ಕಾಂಗ್ರೇಸ್ ಸರ್ಕಾರದಲ್ಲಿ 15 ಲಕ್ಷ ಆಶ್ರಯ ಮನೆ ಭ್ರಷ್ಟಾಚಾರ : ವಸತಿ ಸಚಿವ ಸೋಮಣ್ಣ ಆರೋಪ
Team Udayavani, Jan 12, 2021, 5:26 PM IST
ಬಾಗಲಕೋಟೆ : ಐದು ವರ್ಷಗಳ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ 15 ಲಕ್ಷ ಆಶ್ರಯ ಮನೆಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಯಂಕ್-ಸೀನ್ ಹೆಸರಿನಲ್ಲಿ 6ರಿಂದ 7 ಮನೆ ಹಾಕಿ, ಬಿಲ್ ತೆಗೆದಿದ್ದಾರೆ. ಹೀಗಾಗಿ ಸುಮಾರು 6 ಲಕ್ಷ ಆಶ್ರಯ ಮನೆಗಳನ್ನು ಲಾಕ್ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಆರೋಪಿಸಿದರು.
ನಗರದಲ್ಲಿ ಬುಧವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜನ ಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು.
ಆಸರೆ ಇಲ್ಲದ ಬಡವರಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಡುವುದು ಸರ್ಕಾರದ ಉದ್ದೇಶ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಬರೋಬ್ಬರಿ 15 ಲಕ್ಷ ಮನೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು. ಯಂಕ, ಸೀನ ಹೆಸರಿನಲ್ಲಿ 6ರಿಂದ 7 ಮನೆ ಹಾಕಲಾಗಿದೆ. ಒಬ್ಬರಿಗೆ ಒಂದೇ ಮನೆ ಹಾಕಬೇಕು. ಒಬ್ಬೊಬ್ಬರ ಹೆಸರಿನಲ್ಲಿ ಆರೇಳು ಮನೆ ಇರುವುದು ಸರ್ಕಾರದ ಗಮನಕ್ಕೆ ಬಂದ ಬಳಿಕ ರಾಜ್ಯದಲ್ಲಿ ಸುಮಾರು 6 ಲಕ್ಷ ಮನೆಗಳ ಪ್ರಕ್ರಿಯೆ ಲಾಕ್ ಮಾಡಲಾಗಿತ್ತು. ಇದೀಗ ಸಮಗ್ರ ತನಿಖೆ ನಡೆಸಿದ ಬಳಿಕ, ಅಗತ್ಯ ಹಾಗೂ ಅರ್ಹರಾದವರಿಗೆ ಈ ವರ್ಷ ಒಟ್ಟು 1.17 ಲಕ್ಷ ಮನೆ ನಿರ್ಮಿಸಿಕೊಡಲಾಗಿದೆ. ಮುಂದಿನ ವರ್ಷ ಮುಖ್ಯಮಂತ್ರಿಗಳ ಮನವೋಲಿಸಿ, 1.50 ಲಕ್ಷ ಮನೆ ಮಂಜೂರು ಮಾಡಿಸಲಾಗುವುದು ಎಂದರು.
ಇದನ್ನೂ ಓದಿ:ಕ್ಯೂಆರ್ ಕೋಡ್‌ನಿಂದ ತೊಗರಿ ಖರೀದಿ ವಿಳಂಬ! ಮುಕ್ತ ಮಾರುಕಟ್ಟೆಯತ್ತ ಮುಖ
ರಾಜ್ಯದ ಪ್ರತಿ ಗ್ರಾ.ಪಂ.ಗೂ ತಲಾ 20 ಆಶ್ರಯ ಮನೆ ಮಂಜೂರು ಮಾಡಲಾಗುವುದು. ಐದು ವರ್ಷದಲ್ಲಿ ಒಂದೊಂದು ಪಂಚಾಯಿತಿಗೂ 100 ಮನೆ ಬರಲಿವೆ. ನೂತನ ಗ್ರಾ.ಪಂ. ಸದಸ್ಯರು, ಚುನಾವಣೆಯಲ್ಲಿ ತಮಗೆ ಮತ ಹಾಕದೇ ಇದ್ದರೂ ಬಡವರು-ಆಶ್ರಯ ಇಲ್ಲದವರಿದ್ದರೆ ಅವರಿಗೆ ಮನೆ ಮಂಜೂರು ಮಾಡಿಸಬೇಕು ಎಂದು ತಿಳಿಸಿದರು.
ನಲ್ ಸೇ ಜಲ್ ಯೋಜನೆ :
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಗ್ರಾ.ಪಂ.ಗೆ ಹೆಚ್ಚು ಅನುದಾನ ನೀಡುತ್ತಿದ್ದಾರೆ. 14ನೇ ಹಣಕಾಸು ಆಯೋಗದಡಿ ಒಂದೊಂದು ಪಂಚಾಯಿತಿಗೂ ಸುಮಾರು 60 ಲಕ್ಷ ಅನುದಾನ ಕೊಟ್ಟಿದ್ದಾರೆ. ಈಗ 15ನೇ ಹಣಕಾಸು ಆಯೋಗದಡಿ 1 ಕೋಟಿ ವರೆಗೂ ಅನುದಾನ ನೀಡಲಿದ್ದಾರೆ ಎಂದರು.
ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಪಂಚಾಯಿತಿ ಬಯಲು ಶೌಚ್ಯಮುಕ್ತ ಮಾಡುವ ಮಹತ್ವದ ಕಾರ್ಯ ಪ್ರಧಾನ ಮಂತ್ರಿಗಳು ಮಾಡಿದ್ದು, ಮುಂದಿನ ವರ್ಷದಿಂದ ಪ್ರತಿ ಮನೆಗೂ ನಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲು, ಶೀಘ್ರವೇ ನಲ್ ಸೇ ಜಲ್ (ನಳದಿಂದ ಮನೆ ಮನೆಗೂ ಕುಡಿಯುವ ನೀರು) ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಹುಶಾರ್ ಇರ್ತಾರ್ :
ಗ್ರಾ.ಪಂ. ನೂತನ ಸದಸ್ಯರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಸಿಎಂ, ಸಚಿವ, ಶಾಸಕರಿಗೂ ಇಲ್ಲದ ಅಧಿಕಾರ ಗ್ರಾ.ಪಂ. ಸದಸ್ಯರಿಗೆ ಇರುತ್ತದೆ. ಗ್ರಾ.ಪಂ. ಅಧ್ಯಕ್ಷರ ದಾರಿ ತಪ್ಪಿಸುವ ಕೆಲಸ ಅಧಿಕಾರಿಗಳು ಮಾಡುತ್ತಾರೆ. ಅವರಿಂದ ಎಚ್ಚರಿಕೆ ಇರಬೇಕು ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.