ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ರಿಕ್ಷಾ : ಓರ್ವ ಮಹಿಳೆ ಸಾವು, ಐವರು ಗಂಭೀರ
Team Udayavani, Sep 7, 2021, 7:41 PM IST
ದಾಂಡೇಲಿ : ಆಲೂರಿನಿಂದ ಕೇರವಾಡಕ್ಕೆ ಬರುತ್ತಿದ್ದ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿ, ಉಳಿದ ಐವರು ಗಂಭೀರ ಗಾಯಗೊಂಡ ಘಟನೆ ದಾಂಡೇಲಿ ಸಮೀಪದ ಕೇರವಾಡ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಆಲೂರಿನಿಂದ ಕೇರವಾಡಕ್ಕೆ ಬರುತ್ತಿದ್ದ ಕೆಎ 65/ 0905 ಸಂಖ್ಯೆಯ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಶ್ರೇಯಸ್ ಕಾರ್ಖಾನೆಯ ಹತ್ತಿರ ಕೇರವಾಡ ಎಂಬಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದ ಮರವೊಂದಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಸೇರಿದಂತೆ ರಿಕ್ಷಾದಲ್ಲಿದ್ದ ಎಲ್ಲರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ತಲೆಗೆ ತೀವ್ರ ಹೊಡೆತಬಿದ್ದು ಗಂಭೀರ ಗಾಯಗೊಂಡಿದ್ದ ಕೇರವಾಡ ಗ್ರಾಮದ ದಾಂಡೇಲಪ್ಪ ನಗರದ ನಿವಾಸಿ 42 ವರ್ಷ ವಯಸ್ಸಿನ ನಿರ್ಮಲಾ ಮಡಿವಾಳಪ್ಪ ಸುಣಗಾರ ಅವರು ಮಾರ್ಗ ಮಧ್ಯ ಅಸುನೀಗಿದ್ದಾರೆ.
ಇದನ್ನೂ ಓದಿ :ರಾಜ್ಯದಲ್ಲಿಂದು 851 ಜನರಲ್ಲಿ ಕೋವಿಡ್ ಸೋಂಕು ದೃಢ : 790 ಸೋಂಕಿತರು ಗುಣಮುಖ
ಉಳಿದಂತೆ ಗಂಭೀರ ಗಾಯಗೊಂಡಿದ್ದ ಸ್ಥಳೀಯ ಕೇರವಾಡ ಗ್ರಾಮದ ದಾಂಡೇಲಪ್ಪ ನಗರದ ನಿವಾಸಿಗಳಾದ ಆಟೋ ಚಾಲಕ ಅನೀಲ್ ಶ್ರೀಕಾಂತ ಮುತಗೇಕರ (30), ಪ್ರಯಾಣಿಕರಾದ ಶಿವಕ್ಕಾ ಮಡಿವಾಳಪ್ಪ ಸುಣಗಾರ (43), ಶೋಭಾ ಈರಯ್ಯಾ ಗಣಾಚಾರಿ (38), ರೂಪಾ ನಿಂಗಪ್ಪ ಬ್ಯಾನಿ (40) ಮತ್ತು ಲಕ್ಷ್ಮೀ ಕಲ್ಲಪ್ಪ ಅರುಟಗಿ (48) ಇವರೆಲ್ಲರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸಗೆ ಧಾರವಾಡದ ಸಿವಿಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಮೃತ ಮಹಿಳೆ ಮತ್ತು ಗಾಯಗೊಂಡ ಎಲ್ಲರೂ ಒಂದೆ ಊರಿನವರಾಗಿದ್ದರೆ.
ಘಟನೆ ನಡೆದ ಸ್ಥಳಕ್ಕೆ 112 ತುರ್ತು ವಾಹನ ಹಾಗೂ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸೈ ಐ.ಆರ್,ಗಡ್ಡೇಕರ, ಎಎಸೈ ಮೆಹಬೂಬ ನಿಂಬುವಾಲೆ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಅತೀಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೆ ಕಾರಣ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.