ಉತ್ತರಾಖಂಡದಲ್ಲಿ UCC ಪರೀಕ್ಷೆ? ಮುಂಗಾರು ಅಧಿವೇಶನದಲ್ಲಿ ಸಂಹಿತೆಯಿಲ್ಲ?
Team Udayavani, Jul 6, 2023, 7:00 AM IST
ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಜ್ಜಾಗಿದೆ. ಆದರೆ ಈ ಬಾರಿಯ ಮುಂಗಾರು ಸಂಸತ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿಲ್ಲ.
ಅದರ ಬದಲು ಉತ್ತರಾಖಂಡ ರಾಜ್ಯದಲ್ಲಿ ಮೊದಲಿಗೆ ಯುಸಿಸಿ ಪರೀಕ್ಷಾರ್ಥ ಅನುಷ್ಠಾನವನ್ನು ಕೈಗೊಳ್ಳಲಿದೆ. ಇಲ್ಲಿ ನಾಗರಿಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಬಿಜೆಪಿ ಹೈಕಮಾಂಡ್ ಹೆಚ್ಚಿನ ಗಮನಹರಿಸುತ್ತಿದೆ. ಈ ಪರೀಕ್ಷೆಗೆ ಬಿಜೆಪಿ ಆಡಳಿತಾರೂಢ ರಾಜ್ಯವೇ ಆದಲ್ಲಿ ಮತ್ತಷ್ಟು ಉತ್ತಮವೆಂಬುದು ತಜ್ಞರ ಅಭಿಪ್ರಾಯ.
ಇದಕ್ಕೆ ಪುಷ್ಟಿ ನೀಡುವಂತೆ ಉತ್ತರಾಖಂಡ ಸಿಎಂ ಪುಷ್ಕರ್‌ಸಿಂಗ್ ಧಾಮಿ ಕೂಡ ಹೊಸದಿಲ್ಲಿಯಲ್ಲಿದ್ದು, ರಾಜ್ಯದಲ್ಲಿ ಯುಸಿಸಿ ಅನುಷ್ಠಾನದ ಬಗ್ಗೆ ಉತ್ಸುಕರಾಗಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗೂ ಮಾತುಕತೆ ನಡೆಸುತ್ತಿದ್ದಾರೆಂದು ಮೂಲಗಳು ಮಾಧ್ಯಮ ಸಂಸ್ಥೆಯೊಂದಕ್ಕೆ ಸ್ಪಷ್ಟಪಡಿಸಿವೆ. ಈ ಹಿನ್ನೆಲೆ ಯುಸಿಸಿ ಮೊದಲಿಗೆ ಅನುಷ್ಠಾನಗೊಳ್ಳುವುದು ಉತ್ತಾರಾಖಂಡಲ್ಲೇ ಎಂಬುದು ಬಹುತೇಕ ಖಚಿತವಾದಂತಾಗಿದೆ.
ಭಾರತದ ಸಂವಿಧಾನದಲ್ಲಿ ಯುಸಿಸಿ ಉಲ್ಲೇಖವಿದ್ದರೂ, ಅದರ ಜಾರಿಯನ್ನು ಸಂವಿಧಾನ ಸಂಸ್ಥಾಪಕರು ಕಡ್ಡಾಯಗೊಳಿಸಿಲ್ಲ. ಹೀಗಿರುವಾಗ ಯುಸಿಸಿ ಹೆಸರಿನಲ್ಲಿ ವೈಯಕ್ತಿಕ ಕಾನೂನುಗಳ ಪೆಟ್ಟಿಗೆ (ಪಂಡೋರಾ ಬಾಕ್ಸ್)ಯನ್ನು ತೆರೆದು, ಸಮಾಜವನ್ನು ವಿಭಜಿಸುವ, ದೇಶದಲ್ಲಿರುವ ಸಾಮರಸ್ಯ, ವೈವಿಧ್ಯತೆಯನ್ನು ಹಾಳುಗೆಡವಬೇಡಿ ಎಂದು ಮಾನ್ಯ ಪ್ರಧಾನಮಂತ್ರಿ ಹಾಗೂ ಕಾನೂನು ಸಂಸ್ಥೆಗಳು ಹಾಗೂ ರಾಜಕೀಯ ಮುಖಂಡರಿಗೆ ನಾನು ಮನವಿ ಮಾಡುತ್ತೇನೆ
ವೀರಪ್ಪ ಮೊಲಿ, ಕಾಂಗ್ರೆಸ್ ಹಿರಿಯ ನಾಯಕ/ ಮಾಜಿ ಕಾನೂನು ಸಚಿವ
ಸಂಸತ್ ಚಳಿಗಾಲದ ಕಲಾಪದಲ್ಲಿ ಮಂಡನೆ?
ಯುಸಿಸಿ ಅನುಷ್ಠಾನದ ಕುರಿತು 22ನೇ ಕಾನೂನು ಆಯೋಗವು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿತ್ತು. ಶೀಘ್ರವೇ ಈ ಕುರಿತು ಶಿಫಾರಸು ಕೂಡ ನೀಡಲಿದೆ. ಶಿಫಾರಸುಗಳು ಯುಸಿಸಿ ಜಾರಿಗೆ ಅನುಕೂಲಕರವಾಗಿದ್ದರೆ, ಚಳಿಗಾಲದ ಅಧಿವೇಶನದಲ್ಲಿಯೇ ಮಸೂದೆ ಮಂಡಿಸಲು ಯೋಜಿಸಲಾಗಿದೆ. ಲೋಕಸಭೆಯಲ್ಲಿ ಬಹುಮತದೊಂದಿಗೆ ಮಸೂದೆಗೆ ಅನುಮೋದನೆ ದೊರೆತರೂ ರಾಜ್ಯಸಭೆಯಲ್ಲಿ ಸವಾಲುಗಳು ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಬಿಜೆಪಿ ತುಸು ಚಿಂತನೆ ನಡೆಸಿದೆ.
ಸಿಪಿಐ (ಎಂ) ವಿರುದ್ಧ ಕಾಂಗ್ರೆಸ್ ಸಿಡಿಮಿಡಿ
ಯುಸಿಸಿ ವಿಚಾರವಾಗಿ ಕೇರಳದಲ್ಲಿ ಎಡಪಕ್ಷಗಳ ನಡುವೆಯೇ ಭಿನ್ನಮತ ಎದುರಾಗಿದೆ. ಆಡಳಿತಾರೂಢ ಸಿಪಿಐ (ಎಂ) ಎಡಪಕ್ಷಗಳ ನಿಲುವು ಧಿಕ್ಕರಿಸಿ, ಯುಸಿಸಿಗೆ ಬೆಂಬಲವಾಗಿದೆ ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಒಕ್ಕೂಟ ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್ ಆರೋಪಿಸಿದೆ. ಕೇರಳದ ಪ್ರಥಮ ಮುಖ್ಯಮಂತ್ರಿ ನಂಬೂದಿರಿಪಾಡ್ ಅವರು 1957ರಲ್ಲೇ ಯುಸಿಸಿಯನ್ನು ಬೆಂಬಲಿಸಿದ್ದರು. ಇಂದಿಗೂ ಸಿಪಿಐ ಅದೇ ನಿಲುವನ್ನು ಪಾಲಿಸುತ್ತಿದೆ. ಆದರೆ ಬಹಿರಂಗಪಡಿಸುತ್ತಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.