ಮೊಬೈಲ್ ಗೇಮ್ ಜಟಾಪಟಿ; ತಾಯಿಯನ್ನೇ ಗುಂಡಿಟ್ಟು ಕೊಂದು, ಶವ ಅಡಗಿಸಿಟ್ಟ ಮಗ!

ತಾಯಿಯ ಶವವನ್ನು ಕೋಣೆಯೊಂದರಲ್ಲಿ ಅಡಗಿಸಿಟ್ಟು ಎರಡು ದಿನಗಳ ಕಾಲ ತನ್ನ 9 ವರ್ಷದ ಸಹೋದರಿ ಜತೆ ಕಳೆದಿದ್ದ.

Team Udayavani, Jun 8, 2022, 1:06 PM IST

ಮೊಬೈಲ್ ಗೇಮ್ ಜಟಾಪಟಿ; ತಾಯಿಯನ್ನೇ ಗುಂಡಿಟ್ಟು ಕೊಂದು, ಶವ ಅಡಗಿಸಿಟ್ಟ ಮಗ!

ಲಕ್ನೋ: ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದುದನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡ 16 ವರ್ಷದ ಬಾಲಕ ತನ್ನ ತಾಯಿಯನ್ನೇ ಗುಂಡಿಟ್ಟು ಕೊಂದು, ಆಕೆಯ ಶವವನ್ನು ಮನೆಯಲ್ಲೇ ಎರಡು ದಿನಗಳ ಕಾಲ ಅಡಗಿಸಿಟ್ಟ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಟ್ವಿಸ್ಟ್:CM ಪಿಣರಾಯಿ, ಪತ್ನಿ,ಪುತ್ರಿಯೂ ಶಾಮೀಲು; ಸ್ವಪ್ನಾ

ಪೊಲೀಸರ ಮಾಹಿತಿ ಪ್ರಕಾರ, ಈ ಬಾಲಕ ಭಾನುವಾರ ಬೆಳಗ್ಗೆ ತಂದೆಯ ಪರವಾನಿಗೆ ಹೊಂದಿದ್ದ ಪಿಸ್ತೂಲ್ ನಲ್ಲಿ ತಾಯಿಯ ಹಣೆಗೆ ಗುಂಡಿಟ್ಟು ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ. ತಾಯಿಯ ಶವವನ್ನು ಕೋಣೆಯೊಂದರಲ್ಲಿ ಅಡಗಿಸಿಟ್ಟು ಎರಡು ದಿನಗಳ ಕಾಲ ತನ್ನ 9 ವರ್ಷದ ಸಹೋದರಿ ಜತೆ ಕಳೆದಿದ್ದ. ಅಷ್ಟೇ ಅಲ್ಲ ಕೊಳೆತ ವಾಸನೆ ಬರದಿರುವಂತೆ ರೂಮ್ ಫ್ರೆಶ್ನರ್ ಅನ್ನು ಬಳಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಘಟನೆ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಕೊಲ್ಲುವುದಾಗಿ ಸಹೋದರ ಬೆದರಿಕೆ ಹಾಕಿರುವುದಾಗಿ ಸಹೋದರಿ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾಳೆ. ಮಂಗಳವಾರ ಶವ ಕೊಳೆತ ವಾಸನೆ ಬರಲಾರಂಭಿಸಿದ ನಂತರ ಬಾಲಕ ತನ್ನ ತಂದೆಗೆ ಕೊಲೆಯಾದ ಘಟನೆ ಬಗ್ಗೆ ತಿಳಿಸಿದ್ದ. ನಂತರ ಆತನ ತಂದೆ ಸ್ಥಳೀಯರಿಗೆ ಕರೆ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಹೆಚ್ಚುವರಿ ಡೆಪ್ಯುಟಿ ಕಮಿಷನರ್ ಎಸ್ ಎಂ ಖ್ವಾಸಿಂ ಅಬ್ದಿ ತಿಳಿಸಿದ್ದಾರೆ.

ಬಾಲಕನ ತಂದೆ ಯೋಧರಾಗಿದ್ದು, ಅವರು ಪ್ರಸ್ತುತ ಪಶ್ಚಿಮಬಂಗಾಳದಲ್ಲಿ ಕರ್ತವ್ಯದಲ್ಲಿದ್ದಾರೆ. ಆರಂಭದಲ್ಲಿ ಮಗ ಘಟನೆ ಬಗ್ಗೆ ತಂದೆಗೆ ಕಟ್ಟುಕಥೆ ಹೇಳಿದ್ದ. ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ತಾಯಿಯನ್ನು ಗುಂಡಿಟ್ಟು ಕೊಂದಿರುವುದಾಗಿ ತಿಳಿಸಿದ್ದ.

ಪೊಲೀಸರಿಗೂ ಕೂಡಾ ಇದೇ ಕಥೆಯನ್ನು ಹೇಳಿದ್ದ. ಆದರೆ ತೀವ್ರ ವಿಚಾರಣೆ ನಡೆಸಿದಾಗ ಬಾಲಕನ ಕಟ್ಟುಕಥೆ ಬಯಲಾಗಿದ್ದು, ತಾನೇ ತಾಯಿಯನ್ನು ಗುಂಡಿಟ್ಟು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿರುವುದಾಗಿ ಖ್ವಾಸಿಂ ತಿಳಿಸಿದ್ದಾರೆ.

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.