ಟೊಮೇಟೊ ತುಟ್ಟಿ ತಾತ್ಕಾಲಿಕ: ಕೇಂದ್ರ
Team Udayavani, Jun 28, 2023, 7:50 AM IST
ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಟೊಮೇಟೊ ಬೆಲೆ ತೀವ್ರ ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡಾಗಿಸಿದ ಬೆನ್ನಲ್ಲೇ ಇದು ತಾತ್ಕಾಲಿಕ ಹಾಗೂ ಋತುಮಾನದ ವಿದ್ಯಮಾನ ಅಷ್ಟೇ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಶೀಘ್ರವೇ ಬೆಲೆ ಇಳಿಕೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ವರದಿಗಳ ಪ್ರಕಾರ ದೇಶಾದ್ಯಂತ ಸಂಗ್ರಹಿಸಿರುವ ದತ್ತಾಂಶಗಳ ಆಧಾರದ ಮೇಲೆ ಟೊಮೇಟೊ ಪ್ರತೀ ಕೆ.ಜಿ.ಯ ಸರಾಸರಿ ಬೆಲೆ 46 ರೂ.ಗಳಾಗಿದ್ದು, ಮಾದರಿ ಬೆಲೆ 50 ರೂ ಹಾಗೂ ಗರಿಷ್ಠ ಬೆಲೆ 122 ರೂ.ಗಳಾಗಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ ಟೊಮೇಟೊ ಬೆಲೆ ಕೆ.ಜಿ.ಗೆ 100 ರೂ.ಗೆ ತಲುಪಿದೆ.
ಶಿಮ್ಲಾದಲ್ಲಿ ಕೆ.ಜಿ. ಟೊಮೇಟೊಗೆ 100 ರೂ.ಗಳಿದ್ದರೆ, ಇಂದೋರ್ನಲ್ಲಿ 110 ರೂ. ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಪ್ರತಿಕ್ರಿಯಿಸಿ, ವಿಪರೀತ ಮಳೆ ಯಾಗು ತ್ತಿರುವುದರಿಂದ ಸಾಗಾ ಟಕ್ಕೆ ಅಡೆತಡೆಯಾಗಿ ಪೂರೈಕೆ ವ್ಯತ್ಯಯ ವಾಗಿದೆ. ಹೀಗಾಗಿ ಬೆಲೆ ಏರಿದೆ. ಆದರೆ ಇದು ತಾತ್ಕಾಲಿಕ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.