ಉಡುಪಿ ; ಜಿಲ್ಲಾಧಿಕಾರಿಯಿಂದ ಸಾರ್ವಜನಿಕರಿಗೆ ಕೋವಿಡ್ ಜಾಗೃತಿ ಪಾಠ, ಮಾಸ್ಕ್ ಧರಿಸದವರಿಗೆ ದಂಡ
Team Udayavani, Mar 23, 2021, 8:50 PM IST
ಉಡುಪಿ : ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದ್ದು, ಜಿಲ್ಲಾಧಿಕಾರಿ ಜಿ. ಜಗದೀಶ್ ಮಂಗಳವಾರ ಸಂಜೆ ನಗರದಲ್ಲಿ ದಿಢೀರ್ ದಾಳಿ ನಡೆಸಿ, ನಿಮಯಗಳ ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಜರ್ ಬಳಕೆ ಮಾಡಬೇಕು. ಮುಂದಿನ ಸಾರ್ವಜನಿಕರು ಕೊವೀಡ್ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದರೆ ದಂಡದ ಜತೆಗೆ ಕಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ಖಾಸಗಿ ಅಥವಾ ಸಾರ್ವಜನಿಕ ಸಮಾರಂಭ ನಡೆಸಬಾರದು. ತಹಶೀಲ್ದಾರ್ ಅನುಮತಿ ನೀಡುವ ಸಂದರ್ಭದಲ್ಲಿ ಕಾರ್ಯಕ್ರಮದ ನೋಡಲ್ ಅಧಿಕಾರಿಯ ಹೆಸರು ನಮೂದಿಸಬೇಕು. ಇವರು ಉಪಸ್ಥಿತಿಯಲ್ಲಿ ಸಹ ಕೋವಿಡ್ ನಿಯಮಾವಳಿ ಉಲ್ಲಂಘನೆಯಾದರೆ ಉಸ್ತುವಾರಿ ಅಧಿಕಾರಿ ಮೇಲೆಯೂ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಎಂಐಟಿಯಲ್ಲಿ ನಿಯಂತ್ರಣ
ಎಂಐಟಿ ಕ್ಯಾಂಪಸ್‌ನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಮಾ.23ರಂದು 28 ಪ್ರಕರಣಗಳ ಪೈಕಿ 7 ಮಾತ್ರ ಎಂಐಟಿ ವಿದ್ಯಾರ್ಥಿಗಳದು. 4 ಸಾವಿರ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗಿದೆ. ದಿನಕ್ಕೆ 1000 ವಿದ್ಯಾರ್ಥಿಗಳ ಮಾದರಿ ಸಂಗ್ರಹಿಸಲಾಗುತ್ತಿ¤ದೆ. ಎಂಐಟಿ ಕ್ಯಾಂಪಸ್ ಕೋವಿಡ್‌ಮುಕ್ತ ಮಾಡಲಾಗುವುದು. ಜಿಲ್ಲೆಯ ಇನ್ನೆರೆಡು ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿದೆ ಎಂದು ಹೇಳಿದರು.
ಇದನ್ನೂ ಓದಿ :ಮಾ.24ಕ್ಕೆ ಮೇಲುಕೋಟೆ ವೈರಮುಡಿ ಸರಳ ಉತ್ಸವ : ನೇರ ಪ್ರಸಾರ ವೀಕ್ಷಣೆಗೆ ಇಲ್ಲಿದೆ ಮಾಹಿತಿ
ಮಾರಿಪೂಜೆಗೆ 500 ಮಿತಿ
ಕಾಪು ಮಾರಿಪೂಜೆಯಲ್ಲಿ ಒಂದೇ ಬಾರಿ 500ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಪೂಜೆ ಮಾಡುವವರು ದೇವರ ದರ್ಶನ ಮಾಡಿ ಹೋಗಬಹುದು. ಒಂದೇ ದಿನ 400 ಕೇಸ್ ಬಂದಾಗಲೂ ಕರೊನಾ ನಿಯಂತ್ರಣ ಮಾಡಿದ್ದೇವೆ. ಹೀಗಾಗಿ ಸದ್ಯಕ್ಕೆ ಲಾಕ್‌ಡೌನ್ ಮಾಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಸುರಕ್ಷತಾ ಕ್ರಮ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ನಿಯಮ ಉಲ್ಲಂ ಸುವವರ ವಿರುದ್ಧ ದಂಡ ಪ್ರಕರಣ ಹೆಚ್ಚು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವಪ್ರಭು, ಪೌರಾಯುಕ್ತ ಡಾ| ಉದಯ, ನಗರಸಭೆ ಎಇಇ ಮೋಹನ್ ರಾಜ್ , ಕಂದಾಯಾಧಿಕಾರಿ ಧನಂಜಯ, ಆರೋಗ್ಯಾಧಿಕಾರಿ ಕರುಣಾಕರ್ ಹಾಗೂ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿ ದಂಡ ಸಂಗ್ರಹಿಸಿದರು.
ಭಾರೀ ದಂಡ
ಮಾಸ್ಕ್ ಧರಿಸಿದ ಸೇನಾ ನೇಮಕಾತಿಯ ಬಂದ ಅಭ್ಯರ್ಥಿಗಳು, ಬಸ್ ಡ್ರೈವರ್, ಕಂಡೆಕ್ಟರ್, ರಿಕ್ಷಾ ಚಾಲಕರು, ಸಾರ್ವಜನಿಕರು, ದ್ವಿಚಕ್ರವಾಹನ ಸವಾರರಿಂದ ಭಾರೀ ದಂಡವನ್ನು ಸಂಗ್ರಹಿಸಲಾಯಿತು. ನಿಯಾವಳಿಯನ್ನು ಉಲ್ಲಂ ಸಿದ ವಾಣಿಜ್ಯ ಮಳಿಗೆ ಮಾಲಕರ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿದ್ದು, ಸುಮಾರು 21,000 ರೂ. ದಂಡ ಸಂಗ್ರಹವಾಗಿದೆ.
ಮಾಸ್ಕ್ ವಿತರಣೆ
ಸಂಚಾರಿ ಪೊಲೀಸರು ಮಾಸ್ಕ್ ಧರಿಸಿದವರಿಗೆ 100 ರೂ. ದಂಡ ವಿಧಿಸುವುದರ ಜತೆಗೆ ಆ ವ್ಯಕ್ತಿಗೆ ಮಾಸ್ಕ್ ನೀಡಿದ್ದಾರೆ. ಹಣವಿಲ್ಲದ ವ್ಯಕ್ತಿಗೂ ಮಾನವೀಯ ನೆಲೆಯಲ್ಲಿ ಮಾಸ್ಕ್ ವಿತರಿಸಿದ ದೃಶ್ಯ ಮಂಗಳವಾರ ಕ್ಲಾಕ್ ಟವರ್ ಸಮೀಪ ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.