ಲೈಂಗಿಕ ದೌರ್ಜನ್ಯ ವಿಡಿಯೋ ಬ್ಲ್ಯಾಕ್‌ಮೇಲ್: ಕಬಾಬ್ ಕತೆ ಹೇಳಿ ಸಂಗತಿ ಮುಚ್ಚಿಟ್ಟ ಬಾಲಕಿ
Team Udayavani, Apr 10, 2022, 10:00 AM IST
ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಪೈಶಾಚಿಕ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಓಲ್ಡ್‌ಟೌನ್‌ನ ನಿವಾಸಿ 15 ವರ್ಷದ ಬಾಲಕಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯಾಗಿದ್ದಾಳೆ. ಬಾಲಕಿಯ ಮನೆ ಸಮೀಪದಲ್ಲೇ ನೆಲೆಸಿದ್ದ ಆಕೆಯ ಸ್ನೇಹಿತೆಯ ಸಹೋದರ ಮುಜಾಹಿದ್ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸಂತ್ರಸ್ತೆ ಸರ್ಕಾರಿ ಉರ್ದು ಶಾಲೆಯಲ್ಲಿ 9ನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದು, ಕಲಿಕೆಯನ್ನು ಅರ್ಧಕ್ಕೆ ಕೊಟಕುಗೊಳಿಸಿ ಮನೆಯಲ್ಲೇ ಇದ್ದಳು. ಆಗಾಗ್ಗೆ ಮನೆ ಸಮೀಪದಲ್ಲಿದ್ದ ಸ್ನೇಹಿತೆಯ ಮನೆಗೆ ಹೋಗಿ ಬರುತ್ತಿದ್ದಳು. 2021ರ ಅಕ್ಟೋಬರ್‌ನಲ್ಲಿ ಸಂತ್ರಸ್ತ ಬಾಲಕಿ ತನ್ನ ಸ್ನೇಹಿತೆ ಮನೆಗೆ ಹೋದ ಸಂದರ್ಭದಲ್ಲಿ ಆಕೆ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿದ್ದ ಸ್ನೇಹಿತೆಯ ಅಣ್ಣ ಮುಜಾಹಿದ್ ಬಳಿ ಆಕೆ ಎಲ್ಲಿ ಹೋಗಿದ್ದಾಳೆಂದು ವಿಚಾರಿಸಿದಾಗ, ಮಾಹಿತಿ ಹೇಳುವ ನೆಪದಲ್ಲಿ ಬಾಲಕಿಯನ್ನು ಮನೆಯೊಳಗೆ ಎಳೆದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ. ಮುಜಾಹಿದ್ ಸ್ನೇಹಿತರು ಬಾಲಕಿಯ ಗಮನಕ್ಕೆ ಬಾರದಂತೆ ಲೈಂಗಿಕ ದೌರ್ಜನ್ಯ ಎಸಗುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು ಎಂದು ತಿಳಿದು ಬಂದಿದೆ.
ಕಬಾಬ್ ಕತೆ ಕಟ್ಟಿದ ಬಾಲಕಿ
ಘಟನೆ ಬಳಿಕ ಮನೆಗೆ ಹಿಂತಿರುಗಿದ ಸಂತ್ರಸ್ತೆಯು ಕೊಠಡಿಯಲ್ಲಿ ಏಕಾಂಗಿಯಾಗಿ ಕುಳಿತು ಅಳುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ತಾಯಿ, ಮಗಳ ಬಳಿ ಏನಾಯಿತೆಂದು ವಿಚಾರಿಸಿದ್ದರು. ಕಬಾಬ್ ತಂದು ತಿಂದಿದ್ದು, ಖಾರ ಜಾಸ್ತಿಯಿದ್ದ ಹಿನ್ನೆಲೆಯಲ್ಲಿ ಕಣ್ಣಲ್ಲಿ ನೀರು ಬರುತ್ತಿದೆ ಎಂದು ಸುಳ್ಳು ಹೇಳಿ ನಡೆದ ಸಂಗತಿಯನ್ನು ಬಾಲಕಿ ಮುಚ್ಚಿಟ್ಟಿದ್ದಳು.
ಇದಾದ ಕೆಲದ ದಿನಗಳ ಬಳಿಕ ಆರೋಪಿ ಮುಜಾ ಹಿದ್‌ನ ಸ್ನೇಹಿತರು ಮಾತನಾಡುವ ನೆಪದಲ್ಲಿ ಬಾಲಕಿಯನ್ನು ತಾವಿದ್ದಲ್ಲಿಗೆ ಕರೆಸಿಕೊಂಡಿದ್ದರು. ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಖಾಸಗಿ ವಿಡಿಯೋವನ್ನು ಆಕೆಗೆ ತೋರಿಸಿ, ತಮ್ಮ ಜತೆಗೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದರು. ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದರು. ನಂತರ ಆರೋಪಿಗಳು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಬಾಲಕಿ ಬಳಿ ಹಣಕ್ಕೆ ಬೇಡಿಕೆಯಿಟ್ಟು, ಆ ವಿಡಿಯೋವನ್ನು ತಮ್ಮ ಪರಿಚಿತರಿಗೆ ಕಳುಹಿಸಿದ್ದರು. ಹೀಗಾಗಿ ವಿಡಿಯೋ ಲೀಕ್ ಆಗಿತ್ತು. ಇತ್ತೀಚೆಗೆ ಪರಿಚಿತರ ಮೂಲಕ ಈ ವಿಚಾರ ಬಾಲಕಿಯ ತಾಯಿಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಮಗಳ ಬಳಿ ಪ್ರಶ್ನಿಸಿದಾಗ ಆಕೆ ನಡೆದ ಸಂಗತಿ ವಿವರಿಸಿದ್ದಳು.
ಏ.6ರಂದು ಬಾಲಕಿಯ ತಾಯಿ ಯಲಹಂಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯ ದೃಢ ಆರೋಪಿಯು ಬಾಲಕಿ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿರುವುದು ದೃಢಪಟ್ಟಿದೆ. ಇದನ್ನು ಆರೋಪಿಯ ಸ್ನೇಹಿತರು ಕದ್ದು ವಿಡಿಯೋ ಮಾಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Varthur Prakash: ವರ್ತೂರು ಪ್ರಕಾಶ್ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.