ಕೇಂದ್ರ ಬಜೆಟ್ : ಚಿನ್ನ, ಬೆಳ್ಳಿ ಸುಂಕ ಇಳಿಕೆ ; ಎನ್ಆರ್‌ಐಗಳಿಗೆ ಅನುಕೂಲ
Team Udayavani, Feb 1, 2021, 10:40 PM IST
ವಿದೇಶಗಳಿಂದ ಚಿನ್ನ, ಬೆಳ್ಳಿ ತರುವವರಿಗೆ ಸಂತಸದ ಸುದ್ದಿ ಇದು. ಇತರ ದೇಶಗಳಿಂದ ಚಿನ್ನ ಮತ್ತು ಬೆಳ್ಳಿ ಆಮದು ಮಾಡಿಕೊಳ್ಳುವವರಿಗೆ ಕ್ರಮವಾಗಿ ಸುಂಕದ ಪ್ರಮಾಣ ಶೇ.12.5ರಿಂದ ಶೇ. 7.5ಕ್ಕೆ ಇಳಿಸಲಾಗಿದೆ. ಪ್ರಸ್ತುತ ಚಿನ್ನ ಮತ್ತು ಬೆಳ್ಳಿಯ ಮೇಲೆ ಶೇ.12.5 ಕಸ್ಟಮ್ ಸುಂಕ ವಿಧಿಸಲಾಗುತ್ತಿದೆ.
ಪ್ರಪಂಚದಲ್ಲಿ ಸ್ವರ್ಣ, ರಜತವನ್ನು ಹೆಚ್ಚು ಖರೀದಿಸುವ ದೇಶದಲ್ಲಿ ಭಾರತವು ಎರಡನೇ ರಾಷ್ಟ್ರವಾಗಿದೆ. 2019ರ ಜುಲೈನಲ್ಲಿ ಶೇ. 10ರಷ್ಟು ಏರಿಕೆಯಾದ ಪರಿಣಾಮ ಬೆಲೆ ಏರಿಕೆ ಕಂಡಿದೆ. ಇದನ್ನು ತರ್ಕಬದ್ಧ ಗೊಳಿಸ ಲಾಗುವುದು. ಈ ಹಿಂದೆ ಇದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಆಸುಪಾಸಿಗೆ ನಿಗದಿತ ಬೆಲೆಯನ್ನು ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿ ಸಲಾಗಿದೆ. ಘೋಷಣೆ ಬಳಿಕ ಕಮಾಡಿಟಿ ಎಕ್ಸ್‌ಚೇಂಜ್ ನಲ್ಲಿ ಫ್ಯೂಚರ್ ಗೋಲ್ಡ್ ಶೇ.3 ಅಂದರೆ ಪ್ರತಿ ಹತ್ತು ಗ್ರಾಮ್‌ಗೆ 1,500 ರೂ. ದರ ಇಳಿಕೆಯಾಗಿದೆ.
ಎನ್ಆರ್‌ಐಗಳಿಗೆ ಅನುಕೂಲ: ಅನಿವಾಸಿ ಭಾರತೀಯರು ಎದುರಿಸುತ್ತಿರುವ ಎರಡು ರೀತಿಯ ತೆರಿಗೆ ಸಂಕಷ್ಟದಿಂದ ಮುಕ್ತಿ ಪಡೆಯಲು ತೆರಿಗೆ ಇಲಾಖೆ ಕೆಲವು ನಿಯಮಗಳನ್ನು ಜಾರಿಗೆ ತರಲಿದೆ. ಅನಿವಾಸಿ ಭಾರತೀಯರು ತಮ್ಮ ದೇಶಕ್ಕೆ ಮರಳಿದಾಗ ವಿದೇಶದಲ್ಲಿ ಹೊಂದಿರುವ ನಿವೃತ್ತಿ ಖಾತೆ ಮತ್ತು ಅದಾಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ತೆರಿಗೆ ಅವಧಿ ತೊಂದರೆ, ನಿಶ್ವಿತ ಠೇವಣಿ, ಉಳಿತಾಯ ಖಾತೆ ಆದಾಯ, ಸಾಲ ಪಡೆಯಲು ಕಷ್ಟಪಡುತ್ತಾರೆ. ಈ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:ಹಿರಿಯರಿಗೆ ಫೈಲಿಂಗ್ ವಿನಾಯ್ತಿ : 75 ವರ್ಷ ಮೀರಿದವರಿಗೆ ಅನ್ವಯ
ಕಸ್ಟಮ್ಸ್ ಸುಂಕ ಇಳಿಕೆ
ಚೀನಾದಿಂದ ಆಮದಾಗುವ ಕೆಲವು ಉಕ್ಕಿನ ಉತ್ಪನ್ನಗಳಿಗೆ ಆ್ಯಂಟಿ ಡಂಪಿಂಗ್ ಸುಂಕ ರದ್ದು ಮಾಡಲು ಚಿಂತನೆ ನಡೆಸಲಾಗಿದೆ. ಎಂಸ್‌ಎಂಇಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸದ್ಯ ಇರುವ ಶೇ.7.5ರಷ್ಟು ಇರುವ ಕಸ್ಟಮ್ಸ್ ಸುಂಕ ಇಳಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ ವರ್ಷದ ಮಾ.31ರ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.