One Day Rankings: ವನಿತಾ ಏಕದಿನ ರ್‍ಯಾಂಕಿಂಗ್ ಚಾಮರಿ- ಅಗ್ರಸ್ಥಾನಕ್ಕೆ ಸವಾರಿ
Team Udayavani, Jul 5, 2023, 6:39 AM IST
![CHAMIRA](https://www.udayavani.com/wp-content/uploads/2023/07/CHAMIRA-620x372.jpg)
![CHAMIRA](https://www.udayavani.com/wp-content/uploads/2023/07/CHAMIRA-620x372.jpg)
ದುಬಾೖ: ಎಡಗೈ ಆಟಗಾರ್ತಿ ಚಾಮರಿ ಅತಪಟ್ಟು ವನಿತಾ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ ಶ್ರೀಲಂಕಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಬಿಡುಗಡೆಗೊಂಡ ನೂತನ ವನಿತಾ ರ್‍ಯಾಂಕಿಂಗ್‌ನಲ್ಲಿ ಅವರು ಒಮ್ಮೆಲೇ 6 ಸ್ಥಾನ ಮೇಲೇರಿ ಈ ಎತ್ತರ ತಲುಪಿದರು.
ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿ ಯಲ್ಲಿ 2 ಶತಕ ಬಾರಿಸಿದ್ದು ಚಾಮರಿ ಅತಪಟ್ಟು ಅವರ ರ್‍ಯಾಂಕಿಂಗ್ ಪ್ರಗತಿಗೆ ಮೂಲ. ಮೊದಲ ಪಂದ್ಯದಲ್ಲಿ 83 ಎಸೆತಗಳಿಂದ ಅಜೇಯ 108 ರನ್, ಸೋಮವಾರದ ಅಂತಿಮ ಪಂದ್ಯದಲ್ಲಿ 80 ಎಸೆತಗಳಿಂದ ಅಜೇಯ 140 ರನ್ ಬಾರಿಸಿದ್ದು ಚಾಮರಿ ಸಾಧನೆಯಾ ಗಿದೆ. ಅವರು ಒಟ್ಟು 758 ಅಂಕ ಹೊಂದಿದ್ದಾರೆ. ಮೇ 10ರಿಂದ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯದ ಬೆತ್ ಮೂನಿ, ಹರ್ಮನ್‌ಪ್ರೀತ್ ಸಿಂಗ್, ಮೆಗ್ ಲ್ಯಾನಿಂಗ್, ಲಾರಾ ವೋಲ್ವಾರ್ಟ್ ಮೊದಲಾದವರನ್ನು ಚಾಮರಿ ಹಿಂದಿಕ್ಕಿದರು.
ಇದಕ್ಕೂ ಮುನ್ನ ಎಡಗೈ ಸೀಮ್ ಬೌಲರ್ ಉದೇಶಿಕಾ ಪ್ರಬೋಧನಿ, ಆಲ್‌ರೌಂಡ್ ವಿಭಾಗದಲ್ಲಿ ಶಶಿಕಲಾ ಸಿರಿವರ್ಧನೆ ನಂ.1 ಆಗಿದ್ದರು. ಶ್ರೀಲಂಕಾದ ಪುರುಷರ ಕ್ರಿಕೆಟ್‌ನಲ್ಲಿ ಸನತ್ ಜಯಸೂರ್ಯ ಅಗ್ರಸ್ಥಾನದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2002ರ ಸೆಪ್ಟಂಬರ್-2003ರ ಮೇ ತಿಂಗಳ ಅವಧಿಯಲ್ಲಿ 181 ದಿನಗಳ ಕಾಲ ಅವರು ಟಾಪರ್ ಆಗಿದ್ದರು.
ಮಂಧನಾ, ಕೌರ್ ಕುಸಿತ
ಇದೇ ವೇಳೆ ಭಾರತದ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮತಿ ಮಂಧನಾ ಒಂದೊಂದು ಸ್ಥಾನ ಕುಸಿತ ಕಂಡಿದ್ದಾರೆ. ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ ದೀಪ್ತಿ ಶರ್ಮ ತೃತೀಯ ಸ್ಥಾನ ಕಾಯ್ದು ಕೊಂಡಿ ದ್ದಾರೆ. ಕೌರ್ ಮತ್ತು ಮಂಧನಾ ಕ್ರಮ ವಾಗಿ 6ನೇ, 7ನೇ ಸ್ಥಾನಕ್ಕೆ ಇಳಿದರು.
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಮತ್ತು ಆಫ್ಸ್ಪಿನ್ನಿಂಗ್ ಆಲ್‌ರೌಂಡರ್ ದೀಪ್ತಿ ಶರ್ಮ ಕ್ರಮವಾಗಿ 8ನೇ ಹಾಗೂ 10ನೇ ಸ್ಥಾನಿಯಾಗಿದ್ದಾರೆ. 751 ಅಂಕ ಹೊಂದಿರುವ ಇಂಗ್ಲೆಂಡ್‌ನ ಸೋಫಿ ಎಕ್‌ಸ್ಟೋನ್‌ಗೆ ಅಗ್ರಸ್ಥಾನ.
ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಸ್ಮತಿ ಮಂಧನಾ 3ನೇ ಸ್ಥಾನ ಕಾಯ್ದು ಕೊಂಡಿದ್ದಾರೆ (722). ದೀಪ್ತಿ ಶರ್ಮ ಒಂದು ಸ್ಥಾನ ಮೇಲೇರಿದ್ದು, 4ಕ್ಕೆ ಬಂದಿದ್ದಾರೆ (729). ರೇಣುಕಾ ಸಿಂಗ್‌ಗೆ 9ನೇ ಸ್ಥಾನ (700).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
![Mujeeb joins Mumbai Indians team in place of another Afghan bowler](https://www.udayavani.com/wp-content/uploads/2025/02/mujeeb-150x82.jpg)

IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ