![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Mar 29, 2021, 5:10 AM IST
ವೇಣೂರು: ಬಾಕಿ ಉಳಿದಿರುವ ವೇಣೂರು ಹಾಗೂ ಆರಂಬೋಡಿ ಗ್ರಾ.ಪಂ.ಗೆ ಮಾ. 29ರಂದು ಚುನಾವಣೆ ನಡೆಯಲಿದ್ದು, ರವಿವಾರ ಚುನಾವಣ ಸಿಬಂದಿ ಆಯಾಯ ಮತಗಟ್ಟೆಗಳಿಗೆ ಮತಪೆಟ್ಟಿಗೆಗಳನ್ನು ಹಿಡಿದು ತೆರಳಿದರು. ಎರಡು ಗ್ರಾ.ಪಂ.ಗಳ ಒಟ್ಟು 12,019 ಮಂದಿ ಮತದಾರರು 75 ಮಂದಿ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ವೇಣೂರು ಗ್ರಾ.ಪಂ.ನ ಬಜಿರೆ 1 ಮತ್ತು 2ನೇ ಕ್ಷೇತ್ರದ ಚುನಾವಣೆ ಬಜಿರೆ ಶಾಲೆಯಲ್ಲಿ ಜರಗಲಿದೆ. ವೇಣೂರು 1 ಮತ್ತು 2ನೇ ಕ್ಷೇತ್ರದ ಮತದಾನ ವೇಣೂರು ವಿದ್ಯೋದಯ ಶಾಲೆಯಲ್ಲಿ ನಡೆಯಲಿದೆ. ಕರಿಮಣೇಲು 2 ಕ್ಷೇತ್ರಗಳ ಮತದಾನ ಕರಿಮ ಣೇಲು ಸಂತಜೂಡರ ಹಿ.ಪ್ರಾ. ಶಾಲೆಯಲ್ಲಿ ಜರಗಲಿದ್ದು, ಮೂಡುಕೋಡಿ ಗ್ರಾಮದ ಎರಡು ಕ್ಷೇತ್ರಗಳ ಮತದಾನ ಉಂಬೆಟ್ಟು ಸ.ಹಿ.ಪ್ರಾ. ಶಾಲೆಯಲ್ಲಿ ಜರಗಲಿದೆ.
ಪ್ರತೀ ಮತಗಟ್ಟೆಗಳಲ್ಲಿ 6 ಮಂದಿ ಸಿಬಂದಿ ಇರಲಿದ್ದು, ಚುನಾವಣೆ ಪ್ರಕ್ರಿಯೆಗೆ ಸಹಕರಿಸಲಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬಂದಿ ಪ್ರತೀ ಬೂತ್‌ಗಳಲ್ಲಿ ಇರಲಿದ್ದಾರೆ. ಎರಡು ಗ್ರಾ.ಪಂ.ಗಳಿಗೆ ಈಗಾಗಲೇ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಆರಂಬೋಡಿ ಗ್ರಾ.ಪಂ.ನ ಆರಂಬೋಡಿ ಕ್ಷೇತ್ರದ ಚುನಾವಣೆ ಆರಂಬೋಡಿ ಸ.ಹಿ.ಪ್ರಾ. ಶಾಲೆ ಹಾಗೂ ಹೊಕ್ಕಾಡಿಗೋಳಿಯ ಸ.ಹಿ.ಪ್ರಾ. ಶಾಲೆಯಲ್ಲಿ ಜರಗಲಿದೆ. ಗುಂಡೂರಿ ಗ್ರಾಮದ ಮತದಾನ ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ ಜರಗಲಿದೆ.
ವೇಣೂರು ಗ್ರಾ.ಪಂ. ಚುನಾವ ಣಾಧಿ ಕಾರಿಯಾಗಿ ಬೆಳ್ತಂಗಡಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ತಾರಕೇಸರಿ ಹಾಗೂ ಆರಂಬೋಡಿ ಗ್ರಾ.ಪಂ.ಗೆ ಸಮಾಜಕಲ್ಯಾಣ ಇಲಾಖೆಯ ಹೇಮಚಂದ್ರ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಾ. 31ರಂದು ಬೆಳ್ತಂಗಡಿ ಎಪಿಎಂಸಿ ಸಭಾಂಗಣದಲ್ಲಿ ಮತಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ತಿಳಿಯಲಿದೆ.
ಆರಂಬೋಡಿ ಗ್ರಾ.ಪಂ.ನ 12 ಸ್ಥಾನಗಳಿಗೆ 24 ಮಂದಿ ಚುನಾವಣ ಕಣದಲ್ಲಿದ್ದರೆ ವೇಣೂರು ಗ್ರಾ.ಪಂ.ನ 24 ಸ್ಥಾನಗಳಿಗೆ 58 ಮಂದಿ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 7 ಮಂದಿ ನಾಮಪತ್ರವನ್ನು ವಾಪಾಸು ಪಡೆದುಕೊಂಡಿದ್ದು, 51 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣೆಗೆ ಮತಪತ್ರ
ಮತ ಚಲಾವಣೆಗೆ ಎಲೆಕ್ಟ್ರಾನಿಕ್ಸ್ ಓಟಿಂಗ್ ಮಿಶಿನ್ (ಎ.ವಿ.ಎಂ.) ಬಳಸಲಾಗುವುದಿಲ್ಲ. ಮತಪತ್ರದಲ್ಲಿ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯ ಎದುರು ಸೀಲ್ ಒತ್ತುವುದರ ಮೂಲಕ ಮತ ಚಲಾಯಿಸಬೇಕಾಗುತ್ತದೆ.
ಕೋವಿಡ್ ನಿಯಮ ಪಾಲನೆ
ಮಾ. 29ರಂದು ಬೆಳಗ್ಗೆ 7 ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮಾಸ್ಕ್ ಹಾಗೂ ವೈಯುಕ್ತಿಕ ಅಂತರ ಕಾಪಾಡಿಕೊಂಡು ಸರತಿಸಾಲಿನಲ್ಲಿ ಬರುವ ಮತದಾರರ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಬಳಿಕ ಸ್ಯಾನಿಟೆ„ಸ್ ಮಾಡಿ ಮತಕೇಂದ್ರದ ಒಳಗೆ ಪ್ರವೇಶ ನೀಡಲಾಗುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ, 1993ರ ಪ್ರಕರಣ 308 ಎಸಿರಂತೆ ಮಾ.15ರಿಂದ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯು ಮಾ. 31ರವರೆಗೆ ಜಾರಿಯಲ್ಲಿರಲಿದೆ. ಮತದಾನ ನಡೆಯುವ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಚುನಾವಣೆ ಪ್ರಾರಂಭದ 48 ಗಂಟೆಯ ಮೊದಲೇ ಮದ್ಯದಂಗಡಿ ಬಂದ್ ಆಗಿವೆ.
ನಿರ್ಭೀತಿಯಿಂದ ಮತ ಚಲಾಯಿಸಿ
ತಾಲೂಕಿನ ಎರಡು ಗ್ರಾ.ಪಂ.ಗಳ ಚುನಾವಣೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದೆ. ಸಿಬಂದಿಗೆ ಯಾವ ರೀತಿ ಚುನಾವಣೆ ನಡೆಸಬೇಕೆಂದು ಮಾಹಿತಿ ನೀಡಿ ಅಗತ್ಯ ಸಾಮಗ್ರಿ ವಿತರಣೆ ಮಾಡಿದ್ದೇವೆ. ಅರ್ಹ ಮತದಾರರೆಲ್ಲರೂ ನಿರ್ಭೀತಿಯಿಂದ ಬಂದು ಮತ ಚಲಾಯಿಸಿ.
-ಮಹೇಶ್ ಜೆ., ತಹಶೀಲ್ದಾರರು ಬೆಳ್ತಂಗಡಿ
Katapadi: ಮುಕ್ಕಾಲು ಎಕರೆಯಲ್ಲಿ 8 ಟನ್ ಸೌತೆ, ಅಂಗಳದಿಂದಲೇ ಮಾರಾಟ!
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.