ಪತಿ ಕಾರಿನಲ್ಲೇ ಇರಬೇಕು, ಪತ್ನಿ ಶಾಪಿಂಗ್‌ ಮುಗಿಸಿ ಬರಬೇಕು! ಉಡುಪಿ ನಗರ ಪಾರ್ಕಿಂಗ್‌ ಅವಸ್ಥೆ

ಸ್ವಾಮಿ ಸ್ವಲ್ಪ ಜಾಗ ಬಿಡಿ ಅಭಿಯಾನ

Team Udayavani, Feb 9, 2021, 7:08 PM IST

traffic

ನಗರದ ಪಾರ್ಕಿಂಗ್‌ ಸಮಸ್ಯೆ ಎಷ್ಟು ಹೇಳಿದರೂ ಸಾಲದು. ವ್ಯವಸ್ಥಿತ, ಸುಸಜ್ಜಿತ ಪಾರ್ಕಿಂಗ್‌ ಎನ್ನುವ ಪರಿಕಲ್ಪನೆಯೇ ಇನ್ನೂ ಜಾರಿಗೆ ಬಂದಿಲ್ಲ. ವಾಹನಗಳನ್ನು ಎಲ್ಲೆಂದರಲ್ಲಿ, ಹೇಗೆಂದರಲ್ಲಿ ನಿಲ್ಲಿಸುವುದು ಒಂದು ಸಮಸ್ಯೆ ಯಾದರೆ, ಜನದಟ್ಟಣೆ ಇರುವ ಅವಧಿಯಲ್ಲಿ, ರಜಾ ದಿನಗಳಲ್ಲಿ, ಉತ್ಸವದ ಸಂದರ್ಭದಲ್ಲಿ ಪೇಟೆಗೆ ಬರದೇ ಇರುವುದು ವಾಸಿ ಎನ್ನುವಂತಾಗಿದೆ. ಇದು ನಗರದ ಭವಿಷ್ಯದ ಬೆಳವಣಿಗೆ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ನಗರದಲ್ಲಿನ ವಾಹನ ನಿಲುಗಡೆ ಸಮಸ್ಯೆಯನ್ನು ಯಥಾವತ್ತಾಗಿ ವಿವರಿಸಿ ಪರಿಹಾರಕ್ಕೆ ಪ್ರೇರೇಪಿಸುವುದೇ “ಸ್ವಾಮಿ, ಸ್ವಲ್ಪ ಜಾಗ ಬಿಡಿ’ ಅಭಿಯಾನದ ಉದ್ದೇಶ.

ಘಟನೆ 01 : ಶುಕ್ರವಾರ ಸಂಜೆ 7 ಗಂಟೆ. ಒಂದು ಕುಟುಂಬ ನಗರದ ಹೃದಯ ಭಾಗದಲ್ಲಿರುವ ಸಿಟಿ ಬಸ್‌ಸ್ಟಾಂಡ್‌ನ‌ ಹಿಂದಿನ ರಸ್ತೆ (ಶೂ ಅಂಗಡಿಯಿಂದ ಹಿಡಿದು ಗಿಫ್ಟ್ ಸ್ಟೋರ್ ಇರುವಂಥ ಜನನಿಬಿಡ ರಸ್ತೆ) ರಿಲಯನ್ಸ್‌ ಮಾಲ್‌ಗೆ
ಭೇಟಿಕೊಡಲು ಕಾರಿನಲ್ಲಿ ಬರುತ್ತದೆ. ಕುಟುಂಬದ ಮುಖ್ಯಸ್ಥ ಕುಟುಂಬವನ್ನು ಕೆಳಗಿಳಿಸಿ ಕಾರು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಅಕ್ಕಪಕ್ಕದಲ್ಲಿ ಸ್ಥಳವಿಲ್ಲ. ಅಷ್ಟರಲ್ಲಿ ಹಿಂದಿನಿಂದ ಬಂದ ಖಾಸಗಿ ಬಸ್‌ನ ಹಾರ್ನ್ ಜೋರಾಗುತ್ತದೆ. ಮುಂದೆಲ್ಲಾದರೂ ನಿಲ್ಲಿಸೋಣ ಎಂದು ಮುಂದಕ್ಕೆ ಚಲಿಸಿದ ಕಾರಿನ ಚಾಲಕ ಬಲಕ್ಕೆ ತೆಗೆದುಕೊಂಡು ಚಿತ್ತರಂಜನ್‌ ಸರ್ಕಲ್‌ ವರೆಗೂ ಹೋಗಿ ಎಲ್ಲೋ ಒಂದು ಕಡೆ ಕಾರು ನಿಲ್ಲಿಸಿ ನಿಟ್ಟುಸಿರು ಬಿಡುತ್ತಾನೆ.

ಘಟನೆ 02: ಶ್ರೀ ಕೃಷ್ಣ ಮಠದಲ್ಲಿ ಚೂರ್ಣೋತ್ಸವ. ಹೊರ ಊರಿನಿಂದ ಬಂದವರೊಬ್ಬರು ಕಲ್ಸಂಕ ರಸ್ತೆಯಲ್ಲಿ ಬಂದು ರಾಜಾಂಗಣದಲ್ಲಿ ವಾಹನ ನಿಲ್ಲಿಸಲು ಅಣಿ ಯಾ ಗುತ್ತಾರೆ. ಸ್ಥಳ ಖಾಲಿಯಿಲ್ಲ. ಏನೂ ಮಾಡುವಂತಿಲ್ಲ. ಮುಂದೆಲ್ಲಾದರೂ ಎಂದು ಮುಂದಕ್ಕೆ ಚಲಿಸುತ್ತಾರೆ. ಸ್ವಲ್ಪ ದೂರ ಬರುವಷ್ಟರಲ್ಲೇ ಟ್ರಾಫಿಕ್‌ ಜಾಮ್‌. ಆ ಕಡೆಯೂ ಹೋಗುವಂತಿಲ್ಲ, ಈ ಕಡೆಯೂ ಬರುವಂತಿಲ್ಲ. ಸರಿ, ಮುಂದಕ್ಕೆ ಚಲಿಸುವ ಇನ್ನಿತರ ವಾಹನಗಳ ಸಾಲಿನಲ್ಲಿ ನಿಂತು ಅನಿವಾರ್ಯವಾಗಿ ಜಾಗ ಸಿಗದೇ ಶ್ರೀ ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ಮುನ್ನಡೆದು, ಬಲಕ್ಕೆ ತೆಗೆದುಕೊಂಡು ಮುಂದಕ್ಕೆ ಚಲಿಸಿ ಚಿತ್ತರಂಜನ್‌ ಸರ್ಕಲ್‌ಗೆ ಬಂದರೆ ಅಲ್ಲೆಲ್ಲ ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗಿದೆ. ಏನೂ ಮಾಡಲಿಕ್ಕಾಗದೇ ಕೈ ಚೆಲ್ಲಿ ವಾಹನದಲ್ಲೇ ಸಮಯ ಕಳೆಯುತ್ತಾನೆ.

ಘಟನೆ 03: ಒಂದು ದಿನದ ಸಂಜೆ ಹೊತ್ತು. ಸಿಟಿ ಬಸ್‌ಸ್ಟಾಂಡ್‌ನ‌ ಬಳಿ ಬೈಕ್‌ನ್ನು ಬಲಕ್ಕೆ ತೆಗೆದುಕೊಳ್ಳುವಾಗಲೇ ಟ್ರಾಫಿಕ್‌ ಜಾಮ್‌. ಕಷ್ಟಪಟ್ಟು ಚೂರು ಚೂರು ಮುಂದಕ್ಕೆ ಹೋಗಿ ತತ್‌ಕ್ಷಣ ಬಲಕ್ಕೆ ತೆಗೆದುಕೊಂಡು ಮುನ್ನುಗ್ಗಲು ಹೋದರೆ ಅಲ್ಲೂ ಟ್ರಾಫಿಕ್‌ ಜಾಮ್‌. ಎಲ್ಲೂ ಹೋಗುವಂತಿಲ್ಲ. ವಾಹನವನ್ನೂ ನಿಲ್ಲಿಸಿ ನಡೆದು ಹೋಗುವಂತಿಲ್ಲ. ಬೇಸರದಲ್ಲಿ ನಗರಸಭೆಗೆ, ಪೊಲೀಸರಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ, “ಈ ವ್ಯವಸ್ಥೆಯನ್ನೊಂದು ಸರಿ ಮಾಡಲಿಕ್ಕಾಗದಾ?’ ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾನೆ.

ಈ ಮೂರು ಪ್ರಸಂಗ ವಿವರಿಸುವುದು ಬೆಳೆಯುತ್ತಿರುವ ಉಡುಪಿ ನಗರದಲ್ಲಿನ ವಾಹನ ನಿಲುಗಡೆಯ ಹಾಗೂ ಸುಗಮ ಸಂಚಾರದ ಸಮಸ್ಯೆಗಳನ್ನು. ಒಂದೇ ಸಾಲಿನಲ್ಲಿ ಹೇಳುವುದಾದರೆ ತನ್ನ ಪತ್ನಿ ಮತ್ತು ಮಕ್ಕಳನ್ನು ಕರೆತರುವ ಪತಿ ತಾನು ಕಾರಿನಲ್ಲೇ ಕುಳಿತು, ಉಳಿದವರಿಗೆ ಶಾಪಿಂಗ್‌ ಮಾಡಲು ಹೇಳಬೇಕು. ಆ ಬಳಿಕ ಕುಟುಂಬವನ್ನು ಕರೆದುಕೊಂಡು ಹೊರಡಬೇಕು.

ಈ ಮೂರು ಪ್ರಸಂಗ ವಿವರಿಸುವುದು ಬೆಳೆಯುತ್ತಿರುವ ಉಡುಪಿ ನಗರದಲ್ಲಿನ ವಾಹನ ನಿಲುಗಡೆಯ ಹಾಗೂ ಸುಗಮ ಸಂಚಾರದ ಸಮಸ್ಯೆಗಳನ್ನು. ಒಂದೇ ಸಾಲಿನಲ್ಲಿ ಹೇಳುವುದಾದರೆ ತನ್ನ ಪತ್ನಿ ಮತ್ತು ಮಕ್ಕಳನ್ನು ಕರೆತರುವ ಪತಿ ತಾನು ಕಾರಿನಲ್ಲೇ ಕುಳಿತು, ಉಳಿದವರಿಗೆ ಶಾಪಿಂಗ್‌ ಮಾಡಲು ಹೇಳಬೇಕು. ಆ ಬಳಿಕ ಕುಟುಂಬವನ್ನು ಕರೆದುಕೊಂಡು ಹೊರಡಬೇಕು.

ಉಡುಪಿ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ವಾಹನಗಳ ಸಂಖ್ಯೆ : 4,69,835
ದ್ವಿಚಕ್ರ ವಾಹನಗಳು : 3,47,004
ಕಾರುಗಳ ಸಂಖ್ಯೆ : 64,944
ಆಟೋ ರಿಕ್ಷಾಗಳು : 21,287
ಇತರ ವಾಹನಗಳು : 35,613
ಸ್ಕೂಲ್‌ ಬಸ್‌ಗಳು : 987

ನೀವು ಎದುರಿಸಿದ ಸಮಸ್ಯೆ ನಮ್ಮಲ್ಲಿ ಹೇಳಿ
ಉಡುಪಿ ನಗರದಲ್ಲಿ ವಾಹನ ನಿಲುಗಡೆಯ ಸಮಸ್ಯೆಯ ತೀವ್ರತೆ ನಿಮಗೆ ತಿಳಿದೇ ಇದೆ. ನೀವು ಈ ಕುರಿತು ಎದುರಿಸಿರುವ ಘಟನೆ, ಸಮಸ್ಯೆ ಇದ್ದರೆ  (7618774529) ನಮಗೆ ತಿಳಿಸಿ. ಸೂಕ್ತವಾದವುಗಳನ್ನು ಪ್ರಕಟಿಸುತ್ತೇವೆ.

ಟಾಪ್ ನ್ಯೂಸ್

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

1-swami-sm-bg

Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.