Uppinangady: ಚಿನ್ನಾಭರಣ ದರೋಡೆ, ಬೆದರಿಕೆ
Team Udayavani, May 12, 2024, 12:53 AM IST
ಉಪ್ಪಿನಂಗಡಿ: ಇಲ್ಲಿನ ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಮಹಿಳೆಯೊಬ್ಬರೇ ಇದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತರು ಹಾಡುಹಗಲೇ ಮನೆಯೊಳಗೆ ಪ್ರವೇಶಿಸಿ ಆಭರಣಕ್ಕಾಗಿ ಜಾಲಾಡಿದ್ದಲ್ಲದೆ, ಮಗುವನ್ನು ಕೊಲ್ಲುವ ಬೆದರಿಕೆಯೊಡ್ಡಿ ಮೈ ಮೇಲಿದ್ದ ಒಂದು ಲಕ್ಷಕ್ಕೂ ಮಿಕ್ಕಿದ ಚಿನ್ನಾಭರಣವನ್ನು ದರೋಡೆಗೈದ ಘಟನೆ ಶನಿವಾರ ಸಂಭವಿಸಿದೆ.
ಜಕಾರಿಯಾ ಅವರ ಪತ್ನಿ ಸುಹೈಬಾ (25) ಅವರು ಶನಿವಾರ ಮನೆಯ ಎದುರು ಕಸ ಗುಡಿಸುತ್ತಿರುವಾಗ ಮನೆಯ ಅಂಗಳಕ್ಕೆ ಅಪರಿಚಿತ ಗಂಡಸು ಮತ್ತು ಮಹಿಳೆ ಬಂದು ಸುಹೈಬಾರವರಲ್ಲಿ ಕರಪತ್ರವೊಂದನ್ನು ತೋರಿಸಿ ಸಹಾಯ ಮಾಡಬೇಕು ಎಂದು ಹೇಳಿದರು. ಆಬಳಿಕ ಕುಡಿಯಲು ನೀರು ಬೇಕು ಎಂದು ಕೇಳಿದಾಗ ಸುಹೈಬಾರವರು ನಳ್ಳಿಯಿಂದ ನೀರು ತರಲೆಂದು ಹೋದಾಗ ಅವರಿಬ್ಬರು ಮನೆಯ ಒಳಗೆ ಹೋಗುವುದನ್ನು ಕಂಡು ಬೊಬ್ಬೆ ಹಾಕಿ ನೀವು ಎಲ್ಲಿಗೆ ಹೋಗುತ್ತೀರಿ? ಎಂದು ಪ್ರಶ್ನಿಸಿದರು.
ಅವರಿಬ್ಬರು ಮನೆಯ ಒಳಗಿನ ಬೆಡ್ ರೂಮಿನಲ್ಲಿರುವ ಗೋಡ್ರೇಜ್ ಕಪಾಟಿನ ಬಾಗಿಲು ತೆರೆದು ಹುಡುಕುತ್ತಿರುವುದು ಕಂಡು ಬಂತು. ಕೂಡಲೇ ಸುಹೈಬಾರವರು ಮಗುವನ್ನು ಎತ್ತಿಕೊಂಡು ಹೊರ ಬಂದಾಗ ಅಲ್ಲಿಗೆ ಬಂದ ಅವರಿಬ್ಬರು ಚೂರಿ ತೋರಿಸಿ ನಿನ್ನಲ್ಲಿರುವ ಚಿನ್ನ ಕೊಡು, ಇಲ್ಲದಿದ್ದರೆ ನಿನ್ನ ಮಗುವನ್ನು ಕೊಂದು ಹಾಕುತ್ತೇನೆ ಎಂದು ಬೆದರಿಸಿದಾಗ ಮಹಿಳೆ ಹೆದರಿ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ತೆಗೆದು ಕೊಟ್ಟದ್ದನನ್ನು ತೆಗೆದುಕೊಂಡು ಪರಾರಿಯಾದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಗೆಲ್ಲಲೇ ಬೇಕಾದ ಟಾಸ್ಕ್ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Mother: ತಾಯಿಯ ಮಡಿಲು ನೆಮ್ಮದಿಯ ನೆರಳು
Mannagudda: ಗುಜರಿ ಕಾರುಗಳ ಪಾರ್ಕಿಂಗ್; ಸಾರ್ವಜನಿಕರಿಗೆ ಸಮಸ್ಯೆ
Determination- Success: ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲು ದೃಢ ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.