ಬಾಲಕಿಯನ್ನು ಬೆದರಿಸಿ ಅತ್ಯಾಚಾರ: ಮಹಿಳೆಯರಿಬ್ಬರು ಸೇರಿ 6 ಮಂದಿ ಸೆರೆ
ಐದಾರು ದಿನಗಳ ಕಾಲ ಅತ್ಯಾಚಾರ,ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರು
Team Udayavani, Mar 11, 2022, 11:25 AM IST
ಬೆಂಗಳೂರು: ಅಪ್ರಾ ಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋ ಪದಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ 6 ಮಂದಿಯನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಅಗರ ನಿವಾಸಿ ಕಲಾವತಿ (52), ಬಂಡೇಪಾಳ್ಯ ನಿವಾಸಿ ರಾಜೇಶ್ವರಿ (50) ಮತ್ತು ಸಂತ್ರಸ್ತೆ ಮೇಲೆ ಐದಾರು ದಿನಗಳ ಕಾಲ ಅತ್ಯಾಚಾರ ಎಸಗಿದ ಹೊಸೂರಿನ ಆಟೋ ಮೊಬೈಲ್ ಕಂಪನಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೇಶವಮೂರ್ತಿ (47), ಕೋರಮಂಗಲದ ಸತ್ಯರಾಜು (43), ಯಲಹಂಕದ ಶರತ್ (38) ಹಾಗೂ ಬೇಗೂರಿನ ರಫೀಕ್ (38) ಬಂಧಿತರು.
ಆರೋಪಿಗಳು ನಗರದ 16 ವರ್ಷದ ಸಂತ್ರಸ್ತೆ ಮೇಲೆ ಐದಾರು ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳ ವಿರುದ್ಧ ಪೋಕೊÕà ಕಾಯ್ದೆ, ಅಪಹರಣ, ಮಾನವ ಕಳ್ಳ ಸಾಗಾಣಿಕೆ, ಅತ್ಯಾಚಾರ, ವೇಶ್ಯಾವಾಟಿಕೆ, ಜೀವ ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೇರೆ ಜಿಲ್ಲೆಯಿಂದ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿರುವ ಸಂತ್ರಸ್ತೆ ಕುಟುಂಬ ನಗರದಲ್ಲಿ ವಾಸವಾಗಿದ್ದು, ಆಕೆಯ ಪೋಷಕರು ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ಸಂತ್ರಸ್ತೆ ಕೂಡ ಶಾಲೆಗೆ ಹೋಗುತ್ತಾ, ರಾಜೇಶ್ವರಿ ಬಳಿ ಹೊಲಿಗೆ ಯಂತ್ರದ ತರ ಬೇತಿ ಪಡೆಯಲು ಹೋಗುತ್ತಿದ್ದಳು. ಈ ವೇಳೆ ರಾಜೇಶ್ವರಿ, ಸಂತ್ರಸ್ತೆಗೆ ಮನೆಗೆ ಕರೆದೊಯ್ದು ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ಬೆರೆಸಿದ್ದಾಳೆ. ನಂತರ ಕೇಶವಮೂರ್ತಿ ಅತ್ಯಾಚಾರ ಎಸಗಿದ್ದಾನೆ.
ಎಚ್ಚರಗೊಂಡ ಬಳಿಕ ಸಂತ್ರಸ್ತೆಗೆ ತಲೆ ಸುತ್ತು ಬಂದು ಬಿದ್ದಿದ್ದೆ ಎಂದು ಹೇಳಿ, ಸ್ನಾನ ಮಾಡಿಸಿ ಕಳುಹಿಸಿದ್ದಳು. ಎರಡು ದಿನಗಳ ಬಳಿಕ ಮತ್ತೆ ಸಂತ್ರಸ್ತೆಗೆ ರಾಜೇಶ್ವರಿ ಕರೆ ಮಾಡಿ ಬರುವಂತೆ ಸೂಚಿಸಿದ್ದಾರೆ. ಆದರೆ, ಸಂತ್ರಸ್ತೆ ಒಪ್ಪದ್ದಿದ್ದಾಗ, ಈ ವಿಚಾರವನ್ನು ಪೋಷಕರಿಗೆ ಹೇಳುವುದಾಗಿ ಬೆದರಿಸಿ, ಐದಾರು ದಿನಗಳ ಕಾಲ ಮನೆಗೆ ಕರೆಸಿಕೊಂಡಿದ್ದು ಆಗಲೂ ಸತ್ಯರಾಜು, ಶರತ್ ಮತ್ತು ರಫೀಕ್ ಅತ್ಯಾಚಾರ ಎಸಗಿಸಿದ್ದಾರೆ. ಅವರಿಂದ ರಾಜೇಶ್ವರಿ ಹಣ ಸಹ ಪಡೆದುಕೊಂಡಿದ್ದಳು ಎಂದು ಹೇಳಲಾಗಿದೆ. ಇದಾದ ನಂತರವೂ ಕರೆ ಮಾಡಿ, ಮತ್ತೂಬ್ಬ ಗ್ರಾಹಕ ಬಂದಿರುವುದಾಗಿ ಹೇಳಿದಾಗ ಸಂತ್ರಸ್ತೆ ನಿರಾಕರಿಸಿ ದ್ದರು. ಅಲ್ಲದೆ, ಈ ವಿಚಾರವನ್ನು ಪೋಷಕರಿಗೆ ಹೇಳಿದ್ದಾಳೆ.
ಕೂಡಲೇ ಪೋಷಕರು ಪೊಲೀಸ್ ಠಾಣಗೆ ದೂರು ನೀಡಿದ್ದಾರೆ. 36 ಗಂಟೆಯಲ್ಲೇ ಆರೋಪಿಗಳ ಬಂಧನ: ಕಳೆದ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ, ಮಡಿವಾಳ ಎಸಿಪಿ ಸುಧೀರ್ ಎಂ. ಹೆಗಡೆ ಮತ್ತು ಎಚ್‌ಎಸ್‌ಆರ್ ಲೇಔಟ್ ಠಾಣಾಧಿಕಾರಿ ಮುನಿರೆಡ್ಡಿ ಆರೋಪಿಗಳ ಬಂಧನಕ್ಕೆ ತಡರಾತ್ರಿಯೇ 4 ವಿಶೇಷ ತಂಡ ರಚಿಸಿ ದ್ದರು. ಕ್ಷೀಪ್ರ ಕಾರ್ಯಾಚರಣೆ ನಡೆಸಿದ ತಂಡಗಳು ಹೊಸೂರು ಸೇರಿ ವಿವಿಧೆಡೆ ಇದ್ದ ಆರೋಪಿಗಳನ್ನು ಕೇವಲ 36 ಗಂಟೆಯಲ್ಲೇ ಬಂಧಿಸಿದೆ. ವಿಶೇಷ ತಂಡದ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರು
ರಾಜೇಶ್ವರಿ ಮತ್ತು ಕಲಾವತಿ ಕೂಡ ಸುಮಾರು ಆರೇಳು ವರ್ಷಗಳಿಂದ ವೈಯಕ್ತಿಕವಾಗಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರಾಜೇಶ್ವರಿ ಟೈಲರಿಂಗ್ ತರಬೇತಿ ಕೇಂದ್ರದ ಜತೆಗೆ, ಅದರಲ್ಲಿ ತರಬೇತಿಗೆ ಬರುವ ಮಹಿಳೆಯರು, ಯುವತಿಗೆ ಪುಲಾಯಿಸಿ ದಂಧೆಗೆ ದೂಡುತ್ತಿದ್ದಳು. ಇನ್ನು ಆಕೆಯ ಸ್ನೇಹಿತೆ ಕಲಾವತಿ ಕೂಡ ವೇಶ್ಯಾವಾಟಿಕೆ ನಡೆಸುತ್ತಿದ್ದು, ಬೆಂಗಳೂರು ಮಾತ್ರವಲ್ಲದೆ, ತಮಿಳುನಾಡಿನ ಹೊಸೂರಿನಲ್ಲಿಯೂ ಗ್ರಾಹಕರನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದವರ ಸೆರೆ
ಕೆಲಸ ಕೊಡಿಸುವುದಾಗಿ ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರದ ಸಿ.ಆರ್. ಮಧು (43), ಅಸ್ಸಾಂ ಮೂಲದ ರಫಿಕುಲ್ ಇಸ್ಲಾಂ (21), ಪಶ್ಚಿಮ ಬಂಗಾಳದ ರುಬೇಲ್ ಮಂಡಲ್ (28) ಬಂಧಿತರು.
ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ 35 ವರ್ಷದ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳ ಪೈಕಿ ಬ್ಯಾಟರಾಯನಪುರ ಮಧು, ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದ ಟೆಂಪಲ್ ರಸ್ತೆಯ ಜಯಕೃಷ್ಣ ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಈತನಿಗೆ ಅಸ್ಸಾಂನ ರμಕುಲ್ ಇಸ್ಲಾಂ ಮತ್ತು ಪಶ್ಚಿಮ ಬಂಗಾಳದ ರುಬೇಳ್ ಮಂಡಲ್ ಇಬ್ಬರು ಈಶಾನ್ಯ ರಾಜ್ಯಗಳಿಂದ ಅಮಾಯಕ ಮಹಿಳೆಯರನ್ನು ಸರಬರಾಜು ಮಾಡುತ್ತಿದ್ದರು. ಬಡ ಕುಟುಂಬ, ದುರ್ಬಲ ಕುಟುಂಬದ ಅಮಾಯಕ ಮಹಿಳೆಯರನ್ನೇ ಗುರಿಯಾಗಿಸಿ ಕೊಂಡು ಕೆಲಸದ ಆಮಿಷವೊಡ್ಡಿ ನಗರಕ್ಕೆ ಕರೆತಂದು ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಪೊಲೀ ಸರು ಹೇಳಿದರು. ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.