ವಂದೇ ಭಾರತ್‌ನಲ್ಲಿ ಮೂತ್ರ ವಿಸರ್ಜನೆ: 6,000 ರೂ. ನಷ್ಟ!
-ಟಿಕೆಟ್ ಇಲ್ಲದೇ ಟ್ರೈನು ಹತ್ತಿದ್ದಕ್ಕೆ ದಂಡ, ವಾಪಸ್ ಮರಳಲು ಮತ್ತೆ ಖರ್ಚು, ಒಟ್ಟಾರೆ ಸರಮಾಲೆ ಎಡವಟ್ಟು
Team Udayavani, Jul 21, 2023, 7:24 AM IST
ಭೋಪಾಲ್: ವಂದೇ ಭಾರತ್ ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ ವ್ಯಕ್ತಿ 6,000 ರೂ. ನಷ್ಟ ಅನುಭವಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವರದಿಯಾಗಿದೆ. ಕುಟುಂಬ ಸಮೇತ ಅಬ್ದುಲ್ ಎಂಬುವವರು ಹೈದರಾಬಾದ್‌ನಿಂದ ಭೋಪಾಲ್‌ಗೆ ಜು.15ರಂದು ಸಂಜೆ 5.20ಕ್ಕೆ ಆಗಮಿಸಿದ್ದರು. ಅಲ್ಲಿಂದ ಅವರು ತಮ್ಮ ಊರಾದ ಸಿಂಗ್ರೌಲಿಗೆ ತೆರಳಬೇಕಿತ್ತು. ಸಿಂಗ್ರೌಲಿಗೆ ರೈಲು ರಾತ್ರಿ 8.55ಕ್ಕೆ ಇತ್ತು.
ಈ ವೇಳೆ ತುರ್ತು ಮೂತ್ರ ವಿಸರ್ಜನೆಯ ಧಾವಂತದಿಂದ ಅಲ್ಲೇ ಇದ್ದ ವಂದೇ ಭಾರತ್ ರೈಲು ಹತ್ತಿ ಶೌಚಾಲಯಕ್ಕೆ ತೆರಳಿದ್ದಾರೆ. ಆದರೆ ಅವರು ಹೊರಬರುವ ವೇಳೆಗೆ ರೈಲಿನ ಸ್ವಯಂಚಾಲಿತ ಬಾಗಿಲು ಬಂದ್ ಆಗಿತ್ತು. ಅಲ್ಲದೇ ರೈಲು ಇಂದೋರ್ ಕಡೆಗೆ ತೆರಳುತ್ತಿತ್ತು. ಇದನ್ನು ಅವರು ಟಿಕೆಟ್ ಪರಿಶೀಲನೆ (ಟಿಸಿ) ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ರೈಲನ್ನು ಮಧ್ಯದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಟಿಕೆಟ್ ಇಲ್ಲದೇ ಪ್ರಯಾಣಿಸಿದ ಕಾರಣಕ್ಕಾಗಿ ಅಬ್ದುಲ್ ಅವರಿಗೆ 1,020 ರೂ. ದಂಡ ವಿಧಿಸಲಾಯಿತು. ರೈಲು ಉಜ್ಜಯಿನಿಯಲ್ಲಿ ನಿಂತಿತು. ಅಲ್ಲಿಂದ ವಾಪಸು ಭೋಪಾಲ್‌ಗೆ ತೆರಳಲು ಬಸ್‌ನಲ್ಲಿ 750 ರೂ., ಸಿಂಗ್ರೌಲಿ ರೈಲು ತಪ್ಪಿದ ಕಾರಣ 4,000 ರೂ. ಮೊತ್ತದ ಟಿಕೆಟ್ ವ್ಯರ್ಥವಾಯಿತು. ಶೌಚಾಲಯ ಬಳಸಿದಕ್ಕಾಗಿ ಅವರು ಒಟ್ಟು 6,000 ರೂ. ಕಳೆದುಕೊಳ್ಳಬೇಕಾಯಿತು. ಜತೆಗೆ ಅಬ್ದುಲ್ ಅವರು ವಾಪಸು ಬರುವವರೆಗೂ ಅವರ ಪತ್ನಿ ಮತ್ತು ಮಗು ಗಾಬರಿ ಹಾಗೂ ಸಂದಿಗ್ಧತೆ ಅನುಭವಿಸುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.