ವಿಷಯ ವಿಶೇಷ: ಗುರುವಿನ ಅಂಗಳಕ್ಕೆ ಜೂಸ್
Team Udayavani, Apr 16, 2023, 6:45 AM IST
ಭೂಮಿಯಿಂದ ಸಾವಿರಾರು ಮೈಲಿಗಳಷ್ಟು ದೂರವಿರುವ ಬಾಹ್ಯಾಕಾಶ ಹಾಗೂ ಗ್ರಹಗಳ ಅಧ್ಯಯನ ಎಂದಿಗೂ ಕೌತುಕವೇ. ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹಗಳಲ್ಲಿ ಜೀವನ ಸಾಧ್ಯವೋ, ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಹಲವಾರು ಯೋಜನೆಗಳನ್ನು ಕೈಗೊಂಡಿದ್ದಾರೆ. ಇದೀಗ ಸೌರಮಂಡಲದ ಅತೀ ದೊಡ್ಡ ಗ್ರಹವಾದ ಗುರುವಿನ ಅಧ್ಯಯನ ನಡೆಸಲು ವಿಜ್ಞಾನ ಕ್ಷೇತ್ರ ದಾಪುಗಾಲಿರಿಸಿದೆ. ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಗುರು ಗ್ರಹದ ದೊಡ್ಡ ಉಪಗ್ರಹಗಳ (ಚಂದ್ರಗಳ) ಕುರಿತು ತಿಳಿಯಲು ” ಜೂಸ್ ” ನೌಕೆಯನ್ನು ಉಡಾವಣೆ ಮಾಡಿದೆ. ಗುರುವಿನ ಮೇಲ್ಮೈನಲ್ಲಿನ ವಾತವರಣ ಹಾಗೂ ಗುರುವಿನ ಜಲಮೂಲಗಳ ಬಗ್ಗೆ “ಜೂಸ್” ಮಾಹಿತಿ ಕಲೆಹಾಕಲಿದೆ.
ಸೌರಮಂಡಲದ ಅತೀ ದೊಡ್ಡ ಗ್ರಹವಾದ “ಗುರು’ ಮೂರು ದೈತ್ಯ ಉಪಗ್ರಹಗಳನ್ನು (ಚಂದ್ರರನ್ನು) ಹೊಂದಿದೆ. ಗ್ಯಾನಿಮೇಡ್, ಕ್ಯಾಲಿಸ್ಟೋ ಹಾಗೂ ಯುರೋಪಾ. ಈ ಉಪಗ್ರಹಗಳಲ್ಲಿ ಭೂಮಿಯಲ್ಲಿರುವಂತೆ ಸಮುದ್ರಗಳಿರ ಬಹುದು ಹಾಗೂ ಇವುಗಳು ಹಿಮಗಳಿಂದ ಆವೃತವಾಗಿವೆ ಎಂದು ಊಹಿಸಲಾಗಿದ್ದು, ಇದರ ಅಧ್ಯಯನಕ್ಕಾಗಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಜೂಸ್ ಮಿಷನ್‌ನನ್ನು ಕೈಗೊಂಡಿದೆ. ಜೂಪಿಟರ್ ಐಸಿ ಮೂನ್ಸ್ ಎಕ್ಸ್‌ಫ್ಲೋರರ್ (ಜೂಸ್) ಗುರು ಗ್ರಹ ಹಾಗೂ ಇದರ ಐಸಿ ಮೂನ್ಸ್‌ಗಳನ್ನು ರಿಮೋಟ್ ಸೆನ್ಸಿಂಗ್, ಜಿಯೋ ಫಿಸಿಕಲ್ ಹಾಗೂ ಸಿತು ಉಪಕರಣಗಳಿಂದ ಅಧ್ಯಯನ ನಡೆಸಲಿದೆ.
ಜೀವಿಸಲು ಯೋಗ್ಯವೇ?
ಈ ಹಿಂದೆ ಭೂಮಿಯನ್ನು ಹೊರತುಪಡಿಸಿ ಅನ್ಯ ಗ್ರಹಗಳಲ್ಲಿ ಜೀವಿಗಳ ವಾಸದ ಬಗ್ಗೆ ಬಾಹ್ಯಾಕಾಶ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಇದರಂತೆಯೇ ದೊಡ್ಡ ಗ್ರಹವಾದ ಗುರುವಿನಲ್ಲಿ ಜೀವಿಗಳಿರುವ ಬಗ್ಗೆಯೂ ಅಂದಾಜಿಸಲಾಗಿದೆ. ಭೂಮಿಗಿಂತ ಆರು ಪಟ್ಟು ಹೆಚ್ಚು ಜಲಮೂಲವನ್ನು ಗುರು ಗ್ರಹ ಹೊಂದಿದೆ. ಹಾಗಾಗಿ ಮೈಕ್ರೋಬ್ಸ್ಗಳ ರೂಪದಲ್ಲಿ ಅಲ್ಲಿ ಜೀವಿಗಳು ವಾಸವಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಗುರುಗ್ರಹದ ಸುತ್ತಮುತ್ತ ಜೀವಿಗಳ ಉಳಿವಿಕೆಗೆ ಅಗತ್ಯವಾದ ಜೈವಿಕ ಅಗತ್ಯಗಳು, ಶಕ್ತಿ ಮೂಲಗಳು ಇರಬಹುದೇ ಎಂದು ಜೂಸ್ ಕಂಡುಹಿಡಿಯಲಿದೆ.
ಭೂಮಿಯಿಂದ 400 ಮಿಲಿಯನ್
ಮೈಲ್ಸ್‌ಗಳಷ್ಟು ದೂರವಿರುವ ಗುರು ಗ್ರಹವನ್ನು ತಲುಪಲು ಜೂಸ್ ನೌಕೆಯು ಬರೋಬ್ಬರಿ ಎಂಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಜೂಸ್ ಗುರುವಿನ ಕಕ್ಷೆಯನ್ನು ತಲುಪುವ ವೇಳೆಗೆ “ನಾಸಾ’ ಇನ್ನು ಅಂದರೆ 2024ರಲ್ಲಿ ಉಡಾವಣೆ ಮಾಡಬೇಕಾಗಿರುವ “ಯುರೋಪ್ ಕ್ಲಿಪರ್’ ಅದಾಗಲೇ ಗುರುವಿನ ಕಕ್ಷೆಯನ್ನು ತಲುಪಿರುತ್ತದೆ.
ಮೊದಲ ನೌಕೆ
ಗುರುವಿನ ಕಕ್ಷೆಗೆ 1972ರಲ್ಲಿ ನಾಸಾ ಪಯೋನಿಯರ್-10 ನೌಕೆಯನ್ನು ಉಡಾವಣೆಗೊಳಿಸಿತ್ತು. ಇದು ಗುರುವಿನ ಕಕ್ಷೆಗೆ ಹಾರಿದ ಮೊದಲ ನೌಕೆ. ಇದು ಕೇವಲ 640 ದಿನಗಳಲ್ಲಿ ಕಕ್ಷೆ ತಲುಪಿದೆ. ಅನಂತರದಲ್ಲಿ ನಭಕ್ಕೆ ಹಾರಿಸಿದ ಪಯೋನಿಯರ್ – 11 ಪಯೋನಿಯರ್-10ಕ್ಕಿಂತಲೂ ವೇಗ ವಾಗಿ ಅಂದರೆ ಕೇವಲ 606 ದಿನ ಗಳಲ್ಲಿ ಗುರುವಿನ ಕಕ್ಷೆ ತಲುಪಿದೆ.
ಎಪ್ರಿಲ್ 2023ರಲ್ಲಿ ಉಡಾವಣೆಗೊಂಡ ಜೂಸ್, 2026ರಲ್ಲಿ ಶುಕ್ರ ಗ್ರಹ ಹಾಗೂ 2029ರಲ್ಲಿ ಭೂಮಿಯ ಕಕ್ಷೆಯಲ್ಲಿ ಎರಡನೇ ಬಾರಿ ಹಾರಾಟ ನಡೆಸಿದ ಅನಂತರ 2031ಕ್ಕೆ ಗುರುವಿನ ಕಕ್ಷೆಯನ್ನು ತಲುಪಲಿದೆ. 2034ರ ವೇಳೆಗೆ ಗುರುವಿನ ಅತೀದೊಡ್ಡ ಗ್ರಹವಾದ ಗ್ಯಾನಿಮೇಡ್‌ನ್ನು ಅಧ್ಯಯನ ಮಾಡಲಿದೆ.
ಉದ್ದೇಶವೇನು?
ಗುರುವಿನ ಉಪಗ್ರಹಗಳ ಅಧ್ಯಯನಕ್ಕಾಗಿಯೇ ಸಿದ್ಧಪಡಿಸಿರುವ ಮೊದಲ ನೌಕೆಯಿದು. ಈ ಗ್ರಹಗಳಲ್ಲಿರುವ ಜಲಮೂಲಗಳ ಕುರಿತು ತನಿಖೆ ನಡೆಸುವಲ್ಲಿ ಈ ಮಿಷನ್ ಸಹಾಯ ಮಾಡಲಿದೆ.
ಗುರು ಗ್ರಹದ ಉಗಮ, ಇತಿಹಾಸ ಹಾಗೂ ಅದರ ವಿಕಾಸವನ್ನು ಅರ್ಥೈಸಿಕೊಳ್ಳುವುದು ಈ ಮಿಷನ್‌ನ ಮೂಲ ಉದ್ದೇಶ. ಗ್ರಹಗಳು ಹಾಗೂ ಘಟಕಗಳ ಕಾಲಾಂತರದಲ್ಲಿ ಆಗುವ ಬದಲಾವಣೆಯ ಒಳನೋಟವನ್ನು ನೀಡುತ್ತದೆ ಹಾಗೂ ಈ ಗ್ರಹ ವ್ಯವಸ್ಥೆಯಲ್ಲಿ ವಾಸಿಸಲು ಯೋಗ್ಯವಾಗುವ ಪರಿಸರದ ರಚನೆ ಹೇಗೆ ಎನ್ನುವುದರ ಕುರಿತು ಇದು ಬೆಳಕು ಚೆಲ್ಲುತ್ತದೆ.
ಗುರುವಿನ ಮೂರು ಚಂದ್ರಗಳಲ್ಲಿ ಗ್ಯಾನಿಮೇಡ್‌ನ ಅಧ್ಯಯನಕ್ಕೆ ಪ್ರಾಮುಖ್ಯತೆ ಜಾಸ್ತಿ. ಗುರುವಿನ ಅನಂತರ ಗ್ಯಾನಿಮೇಡ್‌ನ ಕಕ್ಷೆಯಲ್ಲಿ ಇಳಿಯುವ ಜೂಸ್, ಗ್ಯಾನಿಮೇಡ್‌ನ ರಚನೆ, ಗುರುತ್ವಾಕರ್ಷಣೆ, ಚಲನೆ, ಆಕಾರದ ಕುರಿತು ಸಂಪೂರ್ಣ ಚಿತ್ರಣ ನೀಡಲಿದೆ.
~ ವಿಧಾತ್ರಿ ಭಟ್ ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.