ಇಂದು MAY 1: ಇಂದಿನಿಂದ ಏನೇನು ಬದಲಾವಣೆ? ಇಲ್ಲಿದೆ ನೋಡಿ ಡೀಟೇಲ್ಸ್
Team Udayavani, May 1, 2023, 7:25 AM IST
- ಸ್ಪ್ಯಾಮ್ ಫಿಲ್ಟರ್ ಕಡ್ಡಾಯ
ಸೋಮವಾರದಿಂದ ಎಲ್ಲ ದೂರಸಂಪರ್ಕ ಕಂಪನಿಗಳು ತಮ್ಮ ಕರೆಗಳು ಮತ್ತು ಎಸ್ಸೆಮ್ಮೆಸ್ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯ ಸ್ಪ್ಯಾಮ್ ಫಿಲ್ಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಗ್ರಾಹಕರಿಗೆ ನಕಲಿ ಹಾಗೂ ಅನಪೇಕ್ಷಿತ ಪ್ರೊಮೋಷನಲ್ ಕರೆಗಳು ಬರುವುದು ಕಡಿಮೆಯಾಗುತ್ತದೆ. ಈಗಾಗಲೇ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ಶೀಘ್ರವೇ ಎಐ ಫಿಲ್ಟರ್ ಹಾಕುವುದಾಗಿ ಘೋಷಿಸಿವೆ.
- ಟಾಟಾ ವಾಹನಗಳು ದುಬಾರಿ
ಟಾಟಾ ಮೋಟಾರ್ಸ್ ಮೇ 1ರಿಂದ ತನ್ನ ಪ್ರಯಾಣಿಕ ವಾಹನಗಳ ದರ ಏರಿಕೆ ಮಾಡುವುದಾಗಿ ತಿಳಿಸಿದೆ. ಆಯಾ ವಾಹನಗಳ ಆವೃತ್ತಿ ಮತ್ತು ಮಾಡೆಲ್‌ಗೆ ಅನುಗುಣವಾಗಿ ಸರಾಸರಿ ಶೇ.0.6ರಷ್ಟು ದರ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ.
- ಮ್ಯೂಚುವಲ್ ಫಂಡ್
ಇನ್ನು ಮುಂದೆ ಹೂಡಿಕೆದಾರರು ಕೇವಲ ಕೆವೈಸಿ ಇರುವ ಇ-ವ್ಯಾಲೆಟ್‌ಗಳ ಮೂಲಕವೇ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ನಿಮ್ಮ ವ್ಯಾಲೆಟ್ ಕೆವೈಸಿ ಆಗಿರದಿದ್ದರೆ ನಿಮಗೆ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
- ಪಿಎನ್‌ಬಿ ನಿಯಮ ಬದಲು
ಪಿಎನ್‌ಬಿ ಗ್ರಾಹಕರು ಎಟಿಎಂಗೆ ಹಣ ವಿತ್‌ಡ್ರಾ ಮಾಡಲೆಂದು ಹೋಗಿರುತ್ತಾರೆ. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಎಟಿಎಂನಲ್ಲಿ ಹಣ ಬರುವುದಿಲ್ಲ. ಈ ರೀತಿ ಖಾತೆಯಲ್ಲಿನ ಹಣದ ಕೊರತೆಯಿಂದ ವಹಿವಾಟು ವಿಫಲವಾದರೆ ಇನ್ನು ಗ್ರಾಹಕರಿಗೆ 10 ರೂ. ಹಾಗೂ ಜಿಎಸ್‌ಟಿ ವಿಧಿಸಲಾಗುತ್ತದೆ.
- ಜಿಎಸ್‌ಟಿ ನಿಯಮ
ವಾರ್ಷಿಕ 100 ಕೋಟಿ ರೂ. ಅಥವಾ ಹೆಚ್ಚಿನ ವಹಿವಾಟು ಹೊಂದಿರುವ ಉದ್ಯಮಗಳು ಇನ್ನು ಮುಂದೆ ತಮ್ಮ ಎಲೆಕ್ಟ್ರಾನಿಕ್ ಇನ್‌ವಾಯ್ಸಗಳನ್ನು ಅವುಗಳನ್ನು ವಿತರಿಸಿದ 7 ದಿನಗಳೊಳಗಾಗಿ ಐಆರ್‌ಪಿ(ಇನ್‌ವಾಯ್ಸ ರಿಜಿಸ್ಟ್ರೇಷನ್ ಪೋರ್ಟಲ್)ಯಲ್ಲಿ ಅಪ್‌ಲೋಡ್ ಮಾಡಬೇಕು.
- ಎಲ್‌ಪಿಜಿ ದರ ಪರಿಷ್ಕರಣೆ
ಪ್ರತಿ ತಿಂಗಳಂತೆಯೇ ಮೇ ತಿಂಗಳ ಮೊದಲ ದಿನವೂ ಅಡುಗೆ ಅನಿಲ, ಸಿಎನ್‌ಜಿ-ಪಿಎನ್‌ಜಿ ದರ ಪರಿಷ್ಕರಣೆಯಾಗಲಿದೆ. ಅದರಂತೆ, ನೀವು ಬಳಸುವ ಎಲ್‌ಪಿಜಿ ಸಿಲಿಂಡರ್ ದರ ಏರಲೂಬಹುದು, ಇಳಿಯಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.