ಸಾರಿಗೆ ನೌಕರರ ಮುಷ್ಕರ : ಮಂಗಳೂರು ವಿವಿ ಪರೀಕ್ಷೆಗಳ ಮುಂದೂಡಿಕೆ
Team Udayavani, Apr 6, 2021, 10:09 PM IST
ಮಂಗಳೂರು : ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಹಿನ್ನಲೆಯಲ್ಲಿ ಎ.7 ರಂದು ನಿಗದಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಅನಿಶ್ಚಿತತೆಯಲ್ಲಿರುವ ಕಾರಣದಿಂದ ಎ.7 ರಂದು ನಿಗದಿಯಾಗಿದ್ದ ಮಂಗಳೂರು ವಿವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ವಿವಿ ಪರೀಕ್ಷಾಂಗ ಕುಲಸಚಿವ ಡಾ| ಧರ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ತಂದೆ ಹೊಲದಲ್ಲಿ ; ಮಗ ಚಿನ್ನದ ಬೇಟೆಯಲ್ಲಿ : 14 ಚಿನ್ನದ ಪದಕಕ್ಕೆ ಕೊರಳೊಡ್ಡಿದ ರೈತನ ಮಗ
ಸೇವೆ ಅಬಾಧಿತ
ರಾಜ್ಯದಲ್ಲಿ ಸಾರಿಗೆ ನೌಕರರು ಎ. 7ರಿಂದ ಮುಷ್ಕರಕ್ಕೆ ಕರೆ ನೀಡಿದ್ದರೂ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ಸೇವೆಯಲ್ಲಿ ಯಾವುದೇ ರೀತಿಯಾದ ವ್ಯತ್ಯಯವಾಗುವ ಸಾಧ್ಯತೆ ಇಲ್ಲ. ಜಿಲ್ಲೆಯೊಳಗೆ ಒಟ್ಟು 70 ಕೆಎಸ್ಸಾರ್ಟಿಸಿ ಬಸ್‌ಗಳು ಉಡುಪಿ, ಕಾಪು, ಬೈಂದೂರು, ಬ್ರಹ್ಮಾವರ, ಕುಂದಾಪುರ, ಕಾರ್ಕಳ ತಾಲೂಕಿನ ವಿವಿಧ ಕಡೆಗಳಿಗೆ ಎಂದಿನಂತೆ ಸೇವೆಯನ್ನು ನೀಡಲಿವೆ. ಬಸ್ ಸಿಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
– ಉದಯ ಶೆಟ್ಟಿ, ಉಡುಪಿ ಕೆಎಸ್ಸಾರ್ಟಿಸಿ ಡಿಪೋ ಮುಖ್ಯಸ್ಥ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.