ಖೋಟಾ ನೋಟು ಜಾಲಕ್ಕೆ ಹಳ್ಳಿಗಳೇ ಗುರಿ
Team Udayavani, Jan 7, 2023, 7:05 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಕಾವು ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಖೋಟಾ-ನೋಟಿನ ಹಾವಳಿ ಶುರುವಾಗಿದ್ದು ಹೊರ ರಾಜ್ಯ ಗಳಿಂದ ಖೋಟಾ ನೋಟುಗಳು ಕರ್ನಾಟಕವನ್ನು ಪ್ರವೇಶಿಸುತ್ತಿವೆ.
ತಮಿಳುನಾಡು, ಆಂಧ್ರ, ಉತ್ತರ ಭಾರತದ ಕೆಲವೆಡೆ ಕಲರ್ ಪೇಪರ್ ಬಳಸಿ ಖೋಟಾ-ನೋಟು ತಯಾರಿಸಿ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಚಲಾವಣೆಗೆ ಬಿಡುತ್ತಿರುವುದು ಆತಂಕ ಮೂಡಿಸಿ ದ್ದು, ಜನರು 2 ಸಾವಿರ ರೂ., 500 ರೂ. ನೋಟುಗಳ ವಹಿವಾಟು ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ 500 ರೂ. ಮುಖ ಬೆಲೆಯ 4.5 ಲಕ್ಷ ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿ ಸ ಲಾ ಗಿತ್ತು. ಇದರ ಬೆನ್ನಲ್ಲೇ ಗುರುವಾರ 2 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ 1.28 ಕೋಟಿ ರೂ. ಖೋಟಾ ನೋಟು ತಮಿಳುನಾಡಿನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ದಾಳಿ ನಡೆಸಿ ತಮಿಳು ನಾಡಿನ ಪಿಚ್ಚಮುತ್ತು (48), ನಲ್ಲಕಣಿ (53), ಸುಬ್ರಹ್ಮಣ್ಯನ್ (60) ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಹಲವು ಖೋಟಾ ನೋಟು ಚಲಾವಣೆ ಪ್ರಕರಣಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಜನವರಿ 3
-ಬಿ.ಸಿ. ರೋಡ್‌ನ ನಿಜಾಮುದ್ದೀನ್, ರಜೀಮ್ ಅಲಿಯಾಸ್ ರಾಫಿ ಬಂಧನ
– 500 ರೂ. ಮುಖ ಬೆಲೆಯ 4.5ಲಕ್ಷ ಖೋಟಾ ನೋಟು ಜಪ್ತಿ
– ಬೆಂಗಳೂರಿನಿಂದ ಡ್ಯಾನಿಯಲ್ ಎಂಬಾತನಿಂದ ಪಡೆದು, ಮಂಗಳೂರಿನಲ್ಲಿ ಚಲಾವಣೆಗೆ ಯತ್ನ.
2022ರ ಡಿ.14
– ನಕಲಿ ನೋಟುಗಳನ್ನು ಮುದ್ರಿಸಿ, ಅಸಲಿ ನೋಟುಗಳೆಂದು ನಂಬಿಸಿ ಚಲಾವಣೆ
– ಬೆಂಗಳೂರಿನಲ್ಲಿ ಇಬ್ಬರು ನೈಜೀರಿಯನ್ನರ ಬಂಧನ
-1.10 ಕೋಟಿ ರೂ. ಮೌಲ್ಯದ 500 ಮುಖಬೆಲೆಯ 10 ಸಾವಿರ, 100 ಡಾಲರ್ ಮುಖಬೆಲೆಯ 708 ಅಮೆರಿಕದ ನಕಲಿ ಕರೆನ್ಸಿ ಜಪ್ತಿ
– ಅಸಲಿ ನೋಟುಗಳಿಗೆ ನಕಲಿ ನೋಟುಗಳ ವಿನಿಮಯ ಮಾಡು ತ್ತಿದ್ದ ಆರೋಪಿಗಳು
2022ರ ಅ.12
– ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಬಳಿ ಶಿವಾನಂದ, ಕಲ್ಲಯ್ಯ, ಗುರುರಾಜ್ ಸೆರೆ
-200 ಹಾಗೂ 100ರ ಮುಖಬೆಲೆಯ 73 ಖೋಟಾ ನೋಟು ಜಪ್ತಿ
2022ರ ಸೆ.9
-ಬೆಂಗಳೂರಿನಲ್ಲಿ ಖೋಟಾ ನೋಟುಗಳ ತಯಾರಿಕಾ ಜಾಲದಲ್ಲಿ ತೊಡಗಿದ್ದ ಕೇರಳ ಮೂಲದ ಪ್ರದೀಪ್, ಸನಲ್ ಬಂಧನ
– 3.16 ಲಕ್ಷ ರೂ. ಮೌಲ್ಯದ 500 ಮತ್ತು 2 ಸಾವಿರ ರೂ ಮುಖ ಬೆಲೆಯ ಖೋಟಾ ನೋಟು ಜಪ್ತಿ
– ಛಾಪಾ ಕಾಗದ (ಬಾಂಡ್ ಪೇಪರ್)ಗಳ ಮೇಲೆ 500 ಮತ್ತು 2 ಸಾವಿರ ಮುಖ ಬೆಲೆಯ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿ ಅಸಲಿ ನೋಟಿಗೆ ಬದಲಾವಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.