ಉಡುಪಿ ಜಿಲ್ಲೆಯಲ್ಲಿ 962 ಪಾಸಿಟಿವ್ ಪ್ರಕರಣ ಪತ್ತೆ, ಓರ್ವ ಮಹಿಳೆ ಸೇರಿ 5 ಮಂದಿ ಸಾವು
Team Udayavani, May 9, 2021, 7:23 PM IST
ಉಡುಪಿ : ಉಡುಪಿ ಜಿಲ್ಲೆಯಲ್ಲಿ ರವಿವಾರ 962 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 5 ಮಂದಿ ಸಾವನ್ನಪ್ಪಿದ್ದಾರೆ. ಉಡುಪಿಯ 58 ವರ್ಷದ ಇಬ್ಬರು ಪುರುಷರು, ಕುಂದಾಪುರದ 66 ವರ್ಷದ ಪುರುಷ, ಉಡುಪಿಯ 63 ವರ್ಷದ ಪುರುಷ, ಕುಂದಾಪುರದ 67 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಸೋಂಕು ತಗಲಿದವರಲ್ಲಿ 19 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 943 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ರವಿವಾರ 2550 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಯಿತು. 543 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6,372 ಪ್ರಕರಣಗಳು ಸಕ್ರಿಯವಾಗಿವೆ.
ಲಸಿಕೆ ವಿವರ
ರವಿವಾರ 11 ಮಂದಿ ಎರಡನೆ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೆ ಒಟ್ಟು 1,94,805 ಮಂದಿ ಮೊದಲ ಬಾರಿಗೆ ಹಾಗೂ 57,659 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ :ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : 3 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.