US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
Team Udayavani, Nov 7, 2024, 8:15 AM IST
ವಾಷಿಂಗ್ಟನ್: ಅಮೆರಿಕ ಚುನಾವಣೆಯಲ್ಲಿ ಪ್ರಮುಖ ಎಂದು ಗುರುತಿಸಿಕೊಳ್ಳುವ 7 ಸ್ವಿಂಗ್ ಸ್ಟೇಟ್‌ಗಳಲ್ಲಿ 7ರಲ್ಲೂ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಟ್ರಂಪ್ ಗೆದ್ದಿದ್ದರು. ಈ 7 ರಾಜ್ಯಗಳ ಹಿಂದಿನ ಹಾಗೂ ಪ್ರಸ್ತುತ ಚುನಾವಣೆಯ ಫಲಿತಾಂಶ ಇಲ್ಲಿದೆ.
ಪೆನ್ಸಿಲ್ವೇನಿಯಾ
ಇಲ್ಲಿ 19 ಎಲೆಕ್ಟರೋಲ್ ಮತಗಳಿವೆ. ಈ ಬಾರಿ ಟ್ರಂಪ್ ಶೇ.50.8ರಷ್ಟು ಮತ ಗಳಿದ್ದಾರೆ. 2020ರಲ್ಲಿ ಬೈಡೆನ್ ಶೇ.49.85 ಮತ ಗಳಿಸಿದ್ದರು.
ಮಿಚಿಗನ್
ಇಲ್ಲಿ 15 ಎಲೆಕ್ಟರೋಲ್ ಮತ ಗಳಿವೆ. ಈ ಬಾರಿ ಟ್ರಂಪ್ 50% ಮತ ಗಳಿಸಿದ್ದಾರೆ. 2020ರಲ್ಲಿ ಬೈಡೆನ್ 50.% ಮತ ಗಳಿಸಿದ್ದರು.
ಅರಿಜೋನಾ
ಇಲ್ಲಿ ಒಟ್ಟು 11 ಎಲೆಕ್ಟ ರೋಲ್ ಮತಗಳಿವೆ. ಈ ಬಾರಿ ಟ್ರಂಪ್ 51.9% ಮತ ಪಡೆದು ಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬೈಡೆನ್ ಶೇ.49.3 ಹಾಗೂ ಟ್ರಂಪ್ ಶೇ.49ರಷ್ಟು ಮತ ಪಡೆದುಕೊಂಡಿದ್ದರು.
ವಿಸ್ಕೋಸಿನ್
ಇಲ್ಲಿ 10 ಎಲೆಕ್ಟರೋಲ್ ಮತಗ ಳಿವೆ. ಟ್ರಂಪ್ 49.8% ಮತ ಗಳಿಸಿದ್ದಾರೆ. 2020ರಲ್ಲಿ ಬೈಡೆನ್ 49.45% ಮತ ಗಳಿಸಿದ್ದರು.
ನೆವಡಾ
ಇಲ್ಲಿ ಒಟ್ಟು 6 ಎಲೆಕ್ಟ ರೋಲ್ ಮತಗಳಿವೆ. ಈ ಬಾರಿ ಟ್ರಂಪ್ ಇಲ್ಲಿ ಶೇ.51.5ರಷ್ಟು ಮತ ಪಡೆದುಕೊಂಡಿದ್ದಾರೆ. ಕಮಲಾ 46.8ರಷ್ಟು ಮತ ಪಡೆದುಕೊಂಡಿ ದ್ದಾರೆ. 2020ರಲ್ಲಿ ಬೈಡೆನ್ ಶೇ.50.06 ಮತ ಗಳಿಸಿದ್ದರು.
ಜಾರ್ಜಿಯಾ
ಇಲ್ಲಿ ಒಟ್ಟು 16 ಎಲೆಕ್ಟರೋಲ್ ಮತಗಳಿವೆ. ಈ ಬಾರಿ ಟ್ರಂಪ್ ಶೇ.50.8ರಷ್ಟು ಮತ ಗಳಿಸಿ ದ್ದಾರೆ. 2020ರಲ್ಲಿ ಬೈಡೆನ್ ಶೇ.49.47 ಮತ ಗಳಿಸಿದ್ದರು.
ಉ. ಕ್ಯಾರೋಲಿನಾ
ಇಲ್ಲಿ 16 ಎಲೆಕ್ಟರೋಲ್ ಮತಗ ಳಿವೆ. ಟ್ರಂಪ್ 51.1% ಮತ ಗಳಿಸಿದ್ದಾರೆ. 2020ರಲ್ಲಿ ಬೈಡೆನ್ 48.59% ಮತ ಗಳಿಸಿದ್ದರು.
ಚುನಾವಣೆ ಆದರೂ 11 ವಾರ ಬಳಿಕವೇ ಅಧಿಕಾರ ಸ್ವೀಕಾರ
ಅಮೆರಿಕದಲ್ಲಿ ಪ್ರತೀ ಬಾರಿ ನವೆಂಬರ್‌ನ ಮೊದಲ ಸೋಮವಾರದ ಬಳಿಕದ ಮೊದಲ ಮಂಗಳವಾರ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಮುಂದಿನ ವರ್ಷದ ಜ.20 ರಂದು ಅಧಿಕಾರ ಸ್ವೀಕಾರ ಮಾಡುತ್ತಾರೆ. ಆಯ್ಕೆಯಾದ ಅಧ್ಯಕ್ಷರು ಈ 11 ವಾರ ಗಳ ಅಂತರದಲ್ಲಿ ಆಡಳಿತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಅನುವು ಮಾಡಿಕೊಡ ಲಾಗುತ್ತದೆ. ಈ ಹಿಂದೆ 4 ತಿಂಗಳ ಸಮಯಾವಕಾಶವನ್ನು ಅಮೆರಿಕದ ಸಂವಿಧಾನವು ನೀಡಿತ್ತು. 1933ರಲ್ಲಿ 11 ವಾರಗಳಿಗೆ ಇಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.