ತಿರುಪತಿ: ಸ್ಥಳೀಯರಿಗಷ್ಟೇ ವೈಕುಂಠ ದರ್ಶನ ಟಿಕೆಟ್ ವಿತರಿಸಲು ಟಿಟಿಡಿ ನಿರ್ಧಾರ
Team Udayavani, Dec 19, 2020, 9:17 PM IST
ತಿರುಪತಿ: ಪ್ರಸಕ್ತ ವರ್ಷ ವೈಕುಂಠ ದ್ವಾರ ದರ್ಶನ ಟೋಕನ್‌ಗಳನ್ನು ಕೇವಲ ಸ್ಥಳೀಯ ಭಕ್ತರಿಗಷ್ಟೇ ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಲಿಪಿರಿ ಸಮೀಪದ ವಿಷ್ಣು ನಿವಾಸ ಮತ್ತು ಭೂದೇವಿ ಸಂಕೀರ್ಣದಲ್ಲಿ ಸರ್ವದರ್ಶನ ಟೋಕನ್ ವಿತರಣೆಯ ಕೌಂಟರ್‌ಗಳು ಡಿ.21(ಸೋಮವಾರ) ಸಂಜೆ 5 ಗಂಟೆಗೆ ಮುಚ್ಚಲಿವೆ. ಡಿ.22, 23 ಮತ್ತು 24ರ ದರ್ಶನ ಟೋಕನ್‌ಗಳನ್ನು ಕೂಡ ಸೋಮವಾರಕ್ಕೂ ಮುನ್ನವೇ ವಿತರಿಸಲಾಗುತ್ತದೆ. ತಿರುಪತಿಯ 5 ನಿಗದಿತ ಪ್ರದೇಶಗಳಲ್ಲಿ ಟೋಕನ್ ಲಭ್ಯವಿದ್ದು, ಸ್ಥಳೀಯರು ತಮ್ಮ ಆಧಾರ್ ಕಾರ್ಡ್ ತೋರಿಸಿ ಸರ್ವದರ್ಶನ ಟೋಕನ್ ಖರೀದಿಸಬಹುದು ಎಂದು ಟಿಟಿಡಿ ಹೇಳಿದೆ.
ಇದೇ ವೇಳೆ, ತಿರುಚನೂರಿನ ಶ್ರೀ ಪದ್ಮಾವತಿ ದೇವಿ ದೇಗುಲದ ದರ್ಶನದ ಸಮಯವನ್ನು ಇನ್ನೂ 1 ಗಂಟೆ ವಿಸ್ತರಿಸಲಾಗಿದೆ. ಈ ಮೊದಲು ಬೆಳಗ್ಗೆ 7.30ರಿಂದ ರಾತ್ರಿ 7ರವರೆಗೆ ದರ್ಶನಕ್ಕೆ ಅವಕಾಶವಿತ್ತು. ಈಗ ಅದನ್ನು ರಾತ್ರಿ 8ರವರೆಗೆ ವಿಸ್ತರಿಸಲಾಗಿದೆ. ಏಕನಾಥ ಸೇವೆ ರಾತ್ರಿ 8.30ಕ್ಕೆ ನಡೆಯಲಿದೆ ಎಂದು ಟಿಟಿಡಿ ತಿಳಿಸಿದೆ.
ಇದನ್ನೂ ಓದಿ:ಬ್ಯಾಂಕ್ ವಂಚನೆ ಪ್ರಕರಣ : ಟ್ರಾನ್ಸ್‌ಸಿಟಿ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.