America: 1951ರಲ್ಲಿ ಕಿಡ್ನಾಪ್ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!
ಯಾರು ಅಪಹರಿಸಿದ್ದು, ಯಾರ ಜೊತೆ ಬೆಳೆದಿದ್ದೆ ಎಂಬ ವಿಚಾರದ ಬಗ್ಗೆ ಯಾವುದೇ ಉತ್ತರ ನೀಡುತ್ತಿಲ್ಲ
Team Udayavani, Sep 23, 2024, 4:15 PM IST
ವಾಷಿಂಗ್ಟನ್: ಮನೆಯಿಂದ ತಂದೆ, ತಾಯಿ, ಸಹೋದರ, ಸಹೋದರಿ ಹೀಗೆ ಯಾವುದೋ ಕಾರಣಕ್ಕೆ ಮನೆ ಬಿಟ್ಟು ಹೋಗುವುದು, ಅಪಹರಣಕ್ಕೊಳಗಾಗಿ ಕೆಲವು ವರ್ಷಗಳ ನಂತರ ಮರಳಿ ಬರುವುದು, ಬಾರದೇ ಇರುವ ಘಟನೆಗಳು ನಡೆದಿರುವುದನ್ನು ಕೇಳಿರುತ್ತೀರಿ. ಅದಕ್ಕೊಂದು ಸೇರ್ಪಡೆ ಇದು…ಬರೋಬ್ಬರಿ 70 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 6 ವರ್ಷದ ಬಾಲಕ ಇದೀಗ ಜೀವಂತವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.
ಅಂದು ನಡೆದ ಘಟನೆ ಹಿನ್ನಲೆ:
ಕ್ಯಾಲಿಫೋರ್ನಿಯಾದ ವೆಸ್ಟ್ ಓಕ್ಲಾಂಡ್ ಪಾರ್ಕ್ ನಲ್ಲಿ 1951ರ ಫೆಬ್ರುವರಿ 21ರಂದು ಲೂಯಿಸ್ ಅರ್ಮಾಂಡೋ ಅಲ್ಬಿನೋ ಎಂಬ 6 ವರ್ಷದ ಬಾಲಕ ತನ್ನ ಸಹೋದರ ರೋಜರ್ (10ವರ್ಷ) ಜೊತೆ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ಲೂಯಿಸ್ ಗೆ ಸಿಹಿ ತಿಂಡಿ ತೆಗೆದುಕೊಡುವುದಾಗಿ ಆಮಿಷವೊಡ್ಡಿ ಕರೆದೊಯ್ದಿದ್ದಳು! ಹೀಗೆ ಅಪಹರಣಕ್ಕೊಳಗಾಗಿದ್ದ ಲೂಯಿಸ್ ಹಲವು ದಶಕಗಳು ಕಳೆದರೂ ಸುಳಿವೇ ಸಿಕ್ಕಿರಲಿಲ್ಲವಾಗಿತ್ತು. ಅಂತೂ ಕುಟುಂಬದವರ ನಿರಂತರ ಪ್ರಯತ್ನ, ಡಿಎನ್ ಎ ಪರೀಕ್ಷೆ ಮೂಲಕ ಕೊನೆಗೂ ಲೂಯಿಸ್ ವೃದ್ಧಾಪ್ಯದಲ್ಲಿ ಕುಟುಂಬಸ್ಥರ ಜೊತೆ ಸೇರುವಂತಾಗಿದೆ.
ಚಿಕ್ಕಪ್ಪನ ಶೋಧಕ್ಕೆ ಸೋದರನ ಪುತ್ರಿಯ ಛಲ:
ಲೂಯಿಸ್ ಅಲ್ಬಿನೋ ಸೋದರ ರೋಜರ್ ಪುತ್ರಿ ಅಲಿಡಾ ಅಲೆಕ್ವಿನ್ (64ವರ್ಷ) ತನ್ನ ಚಿಕ್ಕಪ್ಪನ ಪತ್ತೆಗಾಗಿ ಆಕೆ ಪಟ್ಟ ಪ್ರಯತ್ನ ಒಂದೆರಡಲ್ಲ. ಡಿಎನ್ ಎ ಪರೀಕ್ಷೆ, ಪತ್ರಿಕಾ ವರದಿಗಳ ಕ್ಲಿಪ್ಪಿಂಗ್ಸ್, ಓಕ್ಲಾಂಡ್ ಪೊಲೀಸ್ ಇಲಾಖೆ, ಎಫ್ ಬಿಐ ಮತ್ತು ಜಸ್ಟೀಸ್ ಡಿಪಾರ್ಟ್ ಮೆಂಟ್ ನ ನೆರವಿನೊಂದಿಗೆ ಲೂಯಿಸ್ ಪತ್ತೆಗೆ ಮುಂದಾಗಿದ್ದರು. ಕೊನೆಗೂ ತನ್ನ ಚಿಕ್ಕಪ್ಪ ಲೂಯಿಸ್ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಲೂಯಿಸ್ ಅಲ್ಬಿನೋ ಅಗ್ನಿಶಾಮಕ ದಳ ಇಲಾಖೆಯಿಂದ ನಿವೃತ್ತರಾಗಿದ್ದಾರೆ.
ಜೂನ್ ತಿಂಗಳಿನಲ್ಲಿ ಲೂಯಿಸ್ ಅಲ್ಬಿನೋ (79ವರ್ಷ) ತನ್ನ ಹಿರಿಯ ಸಹೋದರ ರೋಜರ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಪುನರ್ ಜತೆಗೂಡಿದ್ದಾರೆ. ಅಲ್ಬಿನೋ ಮತ್ತು ರೋಜರ್ ಒಬ್ಬರನ್ನೊಬ್ಬರು ಬಿಗಿಯಾಗಿ ತಬ್ಬಿಕೊಂಡು ಆನಂದ ಬಾಷ್ಪ ಸುರಿಸಿದ್ದರು ಎಂದು ಅಲಿಡಾ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಕಳೆದ ತಿಂಗಳು ರೋಜರ್ (82ವರ್ಷ) ಕ್ಯಾನ್ಸರ್ ನಿಂದ ಕೊನೆಯುಸಿರೆಳೆದಿದ್ದರು.
ಅಲ್ಬಿನೋ ತನ್ನ ಅಪಹರಣದ ನಂತರದ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದು, ತನ್ನನ್ನು ಯಾರು ಅಪಹರಿಸಿದ್ದು, ಯಾರ ಜೊತೆ ಬೆಳೆದಿದ್ದೆ ಎಂಬ ವಿಚಾರದ ಬಗ್ಗೆ ಯಾವುದೇ ಉತ್ತರ ನೀಡುತ್ತಿಲ್ಲ. ಕೆಲವೊಂದು ವಿಚಾರ ಗುಪ್ತವಾಗಿರಬೇಕೆಂಬುದು ಅಲ್ಬಿನೋ ಅಭಿಪ್ರಾಯವಂತೆ. ದುರದೃಷ್ಟ ಅಲ್ಬಿನೋ ತಾಯಿಯದ್ದು, ತನ್ನ ಮಗು (ಅಲ್ಬಿನೋ) ಏನಾಯ್ತು ಎಂಬ ಕೊರಗಿನಲ್ಲೇ 2005ರಲ್ಲಿ ಕೊನೆಯುಸಿರೆಳೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಭಾರತೀಯ ಪ್ರವಾಸಿಗನ ಮೇಲೆ ಬಾಂಗ್ಲಾದೇಶದಲ್ಲಿ ತೀವ್ರ ಹಲ್ಲೆ!
Illegal Gun Purchase case: ಬೈಡನ್ ಬೇಷರತ್ ಕ್ಷಮಾದಾನ-ಶಿಕ್ಷೆಯಿಂದ ಪುತ್ರ ಬಚಾವ್!
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
Minority Attack: ಬಾಂಗ್ಲಾದಲ್ಲಿ ಭಾರತದ ಬಸ್ ಮೇಲೆ ದಾಳಿ, ದೇಶ ವಿರೋಧಿ ಘೋಷಣೆ!
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.