಲ್ಲ.
ಬೌಲಿಂಗ್ ವಿಭಾಗದಲ್ಲಿ ಮೊನ ಚೆಂಬುದೇ ಇಲ್ಲ. ಡೆಲ್ಲಿ ವಿರುದ್ಧದ ಪಂದ್ಯವನ್ನು ಕೊನೆಯ ಓವರ್ ತನಕ ಕೊಂಡೊಯ್ದದ್ದೇ ಈ ಕೂಟದಲ್ಲಿ ಆರ್‌ಸಿಬಿ ಕಡೆಯಿಂದ ಕಂಡುಬಂದ ಉತ್ತಮ ಸಾಧನೆ! ಆರ್‌ಸಿಬಿಯನ್ನು ಮಣಿಸುವುದು ಕಷ್ಟವೇನಲ್ಲ ಎಂಬುದು ಎದುರಾಳಿಗಳಿಗೆ ಮನದಟ್ಟಾಗಿದೆ. ಹಾಗೆಯೇ ನಮ್ಮಿಂದ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬೆಂಗಳೂರು ತಂಡವನ್ನು ಮಾನಸಿಕವಾಗಿ ಕಾಡಲಾರಂಭಿಸಿದೆ.
ಈಗಿನ ಸ್ಥಿತಿ…
ಮಂಗಳವಾರದ ಪಂದ್ಯಕ್ಕೂ ಮೊದಲಿನ ಲೆಕ್ಕಾಚಾರದಂತೆ ಮುಂಬೈ ಮತ್ತು ಡೆಲ್ಲಿ ಮುಂದಿನ ಸುತ್ತು ಪ್ರವೇಶಿಸುವುದು ನಿಶ್ಚಿತ. ಇವರಲ್ಲಿ ಅಗ್ರಸ್ಥಾನ ಯಾರಿಗೆಂಬುದಷ್ಟೇ ಉಳಿದಿರುವ ಕುತೂಹಲ. ಮುನ್ನಡೆವ 3ನೇ ತಂಡದ ಲಕ್ ಯುಪಿ ವಾರಿಯರ್ಗೆ ಒಲಿದೀತು. ಹೊರಬೀಳಲಿರುವ ಆರ್‌ಸಿಬಿಗೆ ಗುಜರಾತ್ ಸಾಥ್ ನೀಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.