ಅರುಣಾಚಲದಲ್ಲಿ ಸೇನಾ ದಾಳಿಯ ಬೆದರಿಕೆ : ಭಾರತೀಯ ಸೇನೆ ಹೈ ಅಲರ್ಟ್
Team Udayavani, Nov 8, 2021, 9:00 PM IST
ಬೀಜಿಂಗ್: ತನ್ನ ದೇಶ ಎದುರಿಸುತ್ತಿರುವ “ಆಹಾರ ಬಿಕ್ಕಟ್ಟನ್ನು’ ಪರಿಹರಿಸುವ ಬದಲು ಚೀನಾ, ಭಾರತದ ವಿರುದ್ಧ ಟ್ವಿಟರ್ ವಾರ್ ಆರಂಭಿಸಿದೆ. ಅರುಣಾಚಲ ಪ್ರದೇಶದಲ್ಲಿ ಸೇನಾ ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಾ ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರಮಣಕಾರಿ ಅಭಿಯಾನ ಶುರುವಿಟ್ಟುಕೊಂಡಿದೆ.
ಟ್ವಿಟರ್‌ನಲ್ಲಿ ದೃಢೀಕೃತ ಹಾಗೂ ದೃಢೀಕೃತವಲ್ಲದ ಖಾತೆಗಳ ಮೂಲಕ ಭಾರತದ ಗಡಿಪ್ರದೇಶಗಳಲ್ಲಿನ ಪೀಪಲ್ಸ್ ಲಿಬರೇಷನ್ ಆರ್ಮಿಯ ಫೋಟೋಗಳು ಹಾಗೂ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಚೀನಾದಲ್ಲಿ ಟ್ವಿಟರ್‌ಗೆ ನಿಷೇಧವಿದ್ದರೂ, ಟ್ವಿಟರ್‌ನಲ್ಲಿ ಇಂಥ ಫೋಟೋಗಳ ಮಹಾಪೂರವೇ ಹರಿದುಬರುತ್ತಿವೆ.
ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾವು 100 ಮನೆಗಳಿರುವ ಹಳ್ಳಿಯನ್ನು ನಿರ್ಮಿಸಿದೆ ಎಂದು ಅಮೆರಿಕದ ಪೆಂಟಗನ್ ವರದಿ ಬಹಿರಂಗಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಲಡಾಖ್ ಮತ್ತು ಅರುಣಾಚಲದಲ್ಲಿ ಭಾರತೀಯ ಸೇನೆಯು ಹೈಅಲರ್ಟ್ ಘೋಷಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಜತೆಗೆ, ಗಡಿ ಪ್ರದೇಶದಲ್ಲಿ ಚೀನಾ ಯಾವ ತಂತ್ರವನ್ನು ಹೂಡಿದೆ ಮತ್ತು ಟ್ವಿಟರ್ ವಾರ್ ನಡೆಸುತ್ತಿರುವ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಅರಿಯಲು ಗುಪ್ತಚರ ಮಾಹಿತಿಯ ಮೊರೆ ಹೋಗಲಾಗಿದೆ.
ಯಾವ ರೀತಿಯ ಪೋಸ್ಟ್‌ಗಳು?
ಕಳೆದ ವರ್ಷ ಗಾಲ್ವಾನ್‌ನಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ಚಿತ್ರಗಳು, ಅರುಣಾಲಚದ ತವಾಂಗ್‌ನ ಗಡಿಯತ್ತ ಚೀನಾ ಸೇನೆಯ ಸಂಚಾರದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಜತೆಗೆ, ಪೂರ್ವ ಲಡಾಖ್‌ನ ದೌಲತಾಬಾಗ್ ಓಲ್ಡಿಯಲ್ಲಿ ದೀರ್ಘ ವ್ಯಾಪ್ತಿಯ ಪಿಸಿಎಲ್ 191 ರಾಕೆಟ್‌ಗಳನ್ನು ನಿಯೋಜನೆ ಮಾಡಿರುವ ಫೋಟೋಗಳನ್ನೂ ಹಾಕಲಾಗಿದೆ.
ಇದನ್ನೂ ಓದಿ : ಶಿರಸಿ: ಬ್ಯಾಗದ್ದೆಯಲ್ಲಿ ಅಡಿಕೆ ಕದ್ದ ಕಳ್ಳರು ಪೊಲೀಸ್ ಬಲೆಗೆ
ಅಮೆರಿಕ ಯುದ್ಧನೌಕೆಯ ಮಾದರಿ ನಿರ್ಮಾಣ
ಅಮೆರಿಕದ ನೌಕಾಪಡೆಯ ವಿಮಾನವಾಹಕ ನೌಕೆಗಳು ಮತ್ತು ಇತರೆ ಯುದ್ಧನೌಕೆಗಳ ಮಾದರಿಗಳನ್ನು ಚೀನಾ ಸೇನೆ ಅಭಿವೃದ್ಧಿಪಡಿಸಿದೆ. ಕ್ಸಿನ್‌ಜಿಯಾಂಗ್ ಮರುಭೂಮಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದ್ದು, ಅಮೆರಿಕದ ಯುದ್ಧನೌಕೆಗಳಿಗೆ ಪ್ರತಿರೋಧವಾಗಿ ಶಕ್ತಿಶಾಲಿ ಯುದ್ಧನೌಕೆಗಳ ನಿರ್ಮಾಣ ಹಾಗೂ ವಿಮಾನವಾಹಕ ನಿಗ್ರಹ ವ್ಯವಸ್ಥೆಯನ್ನು ಸಿದ್ಧಪಡಿಸುವುದೇ ಇದರ ಉದ್ದೇಶವಾಗಿದೆ. ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿ ಅಮೆರಿಕದೊಂದಿಗೆ ಮನಸ್ತಾಪ ಹೆಚ್ಚಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.