ಗರ್ಭಿಣಿ ಎಂದು ಘೋಷಿಸಿದ್ದ ಕೇರಳದ ತೃತೀಯಲಿಂಗಿ ದಂಪತಿಗಳಿಗೆ ಮಗುವಿನ ಜನನ!
ಶಿಶುವಿನ ಲಿಂಗದ ಗುರುತನ್ನು ಬಹಿರಂಗಪಡಿಸುವುದಿಲ್ಲ....
Team Udayavani, Feb 8, 2023, 2:26 PM IST
ಕೋಝಿಕ್ಕೋಡ್ : ಇತ್ತೀಚೆಗೆ ಗರ್ಭಿಣಿ ಎಂದು ಘೋಷಿಸಿದ ಕೇರಳದ ತೃತೀಯಲಿಂಗಿ ದಂಪತಿಗಳು ಬುಧವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವನ್ನು ಪಡೆದಿದ್ದಾರೆ, ಇದು ದೇಶದಲ್ಲೇ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ.
“ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಬೆಳಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು” ಎಂದು ತೃತೀಯಲಿಂಗಿ ದಂಪತಿಗಳಲ್ಲಿ ಒಬ್ಬರಾದ ಜಿಯಾ ಪಾವಲ್ ಪಿಟಿಐಗೆ ತಿಳಿಸಿದ್ದಾರೆ.
ಮಗು ಮತ್ತು ಮಗುವಿಗೆ ಜನ್ಮ ನೀಡಿದ ಆಕೆಯ ಸಂಗಾತಿ ಜಹ್ಹಾದ್ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪಾವಲ್ ಹೇಳಿದ್ದಾರೆ. ಆದಾಗ್ಯೂ, ನವಜಾತ ಶಿಶುವಿನ ಲಿಂಗದ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಅದನ್ನು ಸಾರ್ವಜನಿಕಗೊಳಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಜಿಯಾ ಪಾವಲ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನಲ್ಲಿ ಜಹಾದ್ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದರು ”ನಾವು ನನ್ನ ತಾಯಿಯಾಗುವ ಕನಸು ಮತ್ತು ತಂದೆಯಾಗುವ ಅವರ ಕನಸನ್ನು ನನಸಾಗಿಸಿಕೊಳ್ಳಲಿದ್ದೇವೆ. ಎಂಟು ತಿಂಗಳ ವಯಸ್ಸಿನ ಭ್ರೂಣವು ಈಗ ಜಹಾದ್‌ನ ಹೊಟ್ಟೆಯಲ್ಲಿದೆ… ನಮಗೆ ತಿಳಿದುಬಂದ ಪ್ರಕಾರ, ಇದು ಭಾರತದಲ್ಲಿ ಮೊದಲ ಟ್ರಾನ್ಸ್ ಮ್ಯಾನ್‌ನ ಗರ್ಭಧಾರಣೆ…” ಎಂದು ಪಾವಲ್ ಪೋಸ್ಟ್‌ನಲ್ಲಿ ಹೇಳಿದ್ದರು. ಪಾವಲ್ ಮತ್ತು ಜಹಾದ್ ಕಳೆದ ಮೂರು ವರ್ಷಗಳಿಂದ ಜೊತೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ
MUST WATCH
ಹೊಸ ಸೇರ್ಪಡೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.