Watch Video: ನಿರ್ಮಾಣ ಹಂತದ ಭಾರತದ ಮೊದಲ “ವರ್ಟಿಕಲ್ ಲಿಫ್ಟ್ ಪಂಬನ್ ರೈಲ್ವೆ ಸೇತುವೆ”
ಆ್ಯನಿಮೇಟೆಡ್ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
Team Udayavani, Dec 29, 2022, 2:58 PM IST
ಚೆನ್ನೈ: ಭಾರತೀಯ ರೈಲ್ವೆ ಇಲಾಖೆ ಭಾರತದ ಮೊದಲ ವರ್ಟಿಕಲ್ ಸೀ ಲಿಫ್ಟ್ ಸೇತುವೆಯನ್ನು ರಾಮೇಶ್ವರಂನ ಪಂಬನ್ ನಲ್ಲಿ ನಿರ್ಮಿಸುತ್ತಿದ್ದು, ಈಗಾಗಲೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಈ ವಿಶಿಷ್ಟ ಸೇತುವೆಯ ವಿಡಿಯೋ ತುಣಕನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಬ್ಯಾಂಕಾಕ್-ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನಿಗೆ ಗೂಸಾ; ವೈರಲ್ ವಿಡಿಯೋ
ರೈಲ್ವೆ ಇಲಾಖೆ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆಯನ್ನು ನಿರ್ಮಿಸುತ್ತಿದೆ. ಪಂಬನ್ ಸೇತುವೆ ಕಾರ್ಯ ಪೂರ್ಣಗೊಂಡಲ್ಲಿ ತಮಿಳುನಾಡಿನ ರಾಮೇಶ್ವರಂನಿಂದ ಧನುಷ್ಕೋಡಿಗೆ ಸಂಪರ್ಕ ಕಲ್ಪಿಸಿದಂತಾಗಲಿದೆ.
Heritage meets technology.#PambanBridge connecting Rameswaram. pic.twitter.com/nN0evsefUV
— Ashwini Vaishnaw (@AshwiniVaishnaw) December 28, 2022
ವರ್ಟಿಕಲ್ ಲಿಫ್ಟ್ ಸೇತುವೆ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, ಸೇತುವೆ ಪೂರ್ಣಗೊಂಡ ನಂತರ ಹೇಗೆ ಕಾರ್ಯಾಚರಿಸಲಿದೆ ಎಂಬ ಆ್ಯನಿಮೇಟೆಡ್ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
26 ಸೆಕೆಂಡುಗಳ ವಿಡಿಯೋದಲ್ಲಿ ವರ್ಟಿಕಲ್ ಲಿಫ್ಟ್ ಸೇತುವೆ ಕಾರ್ಯಾಚರಿಸುವ ರೀತಿಯನ್ನು ಬಿಂಬಿಸಲಾಗಿದೆ. ರೈಲ್ವೆ ಸೇತುವೆಯ ಮಧ್ಯಭಾಗದಲ್ಲಿ ನಿರ್ಮಿಸಿರುವ ಲಿಫ್ಟ್ ಬೋಟುಗಳು ಬಂದಾಗ ಹೇಗೆ ತೆರೆದುಕೊಳ್ಳಲಿದೆ ಎಂಬುದು ವಿಡಿಯೋದಲ್ಲಿದೆ.
ರಾಮೇಶ್ವರದ ಪಂಬನ್ ಸೇತುವೆ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಈ ಸೇತುವೆ ಕಾಮವಾಗಿ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಆದರೆ ಸೇತುವೆ ಕಾಮಗಾರಿ ನಿಖರವಾಗಿ ಯಾವ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂಬ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಪತ್ನಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Kerala: ಸರಣಿ ಅಪಘಾತ… ಅಪಾಯದಿಂದ ಪಾರಾದ ಕೇರಳ ಸಿಎಂ: ವಿಡಿಯೋ ವೈರಲ್
Challenge; ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.