ಉಡುಪಿ ಜಿಲ್ಲೆಯಲ್ಲಿ 126 ಮಂದಿಗೆ ಕೋವಿಡ್ ಪಾಸಿಟಿವ್! ಸೋಂಕಿಗೆ ನಾಲ್ವರು ಬಲಿ
Team Udayavani, Aug 3, 2020, 9:13 PM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ನಾಲ್ಕು ಸಾವು, 1,086 ನೆಗೆಟಿವ್ ಮತ್ತು 126 ಪಾಸಿಟಿವ್ ಪ್ರಕರಣ ವರದಿಯಾಗಿದೆ.
ಉದ್ಯಾವರದ 60 ವರ್ಷದವರೊಬ್ಬರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರಿಗೆ ಮಧುಮೇಹದ ಸಮಸ್ಯೆ ಇತ್ತು. ಮಂದಾರ್ತಿ ಸಮೀಪದ 49 ವರ್ಷದ ಮಹಿಳೆಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಂತರ ಡಾ|ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಕುಂದಾಪುರ ಕಿರಿಮಂಜೇಶ್ವರದ 80 ವರ್ಷದ ಮಹಿಳೆಯೊಬ್ಬರು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಉಡುಪಿ ಇಂದಿರಾನಗರದ 44 ವರ್ಷದವರೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಇದುವರೆಗಿನ ಒಟ್ಟು ಸಾವು 44ಕ್ಕೇರಿದೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಮೃತಪಟ್ಟ ಹೊರ ಜಿಲ್ಲೆಯವರು ಸೇರಿಲ್ಲ.
ಪಾಸಿಟಿವ್ ಪ್ರಕರಣಗಳಲ್ಲಿ 58 ಮಂದಿ ಉಡುಪಿ ತಾಲೂಕಿನವರು, 34 ಮಂದಿ ಕುಂದಾಪುರ ತಾಲೂಕಿನವರು, 28 ಮಂದಿ ಕಾರ್ಕಳ ತಾಲೂಕಿನವರು. ಆರು ಮಂದಿ ಇತರ ಜಿಲ್ಲೆಯವರಿದ್ದಾರೆ. 70 ಪುರುಷರು, ಒಬ್ಬ ಬಾಲಕ, 52 ಮಹಿಳೆಯರು, ಮೂವರು ಬಾಲಕಿಯರು.
116 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಬಿಡುಗಡೆಗೊಂಡರು. ಕುಂದಾಪುರ ತಾಲೂಕು ಆಸ್ಪತ್ರೆಯಿಂದ 56, ಕಾರ್ಕಳದಿಂದ 10, ಉಡುಪಿ ಡಾ|ಟಿಎಂಎ ಪೈ ಆಸ್ಪತ್ರೆಯಿಂದ 13, 37 ಮಂದಿ ಹೋಮ್ ಐಸೊಲೇಶನ್ನಲ್ಲಿದ್ದವರು ಬಿಡುಗಡೆಗೊಂಡರು.
ಒಟ್ಟು 4,800 ಪಾಸಿಟಿವ್ ಪ್ರಕರಣಗಳಲ್ಲಿ 2,812 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1,952 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ 1,122 ಮಂದಿಯ ಗಂಟಲುದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು 526 ಮಂದಿಯ ವರದಿ ಬರಬೇಕಾಗಿದೆ. ಸದ್ಯ 1,301 ಜನರು ಮನೆಗಳಲ್ಲಿ, 310 ಜನರು ಐಸೊಲೇಶನ್ ವಾರ್ಡ್ಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಹೋಮ್ ಐಸೊಲೇಶನ್ನಲ್ಲಿ 1,116 ಮಂದಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.