ಮಾರ್ಚ್ 3ರಂದು ಅಮಿತ್ ಶಾರಿಂದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ: ಸಚಿವ ಸುಧಾಕರ್
Team Udayavani, Feb 25, 2023, 10:39 PM IST
ದೇವನಹಳ್ಳಿ: ‘ರಾಜ್ಯದ ನಾಲ್ಕು ದಿಕ್ಕುಗಳಲ್ಲಿಯೂ ಬಿಜೆಪಿ ಪಕ್ಷದಿಂದ ಮಾರ್ಚ್ 3 ರಂದು ವಿಜಯ ಸಂಕಲ್ಪ ಯಾತ್ರೆ ಪ್ರಾರಂಭವಾಗಲಿದ್ದು, ದೇವನಹಳ್ಳಿಯ ಆವತಿ ಗ್ರಾಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಪಟ್ಟಣದ ಅನಂತ ನಿಕೇತನ ಶಾಲಾ ಆವರಣದಲ್ಲಿ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಾಡಪ್ರಭು ಕೆಂಪೆಗೌಡರ ಪುರ್ವಜರ ನಾಡದ ಆವತಿಯಿಂದ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭವಾಗಲಿದ್ದು, ಅದೇ ರೀತಿ ಚಾಮರಾಜ ನಗರದ ಮಹದೇಶ್ವರ ಬೆಟ್ಟ, ಸಂಗೋಳ್ಳಿ ರಾಯಣ್ಣರ ನಾಡದ ಬೆಳಗಾವಿ, ಬೀದರ್‌ನ ಅನುಭವ ಮಂಟಪದಿಂದ ಒಟ್ಟು ನಾಲ್ಕು ರಥ ಸಾಗಲಿದೆ’ ಎಂದರು.
‘ದೇವನಹಳ್ಳಿ ಕ್ಷೇತ್ರದ ಒಟ್ಟು 292 ಬೂತ್‌ಗಳನ್ನು ಗೆದ್ದರೇ ರಾಜ್ಯವನ್ನು ಗೆದಂತೆ, ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಹುರುಪು ಹೆಚ್ಚಾಗಿದ್ದು, ವಿವಿಧ ವರದಿಗಳ ಆಧಾರದಲ್ಲಿ ಈಗಾಗಲೇ ನಾವು ಈ ಕ್ಷೇತ್ರಗಳನ್ನು ಗೆದಿದ್ದೇವೆ. ಬಿಜೆಪಿಯ ತತ್ವ ಸಿದ್ಧಾಂತಕ್ಕೆ ಒಪ್ಪಿ ನೂರಾರು ಪ್ರಬಲ ರಾಜಕೀಯ ಮುಖಂಡರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ’ ಎಂದರು.
‘ಕೋವಿಡ್ ಸಮಯದಲ್ಲಿ ಕೋಟ್ಯಾಂತರ ಜನರಿಗೆ ಲಸಿಕೆ ನೀಡಿ ಜೀವ ಉಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಕರೋನಾ ಸಂಕಟದಿಂದ ಸಾಕಷ್ಟು ರಾಷ್ಟ್ರಗಳು ಇನ್ನೂ ಆರ್ಥಿಕವಾಗಿ ಸುಧಾರಣೆಯಾಗಿಲ್ಲ. ಆದರೆ ಭಾರತದ ಆರ್ಥಿಕತೆ ವೇಗದಿಂದ ಮುನ್ನುಗುತ್ತಿದೆ. ಮುದ್ರಾ ಯೋಜನೆಯಡಿಯಲ್ಲಿ 2.75 ಲಕ್ಷ ಕೋಟಿ ಸಾಲ ನೀಡಲಾಗಿದೆ. ಜನಧನ್ ಮೂಲಕ ಬ್ಯಾಂಕ್ ಖಾತೆ ತೆರೆದಿದೆ’ ಎಂದು ತಿಳಿಸಿದರು.
‘ಸರ್ಕಾರದ ಉಜ್ವಲ, ಜಲಜೀವನ, ರೈತ ವಿದ್ಯಾಸಿರಿ, ಕಷಿ ಸನ್ಮಾನ್ ಯೋಜನೆ ಸೇರಿದಂತೆ ಎಲ್ಲ ಫಲಾನುಭವಿಗಳ ಕುರಿತು ಮಾಹಿತಿ ಪಡೆದು, ಅವರಿಗಾಗಿಯೇ ದೇವನಹಳ್ಳಿಯಲ್ಲಿ ವಿಶೇಷ ಸಮಾವೇಶ ಮಾಡೋಣ, ಕ್ಷೇತ್ರದಲ್ಲಿರುವ 30 ಪಂಚಾಯಿತಿ, 2 ಪುರಸಭೆಗಳಲ್ಲಿ ಚುನಾವಣಾ ಪೂರ್ವದಲ್ಲಿ ಪ್ರವಾಸ ಮಾಡುತ್ತೇನೆ’ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ‘ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷವೂ ಬಲಿಷ್ಠವಾಗಿದೆ. ರಾಜ್ಯದ 4 ಕಡೆಯಲ್ಲಿಯೂ ವಿಜಯ ಸಂಕಲ್ಪ ಯಾತ್ರೆಗೆ ಏಕ ಕಾಲದಲ್ಲಿ ಚಾಲನೆ ದೊರೆಯಲಿದೆ. ಕೇಂದ್ರ ಗೃಹ ಸಚಿವರು ಭಾಗವಹಿಸುವ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಕಾರ್ಯಕರ್ತರು ಭಾಗಿಯಾಗುವಂತೆ ಯೋಜನೆ ರೂಪಿಸಬೇಕು’ ಎಂದರು.
ಪಕ್ಷದ ಮುಖಂಡ ಚೇತನ್ ಗೌಡ ಮಾತನಾಡಿ, ‘ಈಗಾಗಲೇ ಪಕ್ಷದ ಸಂಪರ್ಕದಲ್ಲಿಷ್ಟು ಹಿರಿಯ, ಪ್ರಭಾವಿ ರಾಜಕೀಯ ಮುಖಂಡರು ಇದ್ದಾರೆ. ಚುನಾವಣೆಯ ಮುನ್ನವೇ ಎಲ್ಲರೂ ಪಕ್ಷ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ನನ್ನ ಬಳಿ 15 ಸಾವಿರ ಮತಗಳನ್ನು ಪಕ್ಷಕ್ಕೆ ಹಾಕಿಸುವ ಸಾಮರ್ಥ್ಯವಿದ್ದು, ಇನ್ನಷ್ಟು ನಾಯಕರು ಸೇರ್ಪಡೆಯಿಂದ ನೂರಾನೆ ಬಲ ಬರಲಿದೆ’ ಎಂದರು.
ಪಕ್ಷದ ಜಿಲ್ಲಾ ಉಸ್ತುವಾರಿ ಪುಪ್ಪ ಶಿವಕುಮಾರ್, ಮಾಜಿ ಶಾಸಕರಾದ ಚಂದ್ರಣ್ಣ, ಪಿಳ್ಳಮುನಿಶಾಮಪ್ಪ, ತಾಲ್ಲೂಕು ಅಧ್ಯಕ್ಷ ಸುಂದರೇಶ್, ಪ್ರಧಾನ ಕಾರ್ಯದರ್ಶಿ ನಿಲೇರಿ ಮಂಜುನಾಥ್, ಮುಖಂಡರಾದ ದೇಸು ನಾಗರಾಜ್, ಕಾಂತರಾಜು ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಯುವ ಮುಖಂಡರು ಉಪಸ್ಥಿತಿದ್ದರು.
ಕಾಂಗ್ರೆಸ್ ಸುಳ್ಳಿನ ಭರವಸೆ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರಿಗೆ ಸೂಕ್ತವಾಗಿ ವಿದ್ಯುತ್ ನೀಡಲು ಸಾಧ್ಯವಾಗದೇ ಇರುವವರು ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಕನಸ್ಸಿನ ಮಾತು. 24 ಸಾವಿರ ಕೋಟಿ ವೆಚ್ಚವಾಗುವ ಗೃಹ ಲಕ್ಷ್ಮೀ ಯೋಜನೆ ಒಂದು ಸುಳ್ಳಿನ ಕತೆಯಾಗಿದೆ. ಮತ ಸೆಳೆಯಲು ಮೋಸದ ತಂತ್ರಗಾರಿ ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ ಪ್ರಣಾಳಿಕೆಯ ಅಂಶಗಳ ಕುರಿತು ವಾಟ್ಸ್ ಆಫ್, ಇ-ಮೇಲ್, ಸಲಹಾ ಪೆಟ್ಟಿಗೆಗಳ ಮೂಲಕ ಮತದಾರರಿಂದ ಮಾಹಿತಿ ಪಡೆಯಲಿದ್ದೇವೆ. ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಆದರ್ಶ ಪ್ರಣಾಳಿಗೆ ಸಿದ್ಧ ಮಾಡುತ್ತೇವೆ’ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
ಶಾಸಕರಿಂದ ಬೈಯಪ್ಪ ಅಧಿಕಾರ ದುರುಪಯೋಗ
‘ಶಾಸಕ ನಿಸರ್ಗ ನಾರಾಯಣಸ್ವಾಮಿ ತಾಲ್ಲೂಕಿಗೆ ದ್ರೋಹ ಬಗೆದಿದ್ದಾರೆ. ಬಡವರ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ಬೈಯಪ್ಪ ಅಧ್ಯಕ್ಷರಾಗಿದ್ದ ಸಮಯದಲ್ಲಿ 10 ನಿವೇಶನಕ್ಕೆ ಅನುಮತಿ ಪಡೆದು 20 ನಿವೇಶನ ಮಾರಾಟ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಇಂತಹ ನೀಚ ರಾಜಕಾರಣಿಯನ್ನು ಕ್ಷೇತ್ರ ಬಿಟ್ಟು ಹೊಡಿಸಬೇಕು’ ಎಂದುರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಖಜಾಂಜಿ ಎ.ಕೆ.ಪಿ.ನಾಗೇಶ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.