ಹಿಟ್ಲರ್ ಬಳಿಕ ಇದೇ ಪ್ರಥಮ ಬಾರಿಗೆ ರಷ್ಯಾದ ಬಾಂಬ್ ದಾಳಿಗೆ ನಲುಗಿದ ಕೀವ್, ಖಾರ್ಕಿವ್ ನಗರ
ಮಿಸೈಲ್ ದಾಳಿ ನಡೆಸಿದ ಪರಿಣಾಮ ಖಾರ್ಕಿವ್ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.
Team Udayavani, Mar 1, 2022, 3:47 PM IST
ಮಾಸ್ಕೋ/ಕೀವ್: ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ನೇತೃತ್ವದ ಪಡೆ ಉಕ್ರೇನ್ ನ ಕೀವ್ ಮತ್ತು ಖಾರ್ಕಿವ್ ನಗರದ ಮೇಲೆ ಬಾಂಬ್ ದಾಳಿ ನಡೆಸಿದ್ದ ನಂತರ ಇದೇ ಮೊದಲ ಬಾರಿಗೆ ರಷ್ಯಾದ ಸೇನಾಪಡೆ ಪ್ರಬಲ ಬಾಂಬ್ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಷ್ಯಾ- ಉಕ್ರೇನ್ ಯುದ್ಧ: ರಷ್ಯಾ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಸಾವು
ಮಂಗಳವಾರ (ಮಾರ್ಚ್ 01) ರಷ್ಯಾದ ಪಡೆಗಳು ಮಿಸೈಲ್ ದಾಳಿ ನಡೆಸಿದ ಪರಿಣಾಮ ಖಾರ್ಕಿವ್ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಸೋಮವಾರ ರಷ್ಯಾದ ಶೆಲ್ ದಾಳಿಗೆ 17 ಮಂದಿ ಸಾವನ್ನಪ್ಪಿದ್ದರು.
ಕೀವ್ ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಸಿದ್ದು, ಸುಮಾರು 40 ಮೈಲಿಗಳಷ್ಟು ರಷ್ಯಾದ ಸೇನಾಪಡೆ ಖಾರ್ಕಿವ್ ನತ್ತ ಆಗಮಿಸುತ್ತಿರುವ ಸೆಟಲೈಟ್ ಚಿತ್ರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ರಷ್ಯಾ ಪಡೆಯ ಬಾಂಬ್ ದಾಳಿಗೆ ಖಾರ್ಕಿವ್ ನಲ್ಲಿ ಕರ್ನಾಟಕ ಮೂಲದ ಹಾವೇರಿಯ ನವೀನ್ ಶೇಖರಪ್ಪ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಹಿಟ್ಲರ್ ಕಾಲದಲ್ಲಿ ನಲುಗಿ ಹೋಗಿದ್ದ ಉಕ್ರೇನ್:
20ನೇ ಶತಮಾನದಲ್ಲಿ ಅಡಾಲ್ಫ್ ಹಿಟ್ಲರ್ ಎರಡನೇ ಜಾಗತಿಕ ಯುದ್ಧ ಘೋಷಿಸಿದ್ದ ವೇಳೆ ಉಕ್ರೇನ್ ನ ಕೀವ್ ಮತ್ತು ಖಾರ್ಕಿವ್ ನಗರ ಬಾಂಬ್ ದಾಳಿಗೆ ನಲುಗಿ ಹೋಗಿದ್ದವು. 1941ರಲ್ಲಿ ಕೀವ್ ಮತ್ತು ಖಾರ್ಕಿವ್ ನಗರ ನಾಝಿ ಜರ್ಮನಿ ಪಡೆಗಳ ದಾಳಿಯಲ್ಲಿ ಭಾರೀ ಪ್ರಮಾಣದ ಸಾವು, ನೋವುಗಳಿಗೆ ಸಾಕ್ಷಿಯಾಗಿತ್ತು.
1941ರ ಸೆಪ್ಟೆಂಬರ್ ನಲ್ಲಿ ಜರ್ಮನಿಯ ಪಡೆಗಳು ಕೀವ್ ನಗರದೊಳಕ್ಕೆ ಪ್ರವೇಶಿಸಿ ಎರಡು ದಿನಗಳಲ್ಲಿ 30,000ಕ್ಕೂ ಅಧಿಕ ಜನರನ್ನು ಹತ್ಯೆಗೈದಿತ್ತು. ನಂತರದ ದಿನಗಳಲ್ಲಿ ಜರ್ಮನಿ ಸೈನಿಕರು ಸಾವಿರಾರು ಜನರ ಮಾರಣ ಹೋಮ ನಡೆಸಿತ್ತು ಎಂದು ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಜರ್ಮನ್ ಪಡೆ ಕೇವಲ ನಾಲ್ಕೇ ದಿನಗಳಲ್ಲಿ ಖಾರ್ಕಿವ್ , ಕೀವ್ ನಗರವನ್ನು ತನ್ನ ವಶಕ್ಕೆ ಪಡೆದಿತ್ತು. ಇದೀಗ 1941ರ ಎರಡನೇ ವಿಶ್ವಯುದ್ಧದ ಸಂದರ್ಭದ ಸಂಕಷ್ಟವನ್ನೇ ಉಕ್ರೇನ್ 2022ರಲ್ಲಿ ಎದುರಿಸುವಂತಾಗಿದೆ ಎಂದು ವರದಿ ವಿಶ್ಲೇಷಿಸಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಶುಕ್ರವಾರ ತಮ್ಮ ಭಾಷಣದಲ್ಲಿ, ಎರಡನೇ ಜಾಗತಿಕ ಯುದ್ಧದ ರೀತಿ ಮತ್ತೆ ಕದನ ಮುಂದುವರಿಸಬೇಡಿ, ಇಂದು ರಾತ್ರಿ ಕೀವ್ ನಗರದಲ್ಲಿ ಭಾರೀ ಬಾಂಬ್ ಗಳ ಸದ್ದು ಕೇಳಿಸಿದೆ. ಇದು 1941ರ ಎರಡನೇ ಮಹಾಯುದ್ಧದಂತೆ ಇದೆ. ದಯವಿಟ್ಟು ರಷ್ಯಾದ ಪ್ರಜೆಗಳು ಇದನ್ನು ವಿರೋಧಿಸಬೇಕು. ನೀವು ಕೇಳಿಸಿಕೊಳ್ಳುತ್ತಿದ್ದೀರಿ..ನಾವು ನಿಮ್ಮವರೇ…ಯುದ್ಧದಿಂದ ಆಗುವ ಜೀವಹಾನಿ ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.