ವೀಕೆಂಡ್ ನಲ್ಲಿ ಮನೆಯಲ್ಲೇ ಘಮ ಘಮಿಸುವ ರುಚಿಯಾದ ಗೀರೈಸ್ ಮಾಡಿ ಸವಿಯಿರಿ…

ಪುಳಿಯೋಗರೆ ಹೀಗೆ ರೈಸ್ ಐಟಮ್‌ ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು ಗೀರೈಸ್ .

ಶ್ರೀರಾಮ್ ನಾಯಕ್, Dec 2, 2022, 6:00 PM IST

web exclusive food geerice

ಇಂದು ಎಲ್ಲರೂ ಆಹಾರದಲ್ಲಿ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್ ಗಳಲ್ಲಿ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿರುವ ಜೊತೆಗೆ ಹೊಸ ಹೊಸ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ತಮ್ಮ ಕೈ ರುಚಿಯ ಸವಿಯನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳಲು ನಾವು ನಿಮಗೊಂದು ಸುಲಭ ರೀತಿಯಲ್ಲಿ ರುಚಿಕರವಾದ ಗೀರೈಸ್ ಮತ್ತು ವೆಜ್ ಕುರ್ಮಾ ವನ್ನು ಉಣಬಡಿಸಲಿದ್ದೇವೆ.

ಹಲವಾರು ಬಗೆಯ ರೈಸ್ ಗಳನ್ನು ನಾವು ತಿಂದಿರುತ್ತೇವೆ ಅದರಲ್ಲಿ ಮುಖ್ಯವಾಗಿ ಜೀರಾ ರೈಸ್, ಟೊಮೆಟೊ ರೈಸ್ , ಪಲಾವ್, ಲೆಮನ್ ರೈಸ್, ಪುಳಿಯೋಗರೆ ಹೀಗೆ ರೈಸ್ ಐಟಮ್‌ ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು ಗೀರೈಸ್ .

ಹಾಗಾದರೆ ಇನ್ನೇಕೆ ತಡ ರುಚಿ-ರುಚಿಯಾದ ಗೀರೈಸ್ ಮತ್ತು ವೆಜ್ ಕುರ್ಮಾ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಮಾಡಿ… ಸ್ವಾದಿಷ್ಟವಾಗಿ ಸವಿಯಿರಿ…

ಗೀರೈಸ್
ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ-3ಕಪ್‌, (20ನಿಮಿಷ ನೀರಿನಲ್ಲಿ ನೆನೆಸಿಡಿ), ತುಪ್ಪ-4ಚಮಚ, ತೆಂಗಿನೆಣ್ಣೆ-2ಚಮಚ, ಪಾಲಾವ್‌ ಎಲೆ, ಚಕ್ಕೆ, ಲವಂಗ, ಏಲಕ್ಕಿ-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-1ಚಮಚ, ಹಸಿಮೆಣಸು-4, ಈರುಳ್ಳಿ-2, ಗೋಡಂಬಿ, ಒಣದ್ರಾಕ್ಷಿ-ಸ್ವಲ್ಪ, ಪುದೀನಾ,ಕೊತ್ತಂಬರಿ ಸೊಪ್ಪು-ಸ್ವಲ್ಪ, ಹಾಲು-1/4ಕಪ್‌,ಮೊಸರು-1/4 ಕಪ್‌, ಉಪ್ಪು-ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ, ಬಿಸಿಯಾದ ಮೇಲೆ ಅದಕ್ಕೆ ಚಕ್ಕೆ, ಲವಂಗ, ಪಾಲವ್‌ ಎಲೆ, ಏಲಕ್ಕಿ ಹಾಕಿ ಹುರಿಯಿರಿ. ತದನಂತರ ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ಸ್ವಲ್ಪ ಸಮಯ ಹುರಿಯಿರಿ. ಆಮೇಲೆ ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಕಂದು ಬಣ್ಣ ಬಂದ ತಕ್ಷಣ ಈರುಳ್ಳಿ ಸೇರಿಸಿ ಹುರಿಯಿರಿ. ನಂತರ ಗ್ರೀರೈಸ್‌ ಸಿಕ್ರೇಟ್‌ ರೆಸಿಪಿ ಎಂದರೆ ಹಾಲು. ಹಾಕಿ ಒಂದು ನಿಮಿಷಗಳ ನಂತರ ಮೊಸರನ್ನು ಕೂಡ ಸೇರಿಸಿ ಅದರ ಜೊತೆಗೆ ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಸರಿಯಾಗಿ ಮಿಕ್ಸ್‌ ಮಾಡಿರಿ. ತದನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದಕ್ಕೆ ನೆನೆಸಿಟ್ಟ ಬಾಸ್ಮತಿ ಅಕ್ಕಿ ಹಾಕಿ ಮಸಾಲದೊಂದಿಗೆ ಕೆಲವು ನಿಮಿಷ ಹಾಗೆ ಬಿಡಿ. ಈ ರೀತಿ ಮಾಡುವುದರಿಂದ ತುಪ್ಪ/ಎಣ್ಣೆ , ಮಸಾಲೆಯು ಅನ್ನಕ್ಕೆ ಹೊಳಪು ಕೊಡುತ್ತದೆ. ತದನಂತರ ಸಮಪ್ರಮಾಣದ ನೀರನ್ನು ಸೇರಿಸಿ ಪಾತ್ರೆಯ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿರಿ. ಬಿಸಿ-ಬಿಸಿಯಾದ ಗೀರೈಸ್‌, ವೆಜ್‌ಕುರ್ಮಾದೊಂದಿಗೆ ಸವಿಯಲು ಬಹಳ ರುಚಿಕರ.

ವೆಜ್‌ ಕುರ್ಮಾ
ಬೇಕಾಗುವ ಸಾಮಗ್ರಿಗಳು
ಈರುಳ್ಳಿ-2, ಚಕ್ಕೆ, ಲವಂಗ-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-2ಚಮಚ, ಹಸಿಮೆಣಸು-6, ತೆಂಗಿನೆಣ್ಣೆ-3 ಚಮಚ, ಹುರಿಕಡಲೆ-2ಚಮಚ, ತೆಂಗಿನ ತುರಿ-1ಕಪ್‌, ಧನಿಯಾ ಪುಡಿ-1ಚಮಚ, ಅರಿಶಿನ ಪುಡಿ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಬಡೆ ಸೊಂಪು-ಸ್ವಲ್ಪ, ಕರಿಬೇವು, ಉಪ್ಪು -ರುಚಿಗೆ ತಕ್ಕಷ್ಟು, ತರಕಾರಿ-ಟೊಮೆಟೋ-1, ನವಿಲ್‌ ಕೋಸು-1, ಬೀನ್ಸ್‌-10, ಕ್ಯಾರೆಟ್‌-2, ಹಸಿಬಟಾಣಿ-150ಗ್ರಾಂ, ಆಲೂಗಡ್ಡೆ-2.

ತಯಾರಿಸುವ ವಿಧಾನ
ಎಲ್ಲ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಚಕ್ಕೆ,ಲವಂಗ,ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಹಸಿಮೆಣಸು, ಹುರಿಕಡಲೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ, ಧನಿಯಾ ಪುಡಿ, ಕೊತ್ತಂಬರಿ ಸೊಪ್ಪು, ಅರಿಶಿನ ಪುಡಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ ನಂತರ ಮಿಕ್ಸ್‌ ಜಾರಿಗೆ ಇವೆಲ್ಲಾ ಮಸಾಲೆಯನ್ನು ಹಾಕಿ ನೀರನ್ನು ಸೇರಿಸಿ ಮಸಾಲೆ ರುಬ್ಬಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ 1ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಕರಿಬೇವು, ಬಡೆಸೊಂಪು ಹಾಕಿರಿ. ತದನಂತರ ಹೆಚ್ಚಿಟ್ಟ ತರಕಾರಿಯನ್ನು ಹಾಕಿ ಒಂದು ನಿಮಿಷಗಳ ಕಾಲ ಹುರಿಯಿರಿ. ಆಮೇಲೆ ಅದಕ್ಕೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಬೇಯಿಸಿರಿ. ಬಿಸಿ-ಬಿಸಿಯಾದ ವೆಜ್‌ ಕುರ್ಮಾ ಗೀರೈಸ್‌ ಜೊತೆ ಸವಿಯಿರಿ.

ಟಾಪ್ ನ್ಯೂಸ್

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

palaniswami

AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.