MahaKumbh Mela 2025:ಉತ್ತರಪ್ರದೇಶದ ಅಯೋಧ್ಯೆ, ವಾರಾಣಸಿಯಲ್ಲೂ ಜನಸಾಗರ; ಟ್ರಾಫಿಕ್‌ ಜಾಮ್!

ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದಾಗಿ ಸ್ಥಳೀಯರಿಗೂ ಹಾಗೂ ಭಕ್ತರಿಗೂ ಅನಾನುಕೂಲ

Team Udayavani, Jan 29, 2025, 11:39 AM IST

 MahaKumbh Mela 2025:ಉತ್ತರಪ್ರದೇಶದ ಅಯೋಧ್ಯೆ, ವಾರಾಣಸಿಯಲ್ಲೂ ಜನಸಾಗರ; ಟ್ರಾಫಿಕ್‌ ಜಾಮ್!

ಲಕ್ನೋ:ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಕಳೆದ 40 ಗಂಟೆಗಳಲ್ಲಿ ಅಯೋಧ್ಯೆಗೂ ಭಕ್ತರ ಮಹಾಪೂರವೇ ಹರಿದುಬಂದಿದೆ. ಭಕ್ತರು ಕಿಲೋ ಮೀಟರ್‌ ಗಟ್ಟಲೇ ದೂರದಿಂದ ನಡೆದು ಬರುತ್ತಿದ್ದು, ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇದ್ದಿರುವುದರಿಂದ ಸ್ಥಳೀಯ ನಿವಾಸಿಗಳು ಅಯೋಧ್ಯೆ ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮನವಿ ಮಾಡಿಕೊಂಡಿದ್ದಾರೆ.

ಮಹಾಕುಂಭಮೇಳಕ್ಕೆ ಆಗಮಿಸುವ ಭಕ್ತರು ಪ್ರಯಾಗ್‌ ರಾಜ್‌ ನಿಂದ 163 ಕಿಲೋ ಮೀಟರ್‌ ದೂರದಲ್ಲಿರುವ ಅಯೋಧ್ಯೆಗೆ ಭಕ್ತರು ಬೃಹತ್‌ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲೂ(ಪ್ರಯಾಗ್‌ ರಾಜ್‌ ನಿಂದ 122 ಕಿಲೋ ಮೀಟರ್‌ ದೂರ) ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಗವಾನ್‌ ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಗೆ ಗಣರಾಜ್ಯೋತ್ಸವ ದಿನದಿಂದ ಈವರೆಗೆ ಅಪಾರ ಪ್ರಮಾಣದಲ್ಲಿ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಉತ್ತರಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ, ಮಂಗಳವಾರ (ಜ.28) ಸಂಜೆವರೆಗೆ ಅಯೋಧ್ಯೆಗೆ ಅಂದಾಜು 40 ಲಕ್ಷ ಭಕ್ತರು ಭೇಟಿ ನೀಡಿರುವುದಾಗಿ ತಿಳಿಸಿದೆ.

ಮಹಾಕುಂಭಮೇಳದಲ್ಲಿ ಭಾಗವಹಿಸಿದ ಬಳಿಕ ಬೃಹತ್‌ ಪ್ರಮಾಣದಲ್ಲಿ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದು, ಇದರಿಂದಾಗಿ ಎಲ್ಲಾ ಕಡೆಗಳಲ್ಲೂ ಹತ್ತು ಕಿಲೋ ಮೀಟರ್‌ ಗಿಂತಲೂ ಹೆಚ್ಚು ಟ್ರಾಫಿಕ್‌ ಜಾಮ್‌ ಸಂಭವಿಸಿ, ಭಕ್ತರು, ಪ್ರಯಾಣಿಕರು ಪರದಾಡುವಂತಾಗಿದೆ. ಅಪಾರ ಪ್ರಮಾಣದ ಭಕ್ತರು, ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದಾಗಿ ಸ್ಥಳೀಯರಿಗೂ ಹಾಗೂ ಭಕ್ತರಿಗೂ ಅನಾನುಕೂಲ ತಂದಿರುವುದಾಗಿ ವರದಿ ವಿವರಿಸಿದೆ.

ಸ್ಥಳೀಯ ನಿವಾಸಿಗಳು ಅಯೋಧ್ಯೆ ಭೇಟಿ ಮುಂದೂಡಿ:

ಅಯೋಧ್ಯೆಯ 500 ಕಿಲೋ ಮೀಟರ್‌ ಸುತ್ತಮುತ್ತಲಿನ ನಿವಾಸಿಗಳು ಅಯೋಧ್ಯೆಗೆ ಭೇಟಿ ನೀಡುವುದನ್ನು ಮುಂದೂಡಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮನವಿ ಮಾಡಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಅಯೋಧ್ಯೆಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಕಾಲ್ತುಳಿತದಂತಹ ಸನ್ನಿವೇಶ ತಪ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಭೇಟಿ ಮುಂದೂಡಬೇಕೆಂದು ವಿಡಿಯೋ ಸಂದೇಶದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಟಾಪ್ ನ್ಯೂಸ್

Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ

Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ

Mr. Rani‌ Movie Review: ʼಮಿಸ್ಟರ್.ರಾಣಿʼ ನೋಡಿ ಮನಸ್ಸು ಹಗುರಾಗಿಸಿ.. ಹೇಗಿದೆ ಸಿನಿಮಾ?

Mr. Rani‌ Movie Review: ʼಮಿಸ್ಟರ್.ರಾಣಿʼ ನೋಡಿ ಮನಸ್ಸು ಹಗುರಾಗಿಸಿ.. ಹೇಗಿದೆ ಸಿನಿಮಾ?

ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ನಡೆಸುವ ಮೂಲಕ ವಿನೂತನ ಪ್ರತಿಭಟನೆ

ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ನಡೆಸುವ ಮೂಲಕ ವಿನೂತನ ಪ್ರತಿಭಟನೆ

Stock Market: ಕಾರ್ಪೋರೇಟ್‌ ಆದಾಯ ಕುಸಿತ ಪರಿಣಾಮ; ಷೇರುಪೇಟೆ ಸೂಚ್ಯಂಕ 600 ಅಂಕ ಇಳಿಕೆ

Stock Market: ಕಾರ್ಪೋರೇಟ್‌ ಆದಾಯ ಕುಸಿತ ಪರಿಣಾಮ; ಷೇರುಪೇಟೆ ಸೂಚ್ಯಂಕ 600 ಅಂಕ ಇಳಿಕೆ

Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ

Ankathadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ

Mysuru: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Mysuru: ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆಗೆ ಶರಣು… ಸ್ಥಳದಲ್ಲಿ ಡೆ*ತ್ ನೋಟ್ ಪತ್ತೆ

NR Pura: ಭದ್ರಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ… ಮುಂದುವರೆದ ಶೋಧ ಕಾರ್ಯ

NR Pura: ಭದ್ರಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ… ಮುಂದುವರೆದ ಶೋಧ ಕಾರ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Railway-Rush

Mahakumbha Mela: ದೇಶದ ಬಹುತೇಕ ರೈಲು ನಿಲ್ದಾಣಗಳು ರಶ್‌

Delhi-Stampede-Railway

Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!

Akhilesh-Yadav

Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್‌ ಯಾದವ್‌

Mahakumbh-fire

Maha Kumbh: ಕುಂಭಮೇಳದ ಸೆಕ್ಟರ್ 18, 19ರಲ್ಲಿ ಭಾರೀ ಅಗ್ನಿ ಅನಾಹುತ!

Maha Kumbh Mela: ಮಹಾಕುಂಭ ಮೇಳಕ್ಕೆ ಶಿರ್ವದ ಅಪ್ಪ -ಮಗನ ಬೈಕ್‌ ಯಾತ್ರೆ!

Maha Kumbh Mela: ಮಹಾಕುಂಭ ಮೇಳಕ್ಕೆ ಶಿರ್ವದ ಅಪ್ಪ -ಮಗನ ಬೈಕ್‌ ಯಾತ್ರೆ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ

Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ

Mr. Rani‌ Movie Review: ʼಮಿಸ್ಟರ್.ರಾಣಿʼ ನೋಡಿ ಮನಸ್ಸು ಹಗುರಾಗಿಸಿ.. ಹೇಗಿದೆ ಸಿನಿಮಾ?

Mr. Rani‌ Movie Review: ʼಮಿಸ್ಟರ್.ರಾಣಿʼ ನೋಡಿ ಮನಸ್ಸು ಹಗುರಾಗಿಸಿ.. ಹೇಗಿದೆ ಸಿನಿಮಾ?

ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ನಡೆಸುವ ಮೂಲಕ ವಿನೂತನ ಪ್ರತಿಭಟನೆ

ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ನಡೆಸುವ ಮೂಲಕ ವಿನೂತನ ಪ್ರತಿಭಟನೆ

Stock Market: ಕಾರ್ಪೋರೇಟ್‌ ಆದಾಯ ಕುಸಿತ ಪರಿಣಾಮ; ಷೇರುಪೇಟೆ ಸೂಚ್ಯಂಕ 600 ಅಂಕ ಇಳಿಕೆ

Stock Market: ಕಾರ್ಪೋರೇಟ್‌ ಆದಾಯ ಕುಸಿತ ಪರಿಣಾಮ; ಷೇರುಪೇಟೆ ಸೂಚ್ಯಂಕ 600 ಅಂಕ ಇಳಿಕೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.